ನನ್ನ ಕಲ್ಪನೆಯ ಸಾಲುಗಳು...

ನನ್ನ ಕಲ್ಪನೆಯ ಸಾಲುಗಳು...

ನಾ ಬರೆದ ಮೊದಲ ಕವನ...

ನಾ ಕಂಡೆ ಒಂದು ಕನಸು
ನನಸಾಗಲೆಂದು,
ಕೊನೆಗೂ ಕನಸಾಗೆ ಉಳಿಯಿತು,
ನನಸಾಗಬೇಕೆಂದುಕೊಂಡ ನನ್ನ ಕನಸು...

ಬ್ರಹ್ಮ ನನ್ನ ಹಣೆಬರಹ ಬರೆದು ಎಂದ,
ನಿನ್ನ ಹಣೆಬರಹ ಇಷ್ಟೆ,
ಅದಕ್ಕೆ ನಾ ಅಂದೆ,
ನಿನ್ನ ಪೆನ್ನಲ್ಲಿ ಶಾಯಿ ಇರುವುದು ಅಷ್ಟೆ...

ನನ್ನ ಸ್ನೇಹಿತ ರಿಂಗ್ಟೋನ್ ಕಳುಹಿಸಲು ಹೇಳಿದ,
ಕಳುಹಿಸಿದ್ದಕ್ಕೆ ಅವನಿಂದ ಪ್ರತಿಉತ್ತರ ಇರಲ್ಲಿಲ್ಲ, ಅದಕ್ಕೆ ಬರೆದೆ,

ನನ್ನ ಸ್ನೇಹಿತ ರಿಂಗ್ಟೋನ್ ಕಳುಹಿಸು ಎಂದ,
ಕಳುಹಿಸಿದ್ದಕ್ಕೆ ಅವನ ಸಂದೇಶದಿಂದ
ನನ್ನ ಫೋನ್ ಅನ್ನಲಿಲ್ಲ ಟೊನ್ ಟೊನ್...ಟೊನ್ ಟೊನ್...

ಭಕ್ತ ಬ್ರಹ್ಮನಿಗೆ ಕೇಳಿದ,

ದೇವ ಮಾತನಾಡಲು ಸೆಲ್ಫೋನ್ ಕೊಟ್ಟೆ,
ತಿಂಗಳಿಗೊಮ್ಮೆ ರೀಚಾರ್ಜಿಗೆ ಕಾರ್ಡ್ ಕೊಟ್ಟೆ,
ಆಯಸ್ಸಿಗೆ ಏನ್ ಕೊಟ್ಟೆ...?

ಅದಕ್ಕೆ ಬ್ರಹ್ಮ,

ನಿನ್ನ ಪುಣ್ಯಗಳೆ ರೀಚಾರ್ಜ್ ಕಾರ್ಡ್,
ಪಾಪ ತುಂಬಿದ ದಿನವೇ ಎಕ್ಸ್ಪೈರಿ ಡೇಟ್...

ಜೀವ ಜೀವನದ ಹಾದಿ,
ಭಾವ ಭವನೆಗಳ ಹಾದಿ,
ಭಕ್ತಿ ಮೊಕ್ಷದ ಹಾದಿ,
ಸ್ನೇಹ ಪ್ರೀತಿಯ ಹಾದಿ...

ನೀಲಿ ಆಕಾಶದಲ್ಲಿ ಬಿಳಿ ಮೋಡ ಚೆನ್ನ,
ಪ್ರಕೃತಿಯ ಮಡಿಲಲ್ಲಿ ಹಸಿರು ಚೆನ್ನ,
ನನ್ನೆದೆಯ ತಂಪಿನಲ್ಲಿ ನೀನಿದ್ದರೆ ಎಷ್ಟು ಚೆನ್ನ...

ಬದುಕಲು ಉಸಿರು ಬೇಕು,
ಪ್ರೀತಿಸಲು ಮನಸು ಬೇಕು,
ಮನುಷ್ಯನ ಸರಿಯಾದ ಹಾದಿಗೆ ಬೆಳಕು ಬೇಕು,
ನಿನ್ನಿಂದ ನನ್ನ ಬಾಳು ಹಸಿರಾಗಬೇಕು...

ಬಿಳಿ ಮೋಡ ಮಳೆಹನಿಯಾಗಿ ಭೂಮಿಸೇರಿದ ಹಾಗೆ,
ನೀರು ನದಿಯಿಂದ ನದಿಗೆ ಹರಿದು ಸಮುದ್ರ ಸೇರುವ ಹಾಗೆ,
ನೀನು ನನ್ನನ್ನು ಸೇರುವುದು ಯಾವಾಗ ಹೇಳೆ ನನ್ನ ಕಣ್ಣನೋಡುತ ಹಾಗೆ...

ಜೇನು ಹೀರದ ದುಂಬಿಯಿಲ್ಲ,
ರಾಗವಿಲ್ಲದ ಹಾಡಿಲ್ಲ,
ಸ್ನೇಹವಿಲ್ಲದ ಜೀವನ ಪ್ರಯೋಜನವಿಲ್ಲ,
ಪ್ರೀತಿ ಸಿಗದ ಜೀವನ ಸಾರ್ಥಕವಲ್ಲ...

ನನ್ನ ಸ್ನೇಹಿತನ ಹುಟ್ಟುಹಬ್ಬದ ಸಲುವಾಗಿ ಬರೆದೆ,

ಜನವರಿ ಎಂಟು ತಂದಿದೆ ಹುಟ್ಟು ಹಬ್ಬದ ನಂಟು,
ಈ ದಿನ ನಿನಗೆ ತರಲಿ ಖುಷಿಯ ಗಂಟು,
ನಾನಾಗುವೆ ನೀ ಬಯಸುವ ಪ್ರೀತಿಯ ಗಿಫ಼್ಟು,
ನೂರು ವರ್ಷ ಬಾಳು ಎಂದು ಹಾರೈಸುವೆ,
ಮನಸಿನಲ್ಲಿ ಸದಾ ಇರಲಿ ಈ ಸ್ನೇಹಿತನ ಪ್ರಿಂಟು...

ಸೂರ್ಯನ ಕಿರಣ ಭೂಮಿಗೆ ಬೇಕು,
ಹೂವು ಪರಿಮಳ ಚೆಲ್ಲಬೇಕು,
ಸ್ನೇಹಿತನ ಮನಸ್ಸು ಸಿಹಿ ಇರಬೇಕು,
ಕಹಿ ಇದ್ದಲಿ ಅವನಿಂದ ದೂರವಿರಬೇಕು...

ಪ್ರಥಮ ಸೂರ್ಯನ ಕಿರಣ,
ಪ್ರಥಮ ಮಳೆಹನಿಯ ಸ್ಪರ್ಷ ಭುವಿಗೆ,
ಪ್ರಕೃತಿಯ ಸಂಕೇತ,
ಮೊದಲ ಭೇಟಿ, ಮೊದಲ ಮಾತು,
ಸ್ನೇಹದ ಸಂಕೇತ,
ಮೊದಲ ನೋಟ, ಮೊದಲ ಮೌನ,
ಪ್ರೀತಿಯ ಸಂಕೇತ...

ಹುಟ್ಟುನಿಂದ ಕೆಲವು ವರ್ಷಗಳ ಕಾಲ
ಆಟವಾಡುವ ವಯಸ್ಸು,
ಬೇಕಿದ್ದು ಸಿಗದಿದ್ದಲ್ಲಿ ಮುನಿಸು,
ಯೌವನದಲ್ಲಿ ಕಾಲ ಕಳೆಯುವುದಕ್ಕೆಂದು
ಕಾಣುವ ಕನಸು,
ಕಂಡಿದ್ದೆಲ್ಲ ಸೊಗಸು ಎನ್ನುವ ಮನಸ್ಸು,
ಮನಸ್ಸಿಗೆ ಅನ್ನಿಸಿದ್ದೆಲ್ಲ ನನಸು ಮಾಡುವ ಹುಮ್ಮಸ್ಸು,
ಇದಕ್ಕೆಲ್ಲ ನಿರ್ಧಾರ ಮಾಡುವಷ್ಟರಲ್ಲಿ
ಮುಗಿಯುವುದು ನಮ್ಮ ಆಯಸ್ಸು...

ಮನುಷ್ಯನ ಮನಸ್ಸು ಹೂದೋಟದ ತಾಣ,
ಹಲವು ಮೊಗ್ಗುಂಟು, ಹಲವು ಮುಳ್ಳುಂಟು,
ಅರಳಿರುವ ಹೂ... ಕೆಲವುಂಟು,
ಹೂವಿನಂತಿರುವ ಸ್ನೇಹಿತರ ಜೊತೆ ನಮ್ಮ ನಂಟು,
ಅರಳಿರುವ ಹೂಗಳನ್ನು ಬಾಡದ ಹಾಗೆ
ಕಾಪಾಡಿಕೊಂಡರೆ ಅದೇ ನಮ್ಮ ಗಂಟು...

ಜಣಜಣ ಕಾಂಚಾಣದ ಆಸೆಯ ಬದಲು,
ಕ್ಷಣಕ್ಷಣ ಒಂಟಿ ಜೀವನಕ್ಕಿಂತ,
ಮನಮನ ಪರಸ್ಪರ ಮಿಡಿಯುವ,
ಸ್ನೇಹ ಜೀವನ ಒಳಿತು...

ನೀ ಬಂದು ನನ್ನ ಮುಂದೆ ನಿಂತ ಕ್ಷಣ,
ಅನ್ನಿಸುತ್ತದೆ ಮನಬಂದಂತೆ ಹಾರೋಣ,
ನೀ ನೋಡುವ ರೀತಿಯಿಂದ ಅನ್ನಿಸುವುದು ಮನದಾಸೆ ಹೇಳೋಣ,
ಕಾದು ಕಾದು ಸಾಕಾಗಿದೆ ಒಂದು ಸಾರಿಯಾದರೂ
ಮಾತನಾಡುಸುತ್ತೀಯಾ ನೋಡೋಣ?,
ಪ್ರೀತಿ ತುಂಬಿದ ಕಣ್ಣುಗಳು ಕಾಯುತ್ತಿದೆ
ಒಂದು ದಿನ ನಾವು ಸೇರೋಣ...

ಪ್ರೀತಿ ಎಂಬುದು ಮರೀಚಿಕೆಯಂತೆ,
ಸಿಗದಿದ್ದರೆ ಬಿಡು ಅದರ ಚಿಂತೆ,
ಪಡೆಯುವುದಕ್ಕಿಂತ ಪ್ರಯತ್ನ ಮುಖ್ಯವಂತೆ,
ಆದರೂ ಪ್ರಯತ್ನ ಬಿಡಬಾರದಂತೆ,
ಪ್ರತಿಯೊಬ್ಬ ಮನುಷ್ಯನು ಬಯಸುವುದು ಪ್ರೀತಿಯನ್ನೆ ಅಂತೆ,
ನಿನ್ನ ಮನಸ್ಸು ಧೃಡವಾಗಿದ್ದರೆ ಅದೇ ನಿನ್ನ ಹತ್ತಿರ ಬರುವುದಂತೆ...

ಸೋಲು ಅನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಬರುವುದಂತೆ,
ಸೋಲು ಗೆಲುವಿನ ಮೆಟ್ಟಲುಗಳಂತೆ,
ಸೋತೆ ಎಂದು ಯಾವಾಗಲು ಚಿಂತಿಸಬಾರದಂತೆ,
ಗೆದ್ದೇಗೆಲ್ಲುವೆ ಎಂಬ ಆಸೆ ಮನಸಿನಲ್ಲಿ ಸದಾ ಇರಬೇಕಂತೆ,
ಸೋಲು ಆತ್ಮವಿಶ್ವಾಸ ತುಂಬಬೇಕಂತೆ,
ಗೆಲುವು ದುರಹಂಕಾರ ತುಂಬಬಾರದಂತೆ,
ಏನೆಯಾಗಲಿ ಒಮ್ಮೆ ಸಾಧಿಸಿ ತೋರಿಸುವಂತೆ,
ಆ ದಿನ ಇನ್ನು ದೂರವಿಲ್ಲವಂತೆ...

ಸಮುದ್ರದ ಅಲೆ ಪದೇಪದೇ ದಡ ಮುಟ್ಟುತ್ತಿರುವ ಹಾಗೆ,
ಸೂರ್ಯನು ದಿನನಿತ್ಯ ಭೂಮಿಯನ್ನು ಬೆಳಗುತ್ತಿರುವ ಹಾಗೆ,
ನೀ ನನ್ನ ಮನಸ್ಸನ್ನು ಯಾವಾಗಲು ತಟ್ಟುತ್ತಲಿರುವೆ,
ನನ್ನಾಕೆ ಬಂದಳು ಎಂದು ಬಾಗಿಲು ತೆಗೆದರೆ ಮಾಯವಾಗಿರುವೆ...ಯಾಕೆ?

ಆಸೆ ಎಂಬ ಮನೆಯ ಬಾಗಿಲು ನಾ ತಟ್ಟಲು,
ಬರಲಿಲ್ಲ ಪ್ರತಿಉತ್ತರದ ಕೂಗು,
ಯಾರಾದರು ಬಾಗಿಲು ತೆಗೆಯುತ್ತಾರೆ ಎಂದು ಕಾದು,
ಮನಸ್ಸು ಮಾಡುತ್ತಲೇ ಇತ್ತು ಆತುರದ ಸದ್ದು,
ಅಲ್ಲೆ ಇದ್ದ ಉಯ್ಯಾಲೆ ಮೇಲೆ ಕೂತು,
ಹಿಂದಿನದು ಮೆಲುಕು ಹಾಕುತ್ತ ಬಗೆಬಗೆಯ ನಗು,
ಕೊನೆಗೂ ಆಸೆ ಪಟ್ಟಿದನ್ನು ಪಡೆಯದೆ ಅಲ್ಲೆ ಮಲಗಿ ಆದೆ ನಾ ಮಗು...

Rating
No votes yet