ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ

ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ

ಫೆಬ್ರವರಿ ೬ - ೨೦೦೮ , ಪುಷ್ಯ ಬಹುಳ ಅಮಾವಾಸ್ಯೆ- ಇಂದು ಪುರಂದರದಾಸರ ಆರಾಧನೆ. ಕ್ರಿ.ಶ.೧೫೬೪ರಲ್ಲಿ ಪುರಂದರ ದಾಸರು ಇದೇ ದಿನ ಕಾಲವಾದದ್ದು.

ಪುರಂದರದಾಸರು ಪುರಂದರಗಡದಿಂದ ಬಂದವರೆಂದು ಹೇಳುವ ಮಾತಿದೆ - ಆದರೆ, ಹದಿನೈದನೇ ಶತಮಾನದಲ್ಲಿ ಅಲ್ಲಿ ಕನ್ನಡಿಗರಿದ್ದರೇ ಎನ್ನುವ ಪ್ರಶ್ನೆ ನನಗೆ ಬರುತ್ತಲೇ ಇತ್ತು. ಅವರು ಪುರಂದರಪುರವೆಂದು ಹೆಸರಾದ ಮಲೆನಾಡಿನ ಕ್ಷೇಮಪುರದವರು ಇರಬೇಕೆಂಬ ಆಧಾರಗಳಿವೆ ಎಂಬ ಮಾತನ್ನು ಓದಿದ್ದೆ.ಆದರೆ, ಈ ಕ್ಷೇಮಪುರ ಎಲ್ಲಿದೆ, ಏನುಕಥೆ ಎಂದು ತಿಳಿದಿರಲಿಲ್ಲ.

ಆದರೆ ಸ್ವಲ್ಪ ದಿನಗಳ ಹಿಂದೆ, ಷಡಕ್ಷರಿ ಮಂತ್ರವನ್ನು ಉಪಯೋಗಿಸಿದಾಗ :) ಈ ಕ್ಷೇಮಪುರ ಗೇರುಸೊಪ್ಪೆ ಎಂದು ತಿಳಿದುಬಂತು. ಜೈ ಗೂಗಲ್! GOOGLE - ಷಡಕ್ಷರಿ ಮಂತ್ರ ಯಾವುದೆಂದು ತಿಳಿಯಿತಲ್ಲ ;) ?

ಪುರಂದರ ದಾಸರು ಗೇರುಸೊಪ್ಪೆಯವರಿರಬೇಕೆಂಬುದು ನಂಬಬಲ್ಲ ಮಾತೇ. ಅದು ಆ ಕಾಲದಲ್ಲಿ ದೊಡ್ಡ ವ್ಯಾಪಾರ ಕೇಂದ್ರವಾಗಿತ್ತಂತೆ. ಪರದೇಶಗಳಿಗೆ ಸಂಬಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಗೇರುಸೊಪ್ಪೆಯವರಲ್ಲಿ ಹಣವಿದ್ದುದ್ದೂ, ಅದಕ್ಕೆ ತಕ್ಕಂತೆ ಅಲ್ಲಿ ರತ್ನಪಡಿ ವ್ಯಾಪಾರಿಗಳಿದ್ದಿರಬಹುದಾದ್ದೂ ಒಂದಕ್ಕೊಂದು ತಾಳೆಯಾಗುತ್ತೆ. ಈ ವಿಷಯಕ್ಕೆ ಹೆಚ್ಚಿನ ಮಾಹಿತಿಗೆ ವಿಕಿಪೀಡಿಯಾ ನೋಡಿ.

ಪುರಂದರ ದಾಸರ ಆರಾಧನೆಯಂದು, ಅವರಿಗೊಂದು ನುಡಿನಮನ ಈ ಕೆಳಗಿನ ಕೊಂಡಿಯಲ್ಲಿದೆ. ಇದು ಕೆಲವು ವರ್ಷಗಳ ಹಿಂದೆ ಸಾಹಿತ್ಯಾಸಕ್ತ ಗುಂಪೊಂದರ ಮುಂದೆ, ದಾಸ ಸಾಹಿತ್ಯದ ಸಾಹಿತ್ಯ-ಸಂಗೀತ ಎರಡನ್ನೂ ಒಗ್ಗೂಡಿಸಿಕೊಂಡು ನಾನು ಮಾಡಿದ ಒಂದು ಭಾಷಣದ ಧ್ವನಿಮುದ್ರಿಕೆ. ಆಸಕ್ತರು ಕೇಳಬಹುದು

ದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ

http://hamsanandi.mypodcast.com/

ದಾಸಶ್ರೇಷ್ಠರನ್ನು ನೆನೆಯುವ ಇನ್ನೊಂದು ಬರಹವನ್ನು ನೀವು ಇಲ್ಲಿ ಓದಬಹುದು.

-ಹಂಸಾನಂದಿ

Rating
No votes yet