ಕನ್ನಡದ ತಾಂತ್ರಿಕ ಶಬ್ದಗಳು

ಕನ್ನಡದ ತಾಂತ್ರಿಕ ಶಬ್ದಗಳು

ತಾಂತ್ರಿಕವಾದ ಇಂಗ್ಲೀಷ್ ಶಬ್ದಗಳನ್ನು ಕನ್ನಡೀಕರಣ ಮಾಡುವಾಗ ಸಂಸ್ಕೃತದ ಮೊರ ಹೋಗುತ್ತೇವೆ, ತಪ್ಪಲ್ಲ. ಆದರೆ ಸಂಸ್ಕೃತ ಕನ್ನಡವನ್ನು ತುಂಬ ಭಾರ ಮಾಡುತ್ತದೆ ಮತ್ತು ಮಾತಾಡುವಾಗ ಅಡ್ಡಬರುತ್ತದೆ, ಆದ್ದರಿಂದ ನಾವು ಮಾತಾಡುವಾಗ ಭಾಷಾಂತರಿಸಿದ ಸಂಸ್ಕೃತವನ್ನು ಉಪಯೋಗಿಸದೇ ಮೂಲ ಇಂಗ್ಲೀಷನ್ನೇ ಉಪಯೋಗಿಸುತ್ತೇವೆ. ಕನ್ನಡದಲ್ಲಿ ಸಂಸ್ಕೃತವನ್ನಾಗಲೀ, ಇಂಗ್ಲೀಷನ್ನಾಗಲೀ, ಉರ್ದು, ಪಾರ್ಸಿ, ಎನ್ನಾವುದೇ ಭಾಷೆಯನ್ನಾಗಲಿ ಉಪಯೋಗಿಸುವುದರ ವಿರುದ್ಧವೇನಲ್ಲ ನಾನು. ಹಾಗೆ ನೋಡಿದರೆ ಇಂಗ್ಲೀಷ್ ಭಾಷೆಯಲ್ಲಿ ಮೂಲ ಇಂಗ್ಲೀಷ್ ಪದಗಳು ಎಷ್ಟಿವೆ? ಆದರೂ ತಾಂತ್ರಿಕ ಪದಗಳಿಗೆ ಹೊಸದಾಗಿ ಕನ್ನಡ ಪದಗಳನ್ನು ಹುಟ್ಟುಹಾಕುವ, ಸಂಪದದಿಂದ ಕಡ ತಂದು ಒಟ್ಟು ಮಾಡುವ ಯೋಚನೆ ನನದು. ಹೊಸಪದಗಳು ಇಂಗ್ಲೀಷಿನ ಭಾಷಾಂತರವಾಗ ಬೇಕಿಲ್ಲ, ಮೂಲಕ್ಕೆ ಹತ್ತಿರ ಅರ್ಥ ಬಂದರಾಯಿತು.

B:

Blog: ಜಾಲಜಗುಲಿ = ಜಗುಲಿ (ಬ್ಲಾಗ್ - ಊಟವಾದ ಮೇಲೆ ಮನೆ ಮುಂದೆ ಜಗುಲಿಯಲ್ಲಿ ಕೂತು ದಿನ ಆಗುಹೋಗುಗಳನ್ನು ಹರಟಿದಂತೆ ಅಲ್ಲವೇ?),
C:
CD (Compact Disc): ಒತ್ತಟ್ಟೆ (ಒತ್ತಾಗಿರುವ ತಟ್ಟೆ), ಬಿಲ್ಲೆ
Chat room: ಹರಟೆಕಟ್ಟೆ
Computer: ಎಣಿ (ಎಣಿಸುವುದು ಯಾವುದೋ ಅದು ಎಣಿ), ಸಂಸ್ಕೃತ: ಗಣಕಯಂತ್ರ!!
E:
e-mail: ಮಿಂಚಂಚೆ, ಮಿನ್ನೋಲೆ 
H:
Hardware: ಗಟ್ಟಿಮಾಲು

L:
Laptop: ಪುಟ್ಟೆಣಿ (ಪುಟ್ಟ ಎಣಿ). Laptop ಸಣ್ಣ ಕಂಪ್ಯೂಟರ್ ತಾನೆ? ಗುರುಪ್ರಸಾದ್ ಕಾಗಿನೆಲೆ ತಮ್ಮ ’ಬಿಳಿಯ ಚಾದರ’ ಕಾದಂಬರಿಯಲ್ಲಿ ’ತೊಡೆಮೇಲಿಗ’ ಅಂತ ಕರೆದಿದ್ದಾರೆ.
Link: ಕೊಂಡಿ, ಎಳೆ

M:

Mobile: ಜಂಗಮ
P:
Palmtop: ಕೈಯೆಣಿ (ಕೈ ಎಣಿ)
Programme: ಕಾಯಕ
S:
Satellite Navigator (GPS): ಬಾನ್ಸೂಚಿ, ದಾರಿಣಿ (ದಾರಿ ತೋರಿಸುವ ಯಂತ್ರ)
Software: ಮೆದುಮಾಲು
W:
Web: ಜಾಲ, ಬಲೆ
Rating
No votes yet

Comments