ನಾವಾಡುವ ನುಡಿಯೇ...ನಾವಿರುವ ತಾಣವೇ...

ನಾವಾಡುವ ನುಡಿಯೇ...ನಾವಿರುವ ತಾಣವೇ...

ಹೇಗಿತ್ತು ಕನ್ನಡನಾಡು. ದೇಶಭಕ್ತಿಯಲ್ಲಿ ನಂ.೧ ಆಗಿತ್ತು.

ಮಲಯಾಳಿಗಳು,ತೆಲುಗರು,ತಮಿಳರು ಬಂದಾಗ ಬೀದಿ ಪಕ್ಕದ ಜಿನಸಿ ಅಂಗಡಿಯಿಂದ ಹಿಡಿದು ಗಣಿ, ಕಾಡು,ನಾಡೆಲ್ಲಾ ಅವರ ಕೈಗೊಪ್ಪಿಸಿದರು.

ಮಾರ್ವಾಡಿಗಳು,ಕಾಶ್ಮೀರಿಗಳು ಬಿಡಿ,ನೇಪಾಳಿ,ಬಾಂಗ್ಲಾ,ಟಿಬೆಟಿಯನ್ನರನ್ನೂ ತುಂಬು ಹೃದಯದಿಂದ ಸ್ವಾಗತಿಸಿದರು.

ಹೊರರಾಜ್ಯದವರನ್ನು ಎಮ್.ಎಲ್.ಏ., ಎಮ್.ಎಲ್.ಸಿ., ಗಳನ್ನಾಗಿಯೂ ಮಾಡಿದರು.

ಅವರೆಲ್ಲರ ಭಾಷೆಗಳನ್ನು ಕಲಿತು ಅವರ ಭಾಷೆಯಲ್ಲೇ ಮಾತನಾಡಿದರು.

ನೀವಾಡುವ ನುಡಿಯೇ
ನಾವಾಡುವ ನುಡಿ
ನೀವಿರುವ ತಾಣವೇ
ನಿಮ್ಮದೇ ತಿಳೀ
ನಿಮ್ಮದೇ ಕಾಡು, ನಿಮ್ಮದೇ ನಾಡು, ಅಹಹಾ..ಅಹಹಾ..ಅಹಾ..ಹ..
ಇದು.. ಇದು ನೋಡಿ ‘ದೇಶಪ್ರೇಮ’.

ಅದು ಬಿಟ್ಟು ಕೇವಲ ನಾಲ್ಕನೇ ದರ್ಜೆ ಹುದ್ದೆಗೆ ಬಿಹಾರಿಗಳನ್ನು ಸೇರಿಸಿದರೆಂದು, ಬರೀ ಸಿಂಡಿಕೇಟ್‌ನ ಒಂದು ಹುದ್ದೆಗೆ ಆಂಧ್ರದವರನ್ನು ತಂದರೆಂದು ಹುಯಿಲೆಬ್ಬಿಸುವುದು..ಛೀ..ಕನ್ನಡಿಗರ ದೇಶಾಭಿಮಾನ ಕಮ್ಮಿಯಾಗುತ್ತಲಿದೆ.

Rating
No votes yet