ಕುರುಡು ಕಾಂಚಾಣ

ಕುರುಡು ಕಾಂಚಾಣ

ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವಾಗ ನಾವು ಮಾಡುವ ಕೆಲವು ತಪ್ಪುಗಳು ಹೀಗಿವೆ:
*ಶೇರು ಬೆಲೆ ಕಡಿಮೆ ಇದ್ದಾಗ ಖರೀದಿಸಲು ಹಿಂಜರಿಕೆ.
*ಶೇರು ಮಾರುಕಟ್ಟೆ ರಸಾತಳಕ್ಕಿಳಿದಾಗ ಇನ್ನೂ ಕುಸಿದೀತೆಂಬ ಭಯಕ್ಕೆ ಬಲಿಯಾಗಿ ಖರೀದಿಸದಿರುವುದು.
*ಕಡಿಮೆ ಅವಧಿಯಲ್ಲಿ ಲಾಭದ ನಿರೀಕ್ಷೆ.
*ಹಣ ಹೂಡಿಕೆ ದೀರ್ಘಾವಧಿಯಾದಷ್ಟೂ ಲಾಭವೆಂಬ ಸತ್ಯವನ್ನು ಅವಗಣಿಸುವುದು.
*ಎಲ್ಲರ ಸಲಹೆಯೂ ಸತ್ಯವೆಂದು ಭಾವಿಸುವುದು.
*ಹೆಚ್ಚು ಸಲ ಖರೀದಿ-ಮಾರಾಟ ಮಾಡಿದರೆ,ಬಂದ ಲಾಭದಲ್ಲಿ ಅಧಿಕ ಮೊತ್ತ ದಲ್ಲಾಳಿಯ ಪಾಲಾಗುವುದನ್ನು ಗಮನಿಸದಿರುವುದು.
*ಹಣ ಹೂಡಿಕೆಯೂ ಒಂದು ಕಲೆ ಎನ್ನುವುದನ್ನು ಅರಿಯದಿರುವುದು.
*ಬ್ಲೂಚಿಪ್ ಕಂಪೆನಿಗಳ ಶೇರುಗಳು ದುಬಾರಿಯೆಂದು,ಪೆನ್ನಿ ಶೇರುಗಳ ಬೆಂಬೀಳುವುದು.
*ಒಂದೇ ಸಲಕ್ಕೆ ಇದ್ದ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡುವುದು.
*ಒಂದೇ ಅಥವ ಕೆಲವೇ ಕಂಪೆನಿಗಳ ಶೇರುಗಳಲ್ಲಿ ಸರ್ವಸ್ವವನ್ನೂ ಹೂಡುವುದು.
*ಸಾಲ ಮಾಡಿ ಶೇರು ಖರೀದಿಸುವುದು.
*ಸ್ವಲ್ಪ ಸಮಯದ ನಂತರ ನಮಗೆ ಬೇಕಿರುವ ಹಣವನ್ನು ಹೂಡುವುದು.
(ಮುಂದುವರಿಯಲಿದೆ)

Rating
No votes yet