ರಸ್ತೆಗಿಂತ platform ಚೆಂದ

ರಸ್ತೆಗಿಂತ platform ಚೆಂದ

ಅಕ್ಕಪಕ್ಕದ ಬಸ್ಸು ಕಾರು ಮೋಟರ್ ಸೈಕಲ್ಲುಗಳ ಹೊಗೆ ಕುಡಿಯುತ್ತ ಫ್ಲೈ ಓವರ್ ಹತ್ತಿದ ಮೋಟರ್ ಸೈಕಲ್ ಸವಾರನಿಗೆ ಕಂಡದ್ದು ಸ್ನೇಹಿತರೊಬ್ಬರು ನೆನಪಿಸಿದ್ದ 8th wonder. ಸರಿಯಾಗಿ ಫ್ಲೈ ಓವರ್ ಮಧ್ಯದಲ್ಲೊಂದು ಸಿಗ್ನಲ್ - ಎಲ್ಲುಂಟು ಎಲ್ಲಿಲ್ಲ?
ಆಗಲೇ ಸಿಗ್ನಲ್ಲಿಗೆ ಮತ್ತೊಂದು ಹೆಸರಿಡಬೇಕಾಗಿತ್ತು ಅನ್ನಿಸಿದ್ದು - ಹೊಗೆ ಕುಡಿಸುವ ಕೇಂದ್ರ ಎಂಬುದಾಗಿ. ಸಿಗ್ನಲ್ ಬಂದರೆ ಸಾಕು ನಿಂತ ಜಾಗದಿಂದ ಕದಲಲು ಆಗದೆ ಬಲವಂತವಾಗಿ ಹೊಗೆ ಕುಡಿಯಬೇಕು ಎಂದು ಗೊಣಗಿಕೊಂಡ.

ಅಲ್ಲಿಂದ ಮುಂದೆ ಹೋಗುವಾಗ ಅಡ್ಡಾದಿಡ್ಡಿ ಓಡಿಸಿಕೊಂಡು ಹೋಗುತ್ತಿರುವ ಆಟೋದವನಿಗೆ ಶಪಿಸಿದ. ಭರ್ರೋ ಎಂದರೂ ಜಟಕಾಗಾಡಿಯಂತೆ ರೋಡು ತುಂಬ ಆಕ್ರಮಿಸಿ ನಡೆಯುವ ಬಿಎಂಟಿಸಿ ಬಸ್ಸಿಗೆ ಬೈಗುಳಗಳ ಸುರಿಮಳೆಗೈದ. ಬಸ್ಸು ಮಾತ್ರ ತನಗೇನೂ ಕೇಳಿಸದಂತೆ ಮತ್ತೆ ಭರ್ರೋ ಎಂದು ಅಡ್ಡಾದಿಡ್ಡಿ ತೆವಳುತ್ತ ಕಪ್ಪು ಹೊಗೆ ಬುಸುಗುಡುತ್ತ ಯಾರಿಗೂ ಜಾಗ ಕೊಡದೆ ನಡೆಯಿತು. ಮೋಟರ್ ಸೈಕಲ್ ಸವಾರನಿಗೆ ಸುಮ್ಮನಿರಲಾದೀತೆ?

"ರಸ್ತೆಗಿಂತ platform ಚೆಂದ" ಎಂದು ಸೈಡಿನಿಂದಲೇ overtake ಮಾಡಿ ಮುಂದೆ ನಡೆದ.

ಸ್ವಲ್ಪ ದೂರ ಹೋದ ನಂತರ ರಸ್ತೆ ಯಾವುದು ಎಂಬುದೂ ಕಾಣದಾಯಿತು. ಎದುರಿಗೆ ಬಂದ ಕಾರು ಬಸ್ಸುಗಳ ಲೈಟು ಕಣ್ಣು ಕುಟುಕಿದವು. ಹೆಲ್ಮೆಟ್ ವೈಪರ್ ತೆಗೆದು ಕಣ್ಣು ಪಿಳುಕಿಸಿದ. ಕಾಣಿಸಿದ್ದು ರಸ್ತೆಯಾಗಿರಲಿಲ್ಲ. ಗುಂಡಿ ತೋಡಿದ ಬಯಲಿನಂತಿತ್ತು.

"ರಸ್ತೆಗಿಂತ platform ಚೆಂದ" ಎಂದು ಸೈಡಿನಿಂದಲೇ ರೋಡು ಮಾಡಿಕೊಂಡು ಕರ್ನಾಟಕ ಸರಕಾರಕ್ಕೆ "ಜೈ" ಎಂದ.

Rating
No votes yet

Comments