ಜೀವನದಲ್ಲಿ ನಮ್ಮದೇ ದಾರಿ ಕಂಡುಕೊಳ್ಳಬೇಕೇ ?

ಜೀವನದಲ್ಲಿ ನಮ್ಮದೇ ದಾರಿ ಕಂಡುಕೊಳ್ಳಬೇಕೇ ?

"ಜೀವನದಲ್ಲಿ ನಮ್ಮದೇ ದಾರಿಯನ್ನು ಹುಡುಕಿಕೊಂಡು ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳುವವವರ ಮಾತಿಗೆ ನಾನು ಸೊಪ್ಪು ಹಾಕುವದಿಲ್ಲ. ಏಕೆಂದರೆ ನಶ್ವರವಾದ ಈ ಮನುಷ್ಯ ದೇಹದ ಆಯಸ್ಸು ಬಹಳ ಎಂದರೆ ೬೦-೭೦ ವರ್ಷ. ಅದರಲ್ಲಿ ನಾವು ಸುಖಪಡಲು ಸಿಗುವ ವರ್ಷ ಬಹಳ ಎಂದರೆ ಇಪ್ಪತ್ತು. ಈ ಅಲ್ಪಕಾಲಾವಧಿಯಲ್ಲಿ ತಣ್ಣಗೆ ನಿರ್ಯೋಚನೆಯಿಂದ ಸುಖಪಡುವದು ಬಿಟ್ಟು ನಮ್ಮದೇ ದಾರಿಯನ್ನು ಹುಡುಕಿ ಅಲ್ಲಿಯ ಕಲ್ಲು ಮುಳ್ಳು ಆರಿಸುತ್ತ ಕೂಡುವದು ಯಾವ ಜಾಣತನ ಹೇಳಿ ? ಅದಕ್ಕಾಗಿಯೇ ನಾನು ಯಾವಾಗಲೂ ಸ್ವಂತ ದಾರಿಯನ್ನು ಸೃಷ್ಟಿಸಿಕೊಳ್ಳುವ ಮೂರ್ಖತನಕ್ಕೆ ಹೋಗದೆ ಬೇರೆಯವರು ರೆಡಿ ಮಾಡಿಟ್ಟಿರುವ ಸಿಮೆಂಟ್ ದಾರಿಯಲ್ಲಿ ತಣ್ಣಗೆ ನಡೆದು ನನ್ನ ಜೀವನವನ್ನು ಸುಖವಾಗಿ ಕಳೆಯಲು ನಿರ್ಧರಿಸಿದ್ದೇನೆ."

ಇತ್ತೀಚೆಗೆ ನಾನು ಎರಡು ಪುಸ್ತಕ ಓದಿದೆ. ಅವು ಎಂ. ಪಿ. ಮನೋಹರಚಂದ್ರನ್ ಮತ್ತು ಅನಂತ ಕಲ್ಲೋಳರು ಬರೆದದ್ದು ( ಪ್ರತ್ಯೇಕವಾಗಿ ಬರೆದದ್ದು , ಜತೆಯಾಗಿ ಅಲ್ಲ ). ಒಂದು ಪತ್ತೆದಾರಿ ಕಾದಂಬರಿ , ಇನ್ನೊಂದು ಹಾಸ್ಯ ಲೇಖನಗಳ ಸಂಗ್ರಹ . ಈ ಹಾಸ್ಯ ಲೇಖನಗಳ ಸಂಗ್ರಹದಲ್ಲಿ ಕಂಡ ವಿಚಾರ ಇದು. ನಿಮಗೆ ಏನಾದರೂ ಉಪಯೋಗ ಆಗಬಹುದೇನೋ ಎಂದು ಈ ವಿಚಾರ ಇಲ್ಲಿ ಹಾಕಿದ್ದೇನೆ.

Rating
No votes yet

Comments