ಇತ್ತೀಚಿನ ಅತಿ ನಿರೀಕ್ಷೆಯ ಮತ್ತು ಬಹುಚರ್ಚಿತ ಕನ್ನಡ ಚಿತ್ರ " ಗಾಳಿಪಟ " ..ಚಿತ್ರದ ನನ್ನ ವಿಮರ್ಷೆ...!!!

ಇತ್ತೀಚಿನ ಅತಿ ನಿರೀಕ್ಷೆಯ ಮತ್ತು ಬಹುಚರ್ಚಿತ ಕನ್ನಡ ಚಿತ್ರ " ಗಾಳಿಪಟ " ..ಚಿತ್ರದ ನನ್ನ ವಿಮರ್ಷೆ...!!!

" ಗಾಳಿಪಟ "...ಸ೦ಭಾಷಣೆ / ಅಭಿನಯಗಳೇ ಜೀವಾಳ.

ಕಥೆಯೇ ಇಲ್ಲದೇ...ಸಣ್ಣ ಎಳೆಯೊ೦ದನ್ನು ಹಿಡಿದು ಅದರ ಸುತ್ತ ಚೇತೋಹಾರೀ ಘಟನೆಗಳನ್ನು ಹೆಣೆದು...ಚೇತೋಹಾರಿ ಮತ್ತು ಮನ ಮುಟ್ಟುವ ಸ೦ಭಾಷಣೆಗಳನ್ನು ಸಕಾಲಿಕವಾಗಿ ಅಳವಡಿಸಿ..ಕಲಾವಿದರಿ೦ದ ಮತ್ತು ತ೦ತ್ರಜ್ನ್ಯರಿ೦ದ ಅತ್ತ್ಯುತ್ತಮವೆನ್ನುವ೦ತ ಕೆಲಸ ಪಡೆದು...ಮಾಡಿದ ಚಿತ್ರವೇ .." ಮು೦ಗಾರು ಮಳೆ ".

ನಿರ್ದೇಶಕ ಯೋಗರಾಜ್ ಭಟ್ ...ತಮ್ಮ ಮು೦ದಿನ ಚಿತ್ರ " ಗಾಳಿಪಟ " ದಲ್ಲೂ ಇದನ್ನೇ ರಿಪೀಟ್ ಮಾಡಿದ್ದಾರೆ.

ಇಲ್ಲಿಯೂ ಕಥೆಯೇನೂ ಇಲ್ಲ...ಹದಿಹರೆಯದ ಮೂವರು ಹುಡುಗರ ಜೀವನದಲ್ಲಿ ನಡೆಯುವ ಘಟನೆಗಳೇ..ಚಿತ್ರದ ಕಥಾವಸ್ತು. ಅದಕ್ಕೆ ಚೇತೋಹಾರೀ ಮತ್ತು ನಗೆಯುಕ್ಕಿಸುವ ಸ೦ಭಾಷಣೆ ಹೆಣೆದು..ಪ್ರೇಕ್ಷಕರನ್ನು ಮನರ೦ಜಿಸುವಲ್ಲಿ..ಮತ್ತೊಮ್ಮೆ ಯಶಸ್ವಿಯಾಗುತ್ತಾರೆ..ಯೋಗರಾಜ್ ಭಟ್.

" ಮು೦ಗಾರು ಮಳೆ " ಯಲ್ಲಿ ಪ್ರೇಮ ಅದರ ತಹತಹಿಕೆ ಮತ್ತು ಅದು ಸಿಗದಾದಾಗಿನ ದುರ೦ತಕ್ಕೆ ಒತ್ತು ಕೊಟ್ಟಿದ್ದರೆ....ಗಾಳಿಪಟದಲ್ಲಿ ಹಾಸ್ಯಕ್ಕೆ ಒತ್ತು.....ಇಲ್ಲಿ ಮೂವರು ಯುವಕರ ಕನಸುಗಳನ್ನು ಹಾಸ್ಯಮಯ ಘಟನೆಗಳ ಸಹಾಯದಿ೦ದ ಹೇಳಿದ್ದಾರೆ.

" ಗಾಳಿಪಟ " ... ಸ್ವಾತ೦ತ್ರದ ..ಉತ್ಸಾಹದ ಸ೦ಕೇತ...ಅದಕ್ಕೆ ಮುಗಿಲು ಮುಟ್ಟುವ ತವಕ...ಆದರೆ ಅದನ್ನೂ ಒ೦ದು ಪರಿಧಿಯಲ್ಲಿ ಬ೦ಧಿಸಿಡುವುದು ಅದರ ದಾರ..ಮತ್ತು ಅದನ್ನು ಹಿಡಿದಿರುವ ಸೂತ್ರದಾರ. ಇದು ಹಿತವಾದ ಗಾಳಿಯಲ್ಲಿ ಉತ್ಸಾಹದಿ೦ದ ಮುಗಿಲೆತ್ತರಕ್ಕೆ ಹಾರಬಲ್ಲದು..ಅದೇ ಬಿರುಗಾಳಿ ಬೀಸಿದರೆ ಪಲ್ಟೀ ಹೊಡೆಯಬಲ್ಲದು...ಇಲ್ಲಿ ಸೂತ್ರದ ದಾರದಷ್ಟೇ...ಗಾಳಿಪಟವನ್ನು ಬ್ಯಾಲೆನ್ಸ ಮಾಡುವ ಸರಿಯಾದ ಭಾರದ ಬಾಲ೦ಗೋಚಿಯೂ ಅಷ್ಟೇ ಮುಖ್ಯ .

" ಗಾಳಿಪಟ " ಚಿತ್ರವೂ ಈ ಸತ್ಯವನ್ನೇ ಹೇಳುತ್ತದೆ.

ಅವರು ಮೂವರು ಯುವಕರು...ಗಣಿ ( ಗಣೇಶ )...ಮಾತಿನ ಮಲ್ಲ..ಹೊಟ್ಟೆಬಾಕ..ಬೇಜವ್ಬಾರೀ ಹುಡುಗ..ಶಾಸಕ ಬೈರೇಗೌಡ (ರ೦ಗಾಯಣ ರಘು) ದ೦ಪತಿಗಳ ಏಕಮಾತ್ರ ಸುಪುತ್ರ..ಗೊತ್ತು ಗುರಿ ಇಲ್ಲದ ಜೀವನ..ಇನ್ನೊಬ್ಬ ದಿಗ೦ತ ( ದಿಗ೦ತ )..ಸೌಮ್ಯ ಸ್ವಭಾವದ ಆದರೆ ಪ್ರಸ೦ಗ ಬ೦ದರೆ ಕೀಟಲೇ ಮಾಡ ಬಲ್ಲ ಹುಡುಗ...ಮೂರನೇಯವ ಕಿಟ್ತಿ (ರಾಜೇಶ ಕ್ರ್ಶಷ್ಣ)..ಇನ್ನೊಬ್ಬ ಸೌಮ್ಯ ಹುಡುಗ..ಭಗ್ನ ಪ್ರೇಮಿ..ಹಳೆಯ ಪ್ರೇಮದ ನೆನಪಲ್ಲೇ ಕೊರಗುವವ.

" ಗಾಳಿಪಟ " ದ೦ತೆ ಹಾರಾಡುತ್ತಿರುವ ಆ ಮೂವರು ಯುವಕರಿಗೂ ತಮ್ಮದೇ ಆದ ಕನಸುಗಳು..ಅಭಿರುಚಿಗಳು..." ಗಾಳಿಪಟ "ದ೦ತೆ ಮುಗಿಲು ಮುಟ್ಟುವ ತವಕ...ಇ೦ಥ ಯುವಕರೂ ವಿನಾಕಾರಣ ನಗರ ಜೀವನದಿ೦ದ ಬೇಸತ್ತು ಶಾ೦ತಿಯನ್ನರಸಿ..ಹಳ್ಳಿಯೊ೦ದಕ್ಕೆ..ಬರುತ್ತಾರೆ. ಅದು " ಮುಗಿಲ ಹಳ್ಳಿ "...ಮುಗಿಲು.. ಬೂಮಿಯನ್ನು ಮುಟ್ಟುತ್ತದೋ ಎನ್ನುವ೦ತೆ ಕಾಣುವ ಪ್ರೇಕ್ಷಣಿಯ ದ್ರಷ್ಯಗಳಿರುವ ಹಿಲ್ ಸ್ಟೇಷನ್ ..ಸಿನೀಮಯ ರೀತಿಯಲ್ಲಿ ಅವರಿಗೆ ಮೂವರು ಜೊತೆಗಾತಿಯರೂ ಸಿಕ್ಕು ..ಅವರೊಡನೆ ಸಾಕಷ್ಟು ಗೇಲಿ ..ಸರಸ ಗಳಾದ ನ೦ತರ ...ಪ್ರೇಮದ ಬಲೆಗೂ ಬೀಳುತ್ತಾರೆ......ಈ ಪ್ರೇಮ ಅಷ್ಟು ಸುಲಭ ವಾಗಿ ಅವರಿಗೆ ದಕ್ಕಿತೇ..ಹಾಗೆ ದಕ್ಕಲು ಅವರು ಪಡುವ ಪರದಾಟಗಳೇ..ಚಿತ್ರದ ಮು೦ದಿನ ಕಥೆ.

ಇನ್ನು ಯುವತಿಯರಲ್ಲಿ ಒಬ್ಬಳು ಗ೦ಡಸಿನ೦ತೇ ಬೆಳೆದ ಗಟ್ಟಿಗಿತ್ತಿ ಆಯುರ್ವೇದ ಡಾಕ್ಟರ.. ರಾಧಾ (ನೀತು )....ಇನ್ನೊಬ್ಬಳು ..ಸೌಮ್ಯ ಸ್ವಭಾವದ ವಿಧವೆ ( ಡೈಸಿ ಬೋಪಣ್ಣ )...ಕೊನೆಯವಳು...ಸದಾ ಕೀಟಲೆಯಲ್ಲಿರುವ ಪಾವನಿ (ನಟಿಯ ಹೆಸರು ಗೊತ್ತಿಲ್ಲ).

ಇಲ್ಲಿ ಯುವಕರೇ ಮುಗಿಲು ಮುಟ್ಟುಲು ತವಕಿಸುತ್ತಿರುವ ಗಾಳಿಪಟಗಳು...ಯೌವನದ ಉತ್ಸಾಹವೇ..ಹಿತವಾದ ಗಾಳಿ...ಆದರೆ..ಪ್ರೇಮ ಅಲ್ಲಿ ಬಿರುಗಾಳಿ ಯಾಗುತ್ತದೆ.ಗಾಳಿಪಟ ಗಳು ಓಲಾಡುತ್ತವೆ

ಮತ್ತೊಮ್ಮೆ ಯೋಗರಾಜ್ ಹೊಸ ರೀತಿಯ ನಿರೂಪಣೆಯಲ್ಲಿ / ಚಿತ್ರಕಥೆ (?)ಯಲ್ಲಿ / ಸ೦ಭಾಷಣೆಗಳಲ್ಲಿ ಮತ್ತು ತಾ೦ತ್ರಿಕತೆಯಲ್ಲಿ ಗೆಲ್ಲುತ್ತಾರೆ...ಆದರೆ ಮು೦ಗಾರು ಮಳೆ ಜೀವಾಳವಾದ ಚೇತೋಹಾರಿ ಸ೦ಗೀತ /ಹಾಡುಗಳನ್ನು ಪಡೆಯುವಲ್ಲಿ ಮತ್ತು ಅವುಗಳ ಚಿತ್ರೀಕರಣದಲ್ಲಿ ಸೋಲುತ್ತಾರೆ...ಇದ್ದುದರಲ್ಲಿ " ಆಹಾ ಬೆದರು ಬೊ೦ಬೆಯೇ " ಹಾಡಿನ ಚಿತ್ರೀಕರಣ ಪರವಾಗಿಲ್ಲ...ಉಳಿದೆಲ್ಲ ಮು೦ಗಾರು ಮಳೆಯ ರಿಪೀಟೇಶನ್

" ಮಿ೦ಚಾಗಿ ನೀನು ಬರಲು..ನಿ೦ತಲ್ಲಿ ಯೇ ಮಳೆಗಾಲ " ಎ೦ಬ ಸೋನು ನಿಗಮ್ ಹಾಡಿರುವ (ಅನಿಸುತಿದೆ ಯಾಕೋ ಇ೦ದು ಎ೦ಬ ಹಾಡಿನ ಜಾಡಿನಲ್ಲಿರುವ ) ಹಾಡು ಮತ್ತು ಅದರ ಚಿತ್ರೀಕರಣ " ಮು೦ಗಾರು ಮಳೆ " ಯನ್ನೇ ನೆನಪಿಸುತ್ತದೆ .

ಚಿತ್ರದಲ್ಲಿ ನಿಮ್ಮ ಮನಸ್ಸನ್ನು ಸೂರೆಗೊಳ್ಳುವ ಹಲವಾರು ಅ೦ಶಗಳಿವೆ..ಅದರಲ್ಲಿ ಮೊದಲನೇಯದ್ದು..ರತ್ನವೇಲು ಛಾಯಾಗ್ರಹಣ...ಕೊಡಚಾದ್ರಿ..ಶಿವನ ಸಮುದ್ರ..ಮು೦ತಾದ ಪ್ರೇಕ್ಷಣೀಯ ಸ್ಥಳಗಳನ್ನು ಮನಸ್ಸೂರೆ ಗೊಳ್ಳುವ೦ತೆ ಪ್ರೇಕ್ಷಕರ ಮು೦ದಿಟ್ಟೀದ್ದಾರೆ ಛಾಯಾಗ್ರಾಹಕರು. " ಮು೦ಗಾರು ಮಳೆ " ಯಲ್ಲಿ ಪ್ರೇಮಿಗಳ ಪ್ರೇಮಕ್ಕೆ ವೇದಿಕೆ ಯಾಗಿದ್ದ ಜೋಗಿನ ಸಿರಿ ಇಲ್ಲಿ ಕ್ಲೈಮ್ಯಾಕ್ಸ ನಲ್ಲಿ ಖಳನಾಯಕನಾಗಿ ಅಬ್ಬರಿಸುತ್ತದೆ.

ಎರಡನೇ ಅ೦ಶ ಕಲಾವಿದರಿ೦ದ ಯೋಗರಾಜ್ ಭಟ್ ತೆಗೆದಿರುವ ಅಭಿನಯ. " ಗಣಿ " ಯ ಪಾತ್ರದಲ್ಲಿ ಗಣೇಶ ಮತ್ತೊಮ್ಮೆ ಮಿ೦ಚಿದ್ದಾರೆ..ಅವರ ಸ೦ಭಾಷಣೆ ಹೇಳುವ ರೀತಿಗೆ ಮತ್ತು ಅ೦ಥ ಸ೦ಭಾಷಣೆ ಬರೆದ ಯೋಗರಾಜ್ ಭಟ್ ರಿಗೆ ಹ್ಯಾಟ್ಸಾಫ್..!!!. ಭಾವನಾತ್ಮಕ ದ್ರಷ್ಯಗಳಲ್ಲಿ ಅವರು ಮತ್ತೆ ಮು೦ಗಾರು ಮಳೆಯ ಪ್ರೀತಮ್ ನನ್ನೇ ನೆನಪಿಸುತ್ತಾರೆ.

ಆದರೆ ದ್ವಿತೀಯಾರ್ಧದಲ್ಲಿ ಗಣೇಶನ ಬಾಯಿ೦ದ ಹೇಳಿಸಿರುವ ಸ್ವಗತ ಮತ್ತು ಸ೦ಭಾಷಣೆ ಗಳು ಅತೀ ಎನಿಸಿ ಕಿರಿ ಕಿರಿ ಎನ್ನಿಸುತ್ತದೆ...ಅತೀ ಯಾದರೆ ಅಮ್ರುತವೂ ವಿಷ ಎ೦ಬುದನ್ನು..ಯೋಗರಾಜ್ ಭಟ್ ನೆನಪಿನಲ್ಲಿಡಬೇಕು

ಇನ್ನೊ೦ದು ಅಚ್ಚರಿಯ ಅಭಿನಯ ಬ೦ದಿರುವುದು " ದಿಗ೦ತ " ರಿ೦ದ. ತಮ್ಮ ಸ್ವಾಭಾವಿಕ ಸ೦ಭಾಷಣೆ ಮತ್ತು ಅಭಿನಯದಿ೦ದ ಅವರು ಪ್ರೇಕ್ಶಕರ ಮನ ಗೆಲ್ಲುತ್ತಾರೆ.

ರಾಜೇಶ್ ಕ್ರಷ್ಣನ್ ರದೂ ಸ೦ಯಮದ ಅಭಿನಯ. ಗಣೇಶ ನಾಯಕಿಯಾಗಿ ಡೈಶಿ ಬೋಪಣ್ಣ ಸ್ವಲ್ಪ ಹೆಚ್ಚಾಗೇ ಸ೦ಯಮ ತೋರಿಸಿದ್ದಾರೆ.

ಆದರೆ ಚಿತ್ರದಲ್ಲಿ ನಿಜವಾಗಿ ಮನಗೆಲ್ಲುವುದು..ಗ೦ಡಸಿನ೦ಥ ಗುಣಗಳನ್ನು ರೂಢಿಸಿಕೊ೦ಡ ಒರಟು ಸ್ವಭಾವದ ಹುಡುಗಿ ರಾಧಾ (ಆಯುರ್ವೇದ ಡಾಕ್ಟ್ರು..?) ಆಗಿ ನೀತು ಎಲ್ಲರಿಗಿ೦ತ ಅಭಿನಯದಲ್ಲಿ ಒ೦ದು ಕೈ ಮೇಲಾಗುತ್ತಾಳೆ. ಪ್ರತಿ ಮಾತಿಗೂ ಥೂ ಎ೦ದು ಕ್ಯಾಕರಿಸಿ ಉಗಿಯುತ್ತಾ ಗ೦ಡಸರ ಬೆ೦ಡೆತ್ತುವ ಪಾತ್ರ ಆಕೆಯ ಪರ್ಸನಾಲಿಟಿಗೆ ಹೊ೦ದಿದೆ.

ಅನ೦ತನಾಗ್ ಮತ್ತೊಮ್ಮೆ ಬೇಟೆಗಾರ ಕೋದ೦ಡರಾಮ್ ( ಹ೦ದೀ ಬೇಟೆಗೆ ಹೋಗಿ ಕಾಲು ಕಳೆದು ಕೊ೦ಡ ) ಪಾತ್ರದಲ್ಲಿ ಮಿ೦ಚುತ್ತಾರೆ.

ಅ೦ದ ಹಾಗೆ ಇದು ನಾನ್-ವೆಜ್ ಫಿಲಮ್ಮು...ಇಲ್ಲಿ ಹ೦ದೀ ಮಾ೦ಸ..ಮತ್ತು ಅದರ ಖಾದ್ಯಗಳನ್ನು ತಯಾರಿಸುವ ಪಾಠವೂ ಇದೆ..ಮತ್ತು ಹ೦ದೀ ಮಾ೦ಸಕ್ಕೆ (ಅದರಲ್ಲೂ ಹ೦ದೀ ಬಾಲಕ್ಕೆ) ಬಾಯಲ್ಲಿ ನೀರೂರಿಸಿಕೊ೦ಡು ಹ೦ದೀ ಬಾಲದ ಬೆನ್ನತ್ತುವ ನಾಯಕರೂ ಇದ್ದಾರೆ. ಹೀಗಾಗಿ ಶುದ್ದ ಸಸ್ಯಾಹಾರಿಗಳಿಗೆ ಈ ಚಿತ್ರ ವರ್ಜ್ಯ

ಇಲ್ಲಿ ಹ೦ದಿ ತನ್ನ ವರಾಹವತಾರ ( ವಿಷ್ಣುವಿನ ಒ೦ದು ಅವತಾರ ) ತೋರಿ..ಬೇಟೆಗಾರ ಅನ೦ತನಾಗ್ ರ ತಾನೇ ಮುರಿದಿದ್ದ ಕಾಲು ಸರಿ ಮಾಡಿ ಪ್ರಾಣಿಗಳ ಬೇಟೆಯಾಡುವುದು ತಪ್ಪು ಎ೦ಬ ದೈವಿಕ ಸ೦ದೇಶ ನೀಡುವ ( ಅಥವಾ ಜ್ನ್ಯಾನೋದಯ ವನ್ನು೦ಟು ಮಾದುವ )..ಪವಾಡ ವೂ ಇದೆ.

ಗಾಳಿಪಟದ ಮೂಲಕ ಪ್ರೇಮ ಪತ್ರ ಕೊಡುವ ಪ್ರೇಮ ನಿವೇದನೆ ಮಾಡುವ ಹೊಸ ಟ್ರಿಕ್ ಅನ್ನು ಇಲ್ಲಿ ಯೋಗರಾಜ್ ಭಟ ಕಲಿಸಿದ್ದಾರೆ...ಬೇಕಾದವರು ಉಪಯೋಗಿಸಿ ಕೊಳ್ಳಬಹುದು.

ಇನ್ನು ಚಿತ್ರದ ನೆಗೆಟಿವ್ ಅ೦ಶಗಳೆ೦ದರೆ ಯಾರ ಪಾತ್ರ ಪೋಷಣೆಯೂ ಸರಿಯಾಗಿ ಆಗದೇ ಎಲ್ಲ ಕಲಸ ಮೇಲೋಗರ ವಾಗುವುದು.ಗಣೇಶ ಬಾಯಲ್ಲಿ ಹೇಳಿಸಿರುವ ಅತಿಯಾದ ಸ್ವಗತಗಳು ಮತ್ತು ಸ೦ಭಾಷಣೆ.

ಚಿತ್ರಕಥೆಯೂ ಅಲ್ಲಲ್ಲಿ ಗಾಳಿಪಟದ೦ತೆ ಹೊಯ್ದಾಡುವುದು. ಸ೦ಭಾಷಣೆಗಾರರಾಗಿ ( ಕೆಲವೊಮ್ಮೆ ಅತಿಯಾಗಿ ಕಿರಿಕಿರಿ ಎನ್ನಿಸಿದರೂ )ಗೆಲ್ಲುವ ಯೋಗರಾಜ್ ಭಟ್..ಚಿತ್ರಕಥೆಯಲ್ಲಿ ಸೋಲುತ್ತಾರೆ..ಹೀಗಾಗಿ ಯಾವ ದ್ರಷ್ಯಗಳೂ ಮನಸ್ಸನ್ನು ತಟ್ಟುವುದಿಲ್ಲ.

ದ್ವೀತೀಯಾರ್ಧ.....ಚಿತ್ರವನ್ನು ಚುಇ೦ಗ ಗಮ್ ನ೦ತೆ ಎಳೆದಿರುವುದು...ಮತ್ತು ಕ್ಲೈಮಾಕ್ಸ ದ್ರಷ್ಯವನ್ನು ರೌದ್ರ ವನ್ನಾಗಿಸಲೆ೦ದೇ ..ಚಿತ್ರವನ್ನು ಕೊನೆ ಕೊನೆಗೆ ತು೦ಬಾ ಎಳೆದಿದ್ದಾರೆ. ಚಿತ್ರವನ್ನೂ ಕನಿಷ್ಟ ೧೫ ನಿಮಿಷ ಟ್ರಿಮ್ ಮಾಡಿದ್ದರೆ..ಇನ್ನೂ ಚೆನ್ನಾಗಿರುತ್ತಿತ್ತು.

ಹೀಗಾಗಿ " ಮು೦ಗಾರು ಮಳೆ " ಯ ಜಾದೂ ಇಲ್ಲಿಲ್ಲ...ಆದರೆ..ಮೂವರು ಯುವಕರ ಪ್ರೇಮ ಕಥೆಯನ್ನು ಹಾಸ್ಯಮಯ ಹೇಳುವಲ್ಲಿ ಸಫಲ. ಇದೂ ಕಡಿಮೆ ಸಾಧನೆಯೇನಲ್ಲ.

Rating
No votes yet