ಪುಣ್ಯಕೋಟಿ ದುಷ್ಟ ಆಕಳೇ ? ಹುಲಿಯು ಪಾಪದ ಪ್ರಾಣಿಯೇ ? ಮತ್ತೆ ನಾವೂ, ನೀವೂ ?

ಪುಣ್ಯಕೋಟಿ ದುಷ್ಟ ಆಕಳೇ ? ಹುಲಿಯು ಪಾಪದ ಪ್ರಾಣಿಯೇ ? ಮತ್ತೆ ನಾವೂ, ನೀವೂ ?

ನಮ್ಮ ನಿಮ್ಮೆಲ್ಲರ ಗೋವಿನ ಹಾಡಿನ ಪಠ್ಯ ಇಲ್ಲಿದೆ . http://sampada.net/article/1553
’ಗೋವಿನ ಹಾಡು-ಕನ್ನಡತನವನ್ನು ಎರಕ ಹೊಯ್ದ ಪ್ರತಿಮೆ’ ಎಂಬ ಶ್ರೀ ಕೆ.ವಿ.ಸುಬ್ಬಣ್ಣ ಅವರ ವಿಚಾರವನ್ನು ಇಲ್ಲಿ ಓದಬಹುದು. ( http://sampada.net/article/1552 )
'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನವನ್ನು http://sampada.net/blog/shreekant_mishrikoti/10/07/2006/1923 ಇಲ್ಲಿ ಓದಬಹುದು . ಆಗಲೇ ’ಉಉನಾಶೆ’ ಎಂಬವರು ಒಂದು ಟಿಪ್ಪಣಿ ಹಾಕಿ ’ಗೋವಿನ ಹಾಡಿನ ಬಗ್ಗೆ ಛಂದ ಪ್ರಕಾಶನದ ಜಾನಕಿ ಕಾಲಮ್ ನಲ್ಲಿರುವ "ಹಾರಿ ಪ್ರಾಣವ ಬಿಟ್ಟಿತು" ಲೇಖನ ಓದಿ.ಪುಣ್ಯಕೋಟಿಯನ್ನು ಶೋಷಕರ ಪ್ರತಿನಿಧಿಯನ್ನಾಗಿ, ಹುಲಿಯನ್ನು ಶೋಷಿತರ ಪ್ರತಿನಿಧಿಯನ್ನಾಗಿ ಬಿಂಬಿಸಿದ ಒಂದು ವಿವರಣೆ ಅಲ್ಲಿದೆ." ಎಂದಿದ್ದರು .
ಈಗ ಆ ಪುಸ್ತಕ ನೋಡಿದೆ . ಅಲ್ಲಿನ ಬರಹ ಹೀಗಿದೆ .

ಗೋವಿನ ಹಾಡುನೈತಿಕತೆಯನ್ನು ಹೆಚ್ಚಿಸುತ್ತದೆ ಎಂದು ತಿಳಿದಿದ್ದರು . ಈಗ ನೈತಿಕತೆಯನ್ನು ಹೆಚ್ಚಿಸುವದು ಎಂದರೆ ಶೋಷಣೆಯನ್ನು ಹೆಚ್ಚಿಸುವದು ಅಂತೆ . ಹೊಸ ಚಿಂತನಕಾರರ ಪ್ರಕಾರ ಗೋವಿನ ಹಾಡು ಶೋಷಿತರನ್ನು ಮತಷ್ಟು ಶೋಷಿಸುವ , ಆಳುವವರನ್ನು ಮತ್ತಷ್ಟು ಬಲಪಡಿಸುವ ಪುರೋಹಿತಶಾಹೀ ರಚನೆ ! ....
ಪುಣ್ಯಕೋಟಿ ಎಂದರೆ ಆಳುವ ವರ್ಗ ಪುರೋಹಿತಶಾಹಿಗಳು. ಹುಲಿ ಶ್ರಮಿಸುವ ವರ್ಗ . ಅವರಿಗೆ ಗೋವಿನ ಕುಟೀಲೋಪಾಯಗಳು ಗೊತ್ತಿಲ್ಲ . ಗೋವು ಸತ್ಯದ ಹೆಸರಿನಲ್ಲಿ ಹುಲಿಯನ್ನು ಕೊನೆಗೂ ಕೊಂದು ಹಾಕುತ್ತದೆ . ಇದು ಕ್ರೌರ್ಯ ತನದಿಂದ ಬಲಶಾಲಿಯಾದ ಹುಲಿಯನ್ನು ಹಸುವು ಸತ್ಯವೆಂಬ ಆಯುಧ ಬಳಸಿ ಕೊಲ್ಲುತ್ತದೆ . ಹಸುವಿನ ವ್ಯಂಗ್ಯ, ಚುಚ್ಚುವ ಶೈಲಿ ನೋಡಿ . ’ನೀನು ಚಂಡವ್ಯಾಘ್ರ , ಕ್ರೂರಿ ಕಣಯ್ಯಾ ’ ಅಂದು ಇದನ್ನೆಲ್ಲ ತಿಂದು ಸುಖವಾಗಿರು ಅಂತ ವ್ಯಂಗ್ಯವಾಗಿ ಅನ್ನತ್ತೆ .
ಇದು ಒಳಿತು ಕೆಡಕು ನಡುವಿನ ಸಂಘರ್ಷದ ಕತೆ . ಆದರೆ ಒಳ್ಳೇದು ಯಾವದು ? ಕೆಟ್ಟದ್ದು ಯಾವದು ?
...
ಹುಲಿ ತ್ಯಾಗಜೀವಿ .
ಹುಲಿಯನ್ನು ಕೊಂದದ್ದು ಪುಣ್ಯಕೋಟಿಯ ಒಳ್ಳೇತನವೇ ? ಹುಲಿಯ ಹುಂಬತನವೆ? ಅಥವಾ ಸತ್ಯವೆಂಬ ಅಯುಧವೆ?
.........

ಇವು ಅಲ್ಲಿಯ ಲೇಖನದ ಆಯ್ದ ಸಾಲುಗಳು.
( ಈ ಜಾನಕಿ ಯಾರೋ ? ವಿವರ ಅಲ್ಲಿಲ್ಲ . .. ಆದರೆ ಇವರೂ ಸೊಲ್ಪ ನನ್ಹಾಗೇ ! ಮುಂದಿನ ಜನ್ಮದಲ್ಲಾದರೂ ನಿರಕ್ಷರಿಯಾಗಿ ನನ್ನನ್ನ ಹುಟ್ಟಿಸಪ್ಪಾ, ದೇವರೇ ! ಅಂತ ಬೇಡ್ಕೊಳ್ತಾರಂತೆ ! )

ಪುಣ್ಯಕೋಟಿಯ ಬಗ್ಗೇ ( ಆದರ್ಶ ವ್ಯಕ್ತಿಗಳ ಬಗ್ಗೇ -- ಅವರ ಹೆಸರು ಹೇಳಲ್ಲ -- ಯಾಕಂದ್ರೆ ಅವರ ಬಗ್ಗೇ ಚರ್ಚೆ ಶುರು ಆದೀತು) ಹೀಗೆಲ್ಲ ಟೀಕೆ ಬರಬೇಕಾದರೆ ನಮ್ಮ ನಿಮ್ಮ ಬಗ್ಗೆ ಏನಾದರೂ ಟೀಕೆ ಬಂದ್ರೆ - ತಲೆಗೆ ಹಚ್ಕೋಬೇಡಿ - ನಾವು ನೀವು ಯಾವ ಗಿಡದ ತೊಪ್ಪಲು ? ಅಂದ್ಕೊಂಡು ನಿಶ್ಚಿಂತೆಯಾಗಿರಿ .

ಯಾರದೋ ಟೀಕೆಗೆ ಅಕಾರಣ ಒಳಗಾಗಿ ಬೇಜಾರು ಮಾಡ್ಕೊಂಡಿದ್ದ ನಂಗೆ ಈ ಪುಸ್ತಕ ಸಕಾಲಕ್ಕೆ ಸಿಕ್ಕು , ಈ ಲೇಖನ ಓದಿ, ಒಂಥರಾ ಸಮಾಧಾನ ಆಯ್ತು !

ಅಂದ ಹಾಗೆ ಪು.ತಿ.ನ , ಮೊಗಳ್ಳಿ ಗಣೇಶ್ ಇವರುಗಳೂ ಪುಣ್ಯಕೋಟಿ ಕತೆ ಬಗ್ಗೆ ಏನೋ ಬರೆದಿದ್ದಾರಂತೆ ? ನಿಮಗೇನಾದರೂ ಗೊತ್ತಾ?

Rating
No votes yet

Comments