ಕನಸು

ಕನಸು

ಮಗು ನಿದ್ದೆಯಲ್ಲಿ ಚೀರಿದಾಗ ಯಾವುದೊ ಕೆಟ್ಟ ಕನಸು ಇರಬೇಕು ಎನ್ನುವುದು ನಕ್ಕಾಗ ಯಾವುದೊ ಒಳ್ಳೆಯ ಕನಸು ಕಾಣುತ್ತಿದೆ ಎಂದು ಮನೆಯಲ್ಲಿ ಇರುವ ಹಳೇ ತಲೆಗಳು ಹೇಳುವುದು ವಾಡಿಕೆ. ಕನಸು ಹುಟ್ಟಿದ ಮಗುವಿನಿಂದ ಇನ್ನೇನು ಕೊನೆ ಉಸಿರು ಎನ್ನುವವರೆಗು ಯಾವದೇ ಮಾನವನ ಜೊತೆಯಲ್ಲಿ ನಮಗೆ ಅರಿವಿಲ್ಲದಂತೆ ಮಸುಕು ಮಸುಕಾಗಿ ಎಂದು ಮರೆಯಲಾರದಂತೆ ,ನಿಜ ಜೀವನದಲ್ಲಿ ನಡೆಯುತ್ತಿದೆ ಎನ್ನುವಂತೆ ಅಕಾಶದ ಎತ್ತರಕ್ಕೆ ಹಾರಿದಂತೆ ಪಾತಳಕ್ಕೆ ಧಡಕ್ಕನೆ ಎಸೆದಂತೆ ನಮಗೆ ತಿಳಿಯದ ಹೊಸ ಹೊಸ ಜನರ ಜಾಗದ ಜೊತೆ ನಮ್ಮನ್ನು ಒಂದು ಸಾರಿ ಜಾರಿಸಿ ಮತ್ತೆ ನಮ್ಮನ್ನು ವಾಸ್ತವ ಜಗತ್ತಿಗೆ ಕರೆತರುವ ಅದ್ಭುತ ವಿಸ್ಮಯ ಪ್ರಪಂಚವೆ ಕನಸು. ಕನಸು ನಿಜವೋ ಅಥಾವ ಸುಳ್ಳೋ ಎಂಬ ನಿಜ ಮಾತ್ರ ಇಂದಿನವರೆಗು ಯಾವ ಮಹಾ ಮಹಿಮರಿಗೊ ಸಹ ತಿಳಿದಿಲ್ಲ ಅದರೆ ಒಂದು ಮಾತ್ರ ಸತ್ಯ ,ನಮ್ಮ ಮನಸಿನ ಶಕ್ತಿ ಮಾತ್ರ ನಾವು ವಾಸ್ತವದಲ್ಲಿ ಇರುವ ಸಮಯಕ್ಕಿಂತ ನಾವು ನಿದ್ರಾಹೀನರಾಗಿರುವಾಗ ಹೇಚ್ಚು ಪ್ರಖರತೆಯಿಂದ ಕೆಲಸ ಮಾಡುತ್ತದೆ. ನನ್ನ ಕನಸಿನ ಅನುಭವ ನನ್ನ ಜೀವನದಲ್ಲಿ ನಾನು ಎಂದೂ ಮರೆಯದ ಮರೆಯಲು ಅಗದ ಅನುಭವ ಯರಾದರು ಹಿರಿಯರನ್ನುಏನಿದು ಕನಸು ಎಂದರೆ ಅವರಿಗೆ ತಿಳಿದಂತೆ ನಾವು ವಾಸ್ತವದಲ್ಲಿ ನೋಡಿದ ಮಾಡಿದ ಕೇಳಿದ ಘಟನೆ ನಮ್ಮ ಮನಸ್ಸಿನ ಯಾವುದೋ ಭಾಗದಲ್ಲಿ ಕುಳಿತು ಅಚ್ಚಾಗಿ ನಾವು ಮರೆತು ಮತ್ತೇ ಯಾವುದೊ ಸಮಯ ನಮ್ಮ ನಿದ್ರಾವಸ್ತೆಯಲ್ಲಿ ಮತ್ತೊಮ್ಮೆ ಮರುಕಳಿಸಿ ಬರುವುದೇ ಕನಸು ಎನ್ನುತ್ತಾರೆ. ಅದರೆ ನನ್ನ ಅನುಭವವೆ ಬೇರೆ .ನಾನು ಒಬ್ಬ ಒಳ್ಳೆಯ ಬರಹಗಾರನಲ್ಲ. ಅದರೆ ನನ್ನ ಸ್ನೇಹಿತರ ಪ್ರಕಾರ ಒಳ್ಳೆಯ ಅಂದರೆ ಪರವಾಗಿಲ್ಲ ಎನ್ನುವ ವ್ಯಾಪಾರಿ .ನಮ್ಮ ಕೆಲಸ ಹೇಗೆ ಎಂದರೆ ನಾವು ಹೇಗೆ ಶ್ರಮ ಪಡುತ್ತೇವೆಯೊ ಹಾಗೆ ಅದರ ಪ್ರತಿಪಲ. ಒಮ್ಮೆ ಇದ್ದಕ್ಕಿದ್ದಂತೆ ನಾವು ಖರೀದಿ ಮಾಡಿದ ಬಿಲ್ಲುಗಳು ಇದ್ದ ಫೈಲ್ ನಮ್ಮ ಅಂಗಡಿಯಿಂದ ಕಾಣೆಯಾಯಿತು ನಮ್ಮ ವ್ಯವಹಾರದಲ್ಲಿ ನಮಗೆ ಅದು ಅತಿ ಮುಖ್ಯವಾದದ್ದು. ನಾವು ಅದನ್ನು ಸತತವಾಗಿ ನಮ್ಮ ಮತ್ತು ನಮ್ಮಲೆಕ್ಕ ನೋಡುವ ಅಡಿಟರ್ ಅವರ ಬಳಿ ಒಂದು ತಿಂಗಳುಗಳ ಕಾಲ ಹುಡುಕಿ ಇನ್ನು ಇದರಿಂದ ಪ್ರಯೋಜನ ಇಲ್ಲ ಎಂದು ಸುಮ್ಮನಾದೆವು . ಅಗಲೇ ನನಗೆ ಅದನ್ನು ಹೇಗೆ ಹುಡುಕುವುದು ಎಂದು ತುಂಬಾ ಯೋಚಿಸಿ ಮನೆಗೆ ಬಂದು ಅಂದು ರಾತ್ರಿ ಮಲಗಿದಾಗ ನನಗೆ ನಮ್ಮ ಅಡಿಟರ್ ಅವರ ಅಫೀಸಿಗೆ ನನ್ನ ಅಣ್ಣನ ಮಗನ ಜೊತೆ ಹೋದಂತೆ ಯಾರೊ ಒಬ್ಬರು ನನ್ನ ಪರಿಚಯದ ಸ್ನೇಹಿತ ಎದುರಿಗೆ ಬಂದತೆ ನಾವು ಒಳಗೆ ಹೋದಂತೆ ನಾನು ನಮ್ಮ ಲೆಕ್ಕದ ಚೀಲದೀಂದ ನಮ್ಮ ಫೈಲನ್ನು ತೆಗೆದಂತೆ ಅಯಿತು. ನನಗೆ ಎಚ್ಚರ ಅದಾಗ ಅಗಲೇ ಬೆಳಕು ಬಂದಿತ್ತು ನಾನು ಬೇಗನೆ ರಡಿಯಾಗಿ ಅವರ ಕಛೇರಿಗೆ ಹೋಗಿ ಮತ್ತೋಮ್ಮೆ ಲೆಕ್ಕದ ಚೀಲವನ್ನು ತೆಗೆದು ನೋಡಿದೆ ಅದರೆ ಅಲ್ಲಿ ನನ್ನ ಪೈಲ್ ಮಾತ್ರ ಇರಲಿಲ್ಲ ಬೇಸರದಿಂದ ಮತ್ತೆ ಮನೆಗೆ ಬಂದುಬಿಟ್ಟೆ ಕೆಲವು ದಿನಗಳ ನಂತರ ಅ ಸಂಗತಿ ಮರೆತು ಹೋಯಿತು. ಒಮ್ಮೆ ನಾನು ಯಾವುದೋ ಒಂದು ವಿಚಾರ ಮಾತನಾಡಲು ನಮ್ಮ ಅಡಿಟರ್ ಅವರ ಬಳಿಗೆ ಹೊರಟೆ ನನ್ನ ಜೊತೆ ಆ ದಿನ ನನ್ನ ಅಣ್ಣನ ಮಗನು ಯಾವುದೋ ಕಾರಣಕ್ಕೇ ಬಂದಿದ್ದ ನಾನು ಅಫೀಸಿನ ಒಳಗೆ ಬರುವುದಕ್ಕು ನಮ್ಮ ಪಕ್ಕದ ಅಂಗಡಿಯ ನನ್ನ ಸ್ನೆಹಿತ ಹೊರಕ್ಕೆ ಬರುವುದಕ್ಕು ಸರಿ ಹೋಯಿತು ಅಗ ನನ್ನ ಮನಸ್ಸಿನ ಯಾವುದೊ ಮೂಲೆಯಲ್ಲಿ ಅಡಗಿದ್ದ ಅಸೆ ನನ್ನ ಕನಸು ಚಿಗುರೊಡೆಯಿತು ನಾನು ಹೋದವನೆ ನನ್ನ ಚೀಲ ತೆಗೆದು ನೋಡಿದೆ ನನ್ನ ಕಣ್ಣನ್ನು ನಾನು ನಂಬದಂತೆ ತಟಸ್ಥನಾದೆ ನಾವು ಸುಮಾರು ಎರಡು ತಿಂಗಳಿಂದ ಹುಡುಕುತ್ತಿದ್ದ ಅಫೈಲ್ ಕಣ್ಣ ಮುಂದೆ ಕಾಣುತ್ತಿದೆ . ನಮ್ಮ ಅಡಿಟರ್ ಅವರಿಗೆ ಹೇಳಿದೆ ನನಗೆ ಕನಸುಬಿದ್ದದ್ದು ಅದೇರೀತಿ ನನ್ನ ಕನಸಿನ ಲೋಕ ನೀಜವಾಗಿದ್ದು ನೆನದರೆ ಈಗಲೊ ನನ್ನ ಮನಸ್ಸು ಯಾವುದೋ ಅದ್ಬುತ ನನ್ನ ಜೀವನದಲ್ಲಿ ನಡೆದಂತೆ ಮನಸ್ಸಿನಲ್ಲಿ ಸುಳಿದಾಡುತ್ತಿದೆ.

Rating
No votes yet