ಎರಡು ಬಗೆಯ ಜನರು!!

ಎರಡು ಬಗೆಯ ಜನರು!!

ಈ ಮೊದಲು ಮೂರು ಬಗೆಯ ಜನರ ಬಗ್ಗೆ ಬರೆದಿದ್ದೆ. ಅದಕ್ಕೇ ಇರಬೇಕು, ಇದ್ದಕ್ಕಿದ್ದಂತೆ, ಇಂದು ಇನ್ನೊಂದು ಸುಭಾಷಿತ ನೆನಪಿಗೆ ಬಂತು. ಇದರಲ್ಲಿ ಎರಡು ಬಗೆಯ ಜನರನ್ನು ಸುಭಾಷಿತಕಾರ ಬಣ್ಣಿಸುತ್ತಾನೆ.


ಕಲಿಕೆ ತಗಾದೆಗೆ ಹಣವಿಹುದು ಗರುವಕೆ ಕೆಡುಕನ ಶಕುತಿಯೋ ಕಂಡವರ ಕಾಡಲಿಕೆ
ಸಾಧುಗಳಿಗಾಗುವುದದು ತಿರುವುಮುರುವು-ಅರಿವಿಗೆ,ಕೊಡಲಿಕೆ ಮತ್ತು ಕಾಪಿಡಲಿಕೆ

ಬೇರೆಯವರಿಗೆ ತೊಂದರೆ ಮಾಡುವಂತ ಬುದ್ಧಿಯಿರುವವವರು, ಕಲಿತದ್ದನ್ನು ವಿವಾದಕ್ಕೂ, ಹಣವನ್ನು ಅಹಂಕಾರಕ್ಕೂ, ತಮಗಿರುವ ಶಕ್ತಿಯನ್ನು ಇತರರನ್ನು ಪೀಡಿಸುವುದಕ್ಕೆ ದಾರಿ ಎಂದುಕೊಳ್ಳುತ್ತಾರೆ. ಒಳ್ಳೆಯ ಸ್ವಭಾವವಿದ್ದವರೋ, ಕಲಿತಿದ್ದನ್ನು ತಮ್ಮ ಅರಿವನ್ನು ಹೆಚ್ಚಿಸಿಕೊಳ್ಳುವುದಕ್ಕೂ, ಗಳಿಸಿದ ಹಣವನ್ನು ಬೇರೆಯವರಿಗೆ ಅಗತ್ಯ ಬಿದ್ದಾಗ ಧನಸಹಾಯ ಮಾಡಲೂ, ತಮ್ಮ ದೈಹಿಕ ಶಕ್ತಿಯನ್ನು ಇತರರನ್ನು ಕಾಪಾಡಲೂ ಉಪಯೋಗಿಸುತ್ತಾರೆ! ಎಷ್ಟು ಸೊಗಸಾಗಿ ಹೇಳಿದ್ದಾನಲ್ಲವೆ ಸುಭಾಷಿತಕಾರ?

ಇದರ ಸಂಸ್ಕೃತ ಮೂಲ ಹೀಗಿದೆ:

ವಿದ್ಯಾ ವಿವಾದಾಯ ಧನಂ ಮದಾಯ ಖಲಸ್ಯ ಶಕ್ತಿಃ ಪರಪೀಡನಾಯ|
ಸಾಧೋಸ್ತು ಸರ್ವಂ ವಿಪರೀತಮೇತತ್ ಜ್ಞಾನಾಯ ದಾನಾಯ ಚ ರಕ್ಷಣಾಯ ||

विद्या विवादाय धनं मदाय खलस्य शक्त्तिः परपीडनाय।

साधॊस्तु सर्वं विपरीतमॆतत् ज्ञानाय दानाय च रक्षणाय॥

-ಹಂಸಾನಂದಿ

Rating
No votes yet