ನರ್ತನ ಜಗತ್ತಿಗೊಂದು ಪರಿಭ್ರಮಣ

ನರ್ತನ ಜಗತ್ತಿಗೊಂದು ಪರಿಭ್ರಮಣ

ಬರಹ

ನರ್ತನ ನೋಡೋಕೆ ಚೆನ್ನ. ಸಂಗೀತ ಕೇಳೋಕೆ ಚೆನ್ನ. ಓದೋಕೆ...?
ಎಲ್ಲವೂ ಚೆನ್ನ!

ನರ್ತನವನ್ನು ನೋಡಿ ಅನಂದಿಸುತ್ತೇವೆಯೇ ಹೊರತು, ನರ್ತನ ಬಗೆಗಿನ ಸಮಗ್ರ ಮಾಹಿತಿ ನಮಗಿಲ್ಲ. ನರ್ತನದ ವಿವಿಧ ಪ್ರಕಾರಗಳು, ಅದಕ್ಕಿರುವ ಸಾಮರ್ಥ್ಯ, ಅರ್ಥ.... ಇತ್ಯಾದಿ ಮಾಹಿತಿಯನ್ನು ಇನ್ನು ಮುಂದೆ ಅಂತರ್ಜಾಲದಲ್ಲಿ ಕನ್ನಡಿಗರು ಕಾಣಬಹುದಾಗಿದೆ. ಸ್ನೇಹಿತೆ ಮನೋರಮಾ ‘ನೂಪುರ ಭ್ರಮರಿ’ ಎಂಬ ಹೆಸರಿನ ವೆಬ್ ಸೈಟನ್ನು ಇದೇ ಫೆಬ್ರವರಿ ೧೦ರಂದು ಪ್ರಾರಂಭಿಸಿದ್ದಾಳೆ.

ಲೋಕ ಭ್ರಮರಿ, ಅಕ್ಷರ ಭ್ರಮರಿ, ರಂಗ ಭ್ರಮರಿ... ಹೀಗೆ ವಿವಿಧ ವಿಭಾಗಗಳ ಅಡಿಯಲ್ಲಿ ಹಲವು ಬರಹಗಳನ್ನು ಕಾಣಬಹುದು. http://www.noopurabhramari.com/index.html
ತಾಣವು ನಿಮಗೆ ಖಂಡಿತ ಇಷ್ಟವಾಗಬಹುದು. ಅಷ್ಟೇ ಅಲ್ಲ ನರ್ತನ ಜಗತ್ತಿನೆಡೆಗೆ ನಿಮ್ಮನ್ನು ಮತ್ತೆ ಮತ್ತೆ ಸೆಳೆಯಬಹುದು. ಸಮಯ ಮಾಡಿ ಒಮ್ಮೆ ತಾಣಕ್ಕೆ ಬೇಟಿ ನೀಡಿ... ನಿಮ್ಮ ಪ್ರತಿಕ್ರಿಯೆ ತಿಳಿಸಿ....