ಕನ್ನಡ ನಾಲಡಿಗಳು - ದಯವಿಟ್ಟು ಈ ಪದ್ಯ ಬಿಡಿಸಿ

ಕನ್ನಡ ನಾಲಡಿಗಳು - ದಯವಿಟ್ಟು ಈ ಪದ್ಯ ಬಿಡಿಸಿ

ಆರ್.ತಾತ (ಎಂ.ಎ.ಎಲ್.ಟಿ) ಇವರು ತಮಿಳಿನಿಂದ ಕನ್ನಡಯ್ಸಿರುವ ಕ್ರುತಿಯೇ 'ಕನ್ನಡ ನಾಲಡಿಗಳು'. ತಮಿಳಿನಲ್ಲಿ 'ನಾಲಡಿಯಾರ್' ಎಂದು ಹೆಸರುವಾಸಿಯಾಗಿರುವ ಇದು ಹಲವು ನೀತಿಮಾತುಗಳನ್ನೊಳಗೊಂಡ ಕ್ರುತಿ.
ಆರ್. ತಾತರವರು ಇದನ್ನು ಕನ್ನಡಕ್ಕೆ ತರುವಾಗ ಹೀಗೆ ಬರೆದಿದ್ದಾರೆ

ಅವರೊಳ್ ನಾಲಡಿಯೆಂದೆಂ
ಬುವ ಕ್ರುತಿಯಂ ತಮಿಳ ಬಲ್ಲಹರ್ ಪಿರಿದುಂ ಮೆ
ಚ್ಚುವರಾ ಕ್ರುತಿಯಂ ಕನ್ನಡಿ
ಸುವ ಬಗೆಯಿಂದೆರಗಿದಪ್ಪೆನಾಸರಸತಿಗಾಂ

(ಸುಮಾರು ಎಲ್ಲ ಕನ್ನಡದ ಕಬ್ಬಿಗರು ಸರಸತಿಯನ್ನು ನೆನೆದೆ ಕಬ್ಬ ನೆಗೞಿಗೆ ಮುಂದಾಗುತ್ತಾರೆ)

ಈ ಪದ್ಯ 'ಅಱಿಯಮೆ' ಎಂಬ ಕಂತಿನಲ್ಲಿ ಬರುತ್ತದೆ.

ಬಡತನಮದು ಕೂಱಱಿವುೞಿ
ದೊಡೆ ಪೇರೈಸಿರಿಯದಿರ್ದ್ದೊಡೆಲ್ಲರ ಕಣ್ಗಂ
ಕಡುಸೊಬಗೆನಲೊಡವೆಗಳಂ
ತೊಡಲೊಡಮೇಂ ಪೇಡಿಯುೞಿದು ಗಂಡಾಳ್ತನಮಂ

ಬಿಡಿಸಿದರೆ,
ಬಡತನಮ್ ಅದು ಕೂಱ್ ಅಱಿವು ಉಳಿದೊಡೆ ಪೇರ್ ಅಯ್ಸಿರಿಯದಿರ್ದೊಡೆ(ಪೇರಯ್ಸು=ಸೇರಿಸು) ಎಲ್ಲರ ಕಣ್ಗಂ ಕಡುಸೊಬಗು ಎನಲ್ ಒಡವೆಗಳಂ ತೊಡಲ್ ಒಡಮೇಂ ಪೇಡಿ ಉಳಿದು ಗಂಡು ಆಳ್ತನಮಂ

ಇದರಲ್ಲಿ ಒಂದೇ ಗೊತಾಗಿದ್ದು. ಕೂಱ್ ಅಱಿವು ಉಳಿದೊಡೆ ಅಂದ್ರೆ ಒಲವಿನ ಬಗ್ಗೆ ತಿಳುವಳಿಕೆ ಉಳಿದರೆ ಅದು ಬಡತನ. ಒಟ್ನಲ್ಲಿ ನಾವು ಪಿರೂತಿಯ ಬಗ್ಗೆ ಬೆಲೆ ಉಳಿಸಿಕೊಂಡರೆ ನಾವು ಬಡವರಾಗೇ ಇರುತ್ತೇವೆ :)

ಇದರ ತಿರುಳು ಗೊತ್ತಾದವರು ತಿಳಿಸಿ

Rating
No votes yet