ಕಾವೇರಿ ನೀರಿಡಾರ್ ಯೋಜನೆ

ಕಾವೇರಿ ನೀರಿಡಾರ್ ಯೋಜನೆ

ಈ ಯೋಜನೆಯ ಕರಡುಪ್ರತಿ ಸಿದ್ಧವಾಗುತ್ತಿದೆ.ಅದರ ಒಂದು ಝಲಕ್ ಇಲ್ಲಿದೆ.
ಜನಾಪ್ರಿಯ ಸರಕಾರ ಬಂದಾಗ ಈ ಯೋಜನೆ ಸುರುಮಾಡಲಾಗುವುದು.

FAQs :-

೧. ಏನಿದು ಈ ನೀರಿಡಾರ್ ಯೋಜನೆ ?
ಶ್ರೀಮಂತರ ಕಾರು, ಬೆಂಗಳೂರಿನಿಂದ ಮೈಸೂರಿಗೆ ವೇಗವಾಗಿ ಹೋಗಲು ಸುರು ಮಾಡಿದ,
‘ಕಾರಿ’ಡಾರ್‌ನಂತೆ, ಕೊಡಗಿನಿಂದ ನೀರು ಹೊಗೆನಕಲ್ ಮೂಲಕ ಚನ್ನೈಗೆ ವೇಗವಾಗಿ
ಹೋಗಲು ಸುರುಮಾಡಿದ ಯೋಜನೆ ‘ನೀರಿ’ಡಾರ್..

೨. ಕೊಡಗಿನಿಂದಲೇ ಏಕೆ ?
ಕಾವೇರಿ ನದಿ ಕೊಡಗಿನಿಂದ ಹರಿಯುತ್ತಾ ಹಾದಿಯುದ್ದಕ್ಕೂ ಮಲಿನವಾಗುತ್ತಾ,
ತಮಿಳುನಾಡು ತಲುಪುವುದು. ನಮ್ಮ ಸಹೋದರರೇ ಆ ‘ಕೊಳಕು’ ನೀರು ಕುಡಿಯಲು
ಉಪಯೋಗಿಸುವುದು ಬೇಸರದ ಸಂಗತಿ. (ಮೇಲಿಂದ ಮೇಲೆ ಕೋರ್‍ಟ್‌ನಲ್ಲಿ ಕೇಸು ಹಾಕಿ,
ಹಾಕಿ,ತಮಿಳು ನಾಡೇ ಈ ಬೇಡಿಕೆ ಕೇಳುವ ಮೊದಲೇ) ಕಾವೇರಿಯ ಉಗಮದಿಂದಲೇ
ಶುದ್ಧ ನೀರನ್ನು ಕೊಳವೆ ಮೂಲಕ ತಮಿಳುನಾಡಿಗೆ ತಲುಪಿಸುವುದು ಈ ಯೋಜನೆಯ
ಗುರಿ.

೩. ಕನ್ನಡಿಗ ರೈತರ ಗತಿ ?
ಈಗೇನು ಚೆನ್ನಾಗಿದೆಯಾ? ಈಗ ಸಿಗುತ್ತಿರುವ ಸ್ವಲ್ಪ ನೀರು ಉಪಯೋಗಿಸಿ ಅವರು
ಬೆಳೆದ ಬೆಳೆಗೆ ಚಿಕ್ಕಾಸೂ ಬೆಲೆಯಿಲ್ಲ.
ಸಾಲಮಾಡಿ ಬೆಳೀತಾರೆ, ಸಾಲಮಾಡಿ ಸಾಗಿಸುತ್ತಾರೆ,
ಬೆಲೆಯಿಲ್ಲದೇ ರಸ್ತೆಗೆ ಚೆಲ್ಲಿ, ಸಾಲಮಾಡಿ ಹಿಂದೆ ಬರುತ್ತಾರೆ.

ಎಲ್ಲಾ ರಾಜಕಾರಣಿಗಳೂ ಹರಿಸುವ ಮೊಸಳೆ ಕಣ್ಣೀರನ್ನೇ ಸಂಗ್ರಹಿಸಿದರೆ ೩೦೦
ಟಿ.ಎಮ್.ಸಿ ದಾಟುವುದು.ಅದನ್ನೇ ಸಂಗ್ರಹಿಸಿ ಮುಂದಿನ ಬೆಳೆಗೆ
ಉಪಯೋಗಿಸಲಿ. ಅಥವಾ-
ಅವ್ರ ಜಮೀನು ಕೊಟ್ಟರೆ, ನಮ್ಮ ಸ್ಯಾಟಲೈಟ್ ಟೌನ್‌ಷಿಪ್‌ನಲ್ಲಿ ಒಂದು ಫ್ಲಾಟ್,
ಇಲ್ಲಾ ಅವರ ಜಮೀನಿನಲ್ಲಿ ಐ.ಟಿ., ಬಿ.ಟಿ.,ಮಾಡಿ ನೌಕರಿ ಕೊಡಿಸುವೆವು.

೪. ಅದ್ಸರಿ..ಬೆಂಗಳೂರಿಗರಿಗೆ ನೀರು?
ಆಕಾಶದೆತ್ತರಕ್ಕೆ ದಿನೇ ದಿನೇ ಬೆಳೆಯುತ್ತಿರುವ ಬೆಂಗಳೂರಿಗೆ, ಈಗ ಸಿಗುವ
ಕಾವೇರಿ ನೀರು ಎಲ್ಲಿಗೆ ಸಾಕು? ರಿ..ರಿ..ರಿಸೈಕಲ್ ಮಾಡಿ ಉಪಯೋಗಿಸಬೇಕು.
ನಮ್ಮ ಈ ಯೋಜನೆ ಯಲ್ಲಿ ಸಂಗ್ರಹವಾದ ಹಣದಲ್ಲಿ ಅಲ್ಲಲ್ಲಿ ನೀರು ಬಂಕ್
ತೆರೆದು ಹಿಮಾಲಯದಿಂದಲೇ ಮಿನರಲ್ ವಾಟರ್ ತರಿಸಿ ಹಂಚುವೆವು.
ಐ.ಟಿ...ಯವರು ಅಮೆರಿಕನ್ ಡಾಲರ್ ಜತೆ ವಾಟರ್ ತರಿಸುವರು.ಭಯಬೇಡ.

Rating
No votes yet

Comments

Submitted by ಗಣೇಶ Mon, 10/08/2012 - 00:04

In reply to by venkatb83

ಸಪ್ತಗಿರಿವಾಸಿಯವರೆ,
ಕ್ಷಮಿಸಿ. ನಿಮ್ಮ ಪ್ರತಿಕ್ರಿಯೆ ನೋಡಿರಲೇ ಇಲ್ಲ. ಈವಾಗ ಕಾವೇರಿ ಬಗ್ಗೆ ಬಂದ ಲೇಖನಕ್ಕೆ ಕೊಂಡಿ ಕೊಡೋಣ ಎಂದು ನೋಡಿದಾಗ....
ತಮ್ಮ ಪ್ರತಿಕ್ರಿಯೆಗೆ, ಜತೆಗೆ ಅದನ್ನು(FAQವನ್ನು) ವಿಂಗಡಿಸಿ ಬರೆದದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.
ಕಾವೇರಿ ನಮ್ಮದು(ನೀರು ಅವರಿಗೆ).ಸಪ್ತಗಿರಿವಾಸಿಗೆ ಜೈ.
-ಗಣೇಶ.

Submitted by venkatb83 Mon, 10/08/2012 - 16:59

In reply to by ಗಣೇಶ

@ಗಣೇಶ್ ಅಣ್ಣ

ಕಾವೇರಿ ಸಮಸ್ಯೆ ಎದುರಾದಾಗಲೇ ಮತ್ತೆ ಈ ಬರಹ ನಂ ಕಣ್ಣಿಗೆ ಬಿದ್ದದ್ದು ಸೋಜಿಗವೇನು ಅಲ್ಲ..!! ನೀವ್ ಬರೆದದ್ದು ಯಾವತ್ತಿಗೂ ಸಲ್ಲೋದೆಯ....ಆ ಸಮಸ್ಯೆ ಬಗ್ ಹರ್ಯೋ ಹಾಗಿಲ್ಲ .. ನಿಮ್ ಲೇಖನ ಪ್ರತಿ ವರ್ಷವೂ ಓದಬೇಕಾದ್ದೆ...!!

ನನ್ನಿ

ಶುಭವಾಗಲಿ..

\|

Submitted by ಗಣೇಶ Wed, 10/10/2012 - 00:05

In reply to by Shreekar

ಶ್ರೀಕರ್ ಅವರೆ,
ಚುರುಮುರಿ ಓದಿದ ಮೇಲೆ ನನ್ನ ತಪ್ಪಿನ ಅರಿವಾಯಿತು. ಕಾವೇರಿ ಮಾತ್ರವಲ್ಲಾ..ನೇತ್ರಾವತಿ, ಕೃಷ್ಣಾ ಎಲ್ಲಾ ನದಿಗಳನ್ನು ಕಾರಿಡಾರ್ ಯೋಜನೆ ಮೂಲಕ ತಮಿಳ್ನಾಡಿಗೆ ಹರಿಸುವ ಯೋಜನೆ ಮಾಡುವೆ;
ನಮ್ಮ ರಾಜ್ಯದ ನಾಯಕರು "ನಾರಿ ಮನಕ್ಕೆ ಕೋರ್ಟ್ ಸೋತು ತೀರ್ಮಾನ ನಮ್ಮ ಕಡೆ" ಅಂದುಕೊಂಡರು. ಆದರೆ ಗೆದ್ದದ್ದು ನಾರಿ(ಜಯಮ್ಮ) ಮನ(ಮೋಹನ ಸಿಂಗ್)ರೆ!

Submitted by Shreekar Wed, 10/10/2012 - 19:16

In reply to by ಗಣೇಶ

@ ಗಣೇಶ

ಮನುಷ್ಯನಿಗೆ ಸಿಹಿ ಒಳ್ಳೆಯದಲ್ಲ, ಹಾಗಲಕಾಯಿ ಕಹಿ ಒಳ್ಳೆಯದು ಎಂಬುದು ನಿಮಗೆ ತಿಳಿಯಲಾರದ್ದೇನಲ್ಲ !

ಕಾವೇರಿ ಜಗಳದಲ್ಲಿ ಯಾರು ಸರಿ ಯಾರು ತಪ್ಪು ಎಂಬುದು ದಕ್ಷಿಣ ಕನ್ನಡದ ನಿಮಗೆ ನಮಗೆ ಅಮುಖ್ಯ.

ಎರಡೂ ಕಡೆಯವರು ನಡೆಸುತ್ತಿರುವ ಮಾಡು ಯಾ ಮಡಿ ಎಂಬಂಥಹ ಹೋರಾಟದ ಪಾಠ ಮಾತ್ರ ಪ್ರಸ್ತುತ.

ನಮ್ಮ ನೇತ್ರಾವತಿಯ ಮೇಲೆ, ನಮ್ಮ ನೆಲ, ಜಲಗಳ ಮೇಲೆ ಕೆಟ್ಟ ಕಣ್ಣಿಟ್ಟುರುವ ನಮ್ಮದೇ ರಾಜ್ಯದ ನಾಯಕರನ್ನು ನಿಷ್ಕ್ರಿಯರಾಗಿಸುವಲ್ಲಿ ಯಾವ ರೀತಿ ಹೋರಾಟ ಮಾಡಬೇಕೆಂದು ಆಲೋಚಿಸಬೇಕಾದ್ದು ಮಾತ್ರ ಅಗತ್ಯ.

Submitted by ಗಣೇಶ Wed, 02/20/2013 - 23:21

In reply to by Shreekar

ಗಣೇಶರ ಕಾವೇರಿ :) ಬಹಳ ಆಸೆಯಲ್ಲಿದ್ದೆ ಶ್ರೀಕರ್‌ಜಿ, http://vijaykarnataka.indiatimes.com/articleshow/18589664.cms ಥತ್..ಈ ರಾಜಕಾರಣಿಗಳು, ಹೆಸರುವಾಸಿ ವಕೀಲರು,ಕೇಂದ್ರದ ಸಚಿವರು, ಪ್ರಧಾನಿ... ಯಾರನ್ನೂ ದೂರಿ ಪ್ರಯೋಜನವಿಲ್ಲ. ಎಲ್ಲಾ ತಮ್ಮ ಲಾಭ ನೋಡುವವರೇ.; ಇನ್ನು ನೀವಂದಂತೆ ನೇತ್ರಾವತಿಯನ್ನಾದರೂ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಅದನ್ನೂ ಬೆಂಗಳೂರಿಗೆ ತಿರುಗಿಸಿ :) ಅಲ್ಲಿಂದ ಜಯಲಲಿತಾಳ ಪಾದಕ್ಕೆ ಈ ನಾಲಾಯಕ್ ರಾಜಕಾರಣಿಗಳು ಬರ್ತ್‌ಡೇ ಉಡುಗೊರೆಯಾಗಿ ಕೊಟ್ಟಾರು. ಇನ್ನು ಒಂದು ದಾರಿ ಇದೆ- ತಮಿಳು ಕಲಿಯುವುದು. ಮಳೆ ಬರದಿದ್ದರೆ... ಬೆಂಗಳೂರು,ಮಂಡ್ಯ, ಮೈಸೂರು ತಮಿಳುನಾಡಿಗೆ ಸೇರಿಸಿಕೊಳ್ಳಿ ಎಂದು ಜಯಲಲಿತಾಳಲ್ಲಿ ಮೊರೆಯಿಡುವುದು.ಆಕೆ ಏನಾದರೂ ನೀರಿನ ಕೊರತೆಯಾಗದಂತೆ ನೋಡಿಕೊಂಡಾಳು. :(