ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು

ಅಷ್ಟೇನೂ ಪರಿಚಿತವಲ್ಲದ ಈಸೋಪನ ನೀತಿಕಥೆಗಳು

ಬರಹ

ಹುಂಜವೂ ವಜ್ರದ ಹರಳೂ
ತನಗೂ ತನ್ನ ಕೋಳಿಗಳಿಗೂ ಆಹಾರಕ್ಕಾಗಿ ತಿಪ್ಪೆ ಕೆದಕುತ್ತಿದ್ದ ಒಂದು ಹುಂಜಕ್ಕೆ ಒಂದು ವಜ್ರದ ಹರಳು ಸಿಕ್ಕಿತು. ಅದು ವಜ್ರದ ಹರಳಿಗೆ ಹೇಳಿತು " ನೀನು ನನ್ನ ಬದಲು ನಿನ್ನ ಯಜಮಾನನಿಗೆ ಸಿಕ್ಕಿದ್ದರೆ ಅವನು ನಿನ್ನನ್ನು ತನ್ನ ಮುಡಿಗೇರಿಸಿಕೊಂಡು ಮೆರೆಸುತ್ತಿದ್ದ. ಆದರೆ ನೀನು ನನಗೆ ಸಿಕ್ಕಿದೆ. ನಿನ್ನಿಂದ ನನಗೆ ಯಾವ ಉಪಯೋಗವೂ ಇಲ್ಲ. ನನಗೆ ಪ್ರಪಂಚದ ಎಲ್ಲ ಒಡವೆಗಳಿಗಿಂತ ಒಂದು ಕಾಳು ಬಾರ್ಲಿ ಸಿಕ್ಕಿದ್ದರೆ ಚೆನ್ನಾಗಿತ್ತು

ಕತ್ತೆಯೂ ಮಿಡಿತೆಗಳೂ
ಮಿಡಿತೆಗಳ ಚಿರಿಗುಟ್ಟುವ ಧ್ವನಿ ಕೇಳಿದ ಕತ್ತೆಯೊಂದಕ್ಕೆ ಆಸಕ್ತಿ ಮೂಡಿತು. ಅಂಥದೇ ಇಂಪಾದ ಧ್ವನಿ ತನಗೂ ಬೇಕೆಂದು ಬಯಸಿ ಇಂಥ ಇಂಪಾದ ಕಂಠ ಪಡೆಯಲು ನೀವು ಅದೇನು ಆಹಾರ ಸೇವಿಸುತ್ತೀರಿ ಎಂದು ಅದು ಮಿಡಿತೆಗಳನ್ನು ಕೇಳಿತು. "ನಾವು ಮಂಜಿನ ಹನಿ ಕುಡಿಯುತ್ತೇವೆ" ಎಂದು ಮಿಡಿತೆಗಳು ಹೇಳಿದವು. ತಾನು ಇನ್ನು ಮುಂದೆ ಮಂಜಿನ ಹನಿಗಳನ್ಬು ಕುಡಿದೇ ಬದುಕುತ್ತೇನೆ ಎಂದು ನಿರ್ಧರಿಸಿತು. ಹಾಗೇ ಮಾಡುತ್ತ ಕೆಲವೇ ದಿನಗಳಲ್ಲಿ ಹಸಿವಿನಿಂದ ಸತ್ತೂ ಹೋಯಿತು.

ಖಗೋಳಶಾಸ್ತ್ರಜ್ಞ

ಒಬ್ಬ ಖಗೋಳಶಾಸ್ತ್ರಜ್ಞನಿಗೆ ರಾತ್ರಿಯಲ್ಲಿ ಹೊರಹೋಗಿ ನಕ್ಷತ್ರಗಳನ್ನು ವೀಕ್ಷಿಸುವ ಹವ್ಯಾಸವಿತ್ತು. ಒಂದು ರಾತ್ರಿ ಅವನು ನಕ್ಷತ್ರವೀಕ್ಷಣೆ ಮಾಡುತ್ತ ಮಾಡುತ್ತ ಅವನು ಊರಹೊರಗಿನ ಪ್ರದೇಶಕ್ಕೆ ಹೊರಟುಹೋದ. ಗಮನವೆಲ್ಲ ಆಕಾಶದ ಮೇಲೆ ನೆಟ್ಟಿದ್ದರಿಂದ ಅವನು ಆಯತಪ್ಪಿ ಒಂದು ಬಾವಿಯಲ್ಲಿ ಬಿದ್ದುಬಿಟ್ಟ. ತನಗಾದ ನೋವು, ತರಚುಗಾಯಗಳಿಗಾಗಿ ಅವನು ಗೋಳಿಡುತ್ತ ಕಾಪಾಡಿ!! ಕಾಪಾಡಿ !!ಎಂದು ಕೂಗುತ್ತಿರುವಾಗ ಒಬ್ಬ ನೆರೆಯವನು ಅವನ ಕೂಗು ಕೇಳಿ ಬಾವಿಯಬಳಿ ಹೋದನು. ಅಲ್ಲಿ ನಡೆದುದನ್ನು ಕೇಳಿ ಬಾವಿಯಲ್ಲಿನ ಖಗೋಳಶಾಸ್ತ್ರಜ್ಞನಿಗೆ ಹೇಳಿದನು " ಅಯ್ಯಾ ಮೂರ್ಖ ಮುದುಕ, ಆಕಾಶದ ಮೇಲಿರುವ ನಕ್ಷತ್ರದ ಮೇಲೆ ಗಮನ ಕೊಡುವ ನೀನು ನೆಲದ ಮೇಲೇನಿದೆ ಎಂದು ನೋಡುವುದಿಲ್ಲವಲ್ಲ!!