ಒಂದು ಕಹಿ ಅನುಭವ

ಒಂದು ಕಹಿ ಅನುಭವ

ನಿನ್ನೆ ಒಂದು ಸೂಪರ್ ಮಾರ್ಕೆಟ್ ಗೆ ಹೋಗಿದ್ದೆ. ಹೆಸರು "ಹೋಮ್ ನೀಡ್ಸ್" ಅಂತ.
ನನ್ನ ಮನೆ ಅಲ್ಲೆ ಹತ್ತಿರ ಇರೋದ್ರಿಂದ, ವಾರಕ್ಕೆ ೨-೩ ಸಲ ಸಾಮಾನು ತರಲು ಹೋಗುತ್ತೇನೆ ಅಲ್ಲಿಗೆ. ಅಲ್ಲಿ ಇರೋ ಕೆಲಸದವರು ಪರ್ವಾಗಿಲ್ಲ ಅನ್ನೋ ಹಾಗೆ ಕನ್ನಡ ಮಾತಾಡ್ಥಾ ಇದ್ರು. ನಾನು ಹೆಚ್ಚು ಪ್ರಶ್ನೆ ಕೇಳ್ತಾ ಇರಲಿಲ್ಲ ಅವರಿಗೆ, ಏನು ಬೇಕೋ ಅದನ್ನು ತಗೊಂಡು ಬರ್ತಾ ಇದ್ದೆ.
ಆದರೆ ನಿನ್ನೆ ನಾನು ಅಮ್ಮನ ಜೊತೆ ಹೋಗಿದ್ದೆ ಅಲ್ಲಿಗೆ. ಅಮ್ಮ ಅಲ್ಲಿದ್ದ ಒಂದು ತೋರಣದ ಬಗ್ಗೆ ವಿಚಾರಿಸೋಕೆ ಹೇಳಿದ್ರು. ನಾನು ಅಲ್ಲಿದ್ದ ಒಬ್ಬ ಕೆಲಸದವನನ್ನು ಕೇಳಿದೆ, ಅವನು ಇನ್ನೊಬ್ಬನನ್ನು ಕರೆದ, ಆ ಕೆಲಸದವನು ಇನ್ನೊಬ್ಬನನ್ನು ಕರೆದ. ೨-೩ ಜನ ಏನೋ ಚರ್ಚೆ ಮಾಡೋಕೆ ಶುರು ಮಾಡಿದ್ರು. ನಂಗೆ ಆಮೇಲೆ ಗೊತ್ತಾಯ್ತು. ಅವರ್ಯಾರಿಗು ನಾನು ಹೇಳಿದ್ದು ಅರ್ಥ ಆಗಿರ್ಲಿಲ್ಲ. :(. ಆ ಅಂಗಡಿಯಲ್ಲಿ ಇದ್ದವರೆಲ್ಲ ಮಲಯಾಳಿಗಳು. ಇಷ್ಟು ದಿನ ಅವರು ನನ್ನ ಹತ್ತಿರ ಮಾತಾಡ್ತಾ ಇದ್ದಿದ್ದು ಬರಿ "ಹೋಗಿ", "ಬನ್ನಿ" ಇತ್ಯಾದಿ ಪದಗಳು ಅಷ್ಟೆ. ಇಲ್ಲಿ ಬಂದು ಇಷ್ಟು ದಿನ ಆದ್ರು ಒಂದು ಭಾಷೆ ಕಲಿಯೋ ಸೌಜನ್ಯ ಇಲ್ಲ ಅವರಿಗೆ.

ಬೆಂಗಳೂರಲ್ಲಿ (ಕರ್ನಾಟಕದ ರಾಜಧಾನಿ) ಬದುಕಲು ಕನ್ನಡದ ಅವಶ್ಯಕತೆಯೇ ಇಲ್ಲ ಅಂತ ಅನ್ನಿಸುತ್ತಿದೆ. ಇಲ್ಲೆ ಹುಟ್ಟಿ ಬೆಳೆದ ಎಷ್ಟೋ ಜನ ಪರ ಭಾಷೆಯವರು ಕನ್ನಡ ಕಲಿಯೋದಿಲ್ಲ, ಏಕೆಂದರೆ ಕನ್ನಡ ಇಲ್ಲದೇ ಬೆಂಗಳೂರಲ್ಲಿ ಆರಾಮಾಗಿ ಜೀವನ ನಡೆಸಬಹುದು.
ಹೀಗೆ ಆದ್ರೆ ಬೆಂಗಳೂರು ಗತಿ ಏನಾಗುತ್ತೋ ಗೊತ್ತಿಲ್ಲ ??

Rating
No votes yet

Comments