ಅಪ್ಪ/ಅಮ್ಮ/ಗಂಡನ ಗೋರಿಯಿಂದ ಗದ್ದುಗೆಯತ್ತ ಹೊರಡುವ ನಾಯಕರು, ನಾಯಕಿಯರು...

ಅಪ್ಪ/ಅಮ್ಮ/ಗಂಡನ ಗೋರಿಯಿಂದ ಗದ್ದುಗೆಯತ್ತ ಹೊರಡುವ ನಾಯಕರು, ನಾಯಕಿಯರು...

ಅಮೆರಿಕದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್‍ನ ಹೆಂಡತಿಯೂ ಒಬ್ಬ ಸ್ಪರ್ಧಿ. ಈಕೆ ಒಬ್ಬ ಸ್ವಯಂಕೃಷಿ (self-made) ಹೆಣ್ಣುಮಗಳು ಎನ್ನುವುದರಲ್ಲಿ ಯಾವುದೆ ಸಂದೇಹವಿಲ್ಲ. ಈಕೆ ದೊಡ್ಡಮಟ್ಟದ ಈ ಚುನಾವಣೆಗೆ ನಿಂತಿರುವ ಸಂದರ್ಭದಲ್ಲಿ ಎದ್ದು ಕಾಣಿಸುವುದು ಬಿಲ್ ಕ್ಲಿಂಟನ್‌ನ low-profile. ಅಮೆರಿಕದ ಮಟ್ಟಿಗೆ ಹೆಂಡತಿ ಪರವಾದ ಬಿಲ್ ಕ್ಲಿಂಟನ್‌ನ ಚುನಾವಣಾ ಪ್ರಚಾರ low-profile ಅಲ್ಲದೆ ಇರಬಹುದು. ಅಮೆರಿಕನ್ನರು ಅದನ್ನು, oh, this is not low-profile, ಎನ್ನಬಹುದು. ಅದರೆ, ನಮ್ಮ ಭಾರತದ ರಾಜಕಾರಣದ ಹಿನ್ನೆಲೆಯಿಂದ ನೋಡಿದರೆ, ಇದು ಖಂಡಿತವಾಗಿಯೂ ultra low profile. ಇದೆ ಪರಿಸ್ಥಿತಿಯಲ್ಲಿ ನಮ್ಮ ರಾಜಕಾರಣಿಗಳು, "ನಮ್ಮ ವಂಶವನ್ನು ಆಶೀರ್ವದಿಸಿ," ಎಂಬ ಹೀನಾಯ ಮಾತುಗಳನ್ನು ಆಡುತ್ತ, "ನಮ್ಮ ವಂಶ ಸತ್ಯ-ನ್ಯಾಯ-ನಿಷ್ಠೆ-ಜನಸೇವೆಗೆ ಹೆಸರಾದುದು," ಎಂಬಂತಹ ಡೋಂಗಿ ಮಾತುಗಳನ್ನು ಉಸುರುತ್ತ, ತಮ್ಮ ಮಗ/ಮಗಳು/ಹೆಂಡತಿಯರನ್ನು ಗೆಲ್ಲಿಸಿಕೊಳ್ಳಲು ಕಂಡಕಂಡವರ ಕಾಲಿಗೆಲ್ಲ ಬೀಳುತ್ತಿರುತ್ತಾರೆ; ವೃದ್ಧಾಪ್ಯದಲ್ಲೂ.

ಮತ್ತೊಬ್ಬ ಸ್ಪರ್ಧಿ ಬರಾಕ್ ಒಬಾಮನ ಹೆಂಡತಿಯೂ ಚುನಾವಣಾ ಪ್ರಚಾರ ಮಾಡುತ್ತಿದ್ದಾಳೆ. ಅಂದರೆ, ಸಭೆಗಳನ್ನು ಉದ್ಧೇಶಿಸಿ ಮಾತನಾಡುತ್ತಿದ್ದಾಳೆ. ನಮ್ಮಲ್ಲಿ CM ಗಳ ಹೆಂಡತಿಯರೂ ಪ್ರಚಾರಕ್ಕೆ ಹೋಗುತ್ತಾರೆ; ಹೆಂಗಸರಿಂದ ಆರತಿ ಎತ್ತಿಸಿಕೊಳ್ಳುತ್ತಾರೆ. ತಟ್ಟೆಗೆ ಐದುನೂರರ ನೋಟು ಹಾಕುತ್ತಾರೆ. ನನ್ನ ಗಂಡ ಪ್ರತಿನಿಧಿಯಾಗಿ ಇದಿದು ಮಾಡುತ್ತಾನೆ ಎಂದು ಒಮ್ಮೆಯೂ ಮಾತನಾಡುವುದಿಲ್ಲ. ನನ್ನ ಗಂಡನ್ನು ಗೆಲ್ಲಿಸಿ ಎನ್ನುವುದಕ್ಕಿಂತ ಅವರ ಬಳಿ ಬೇರೆ ಮಾತೇ ಇರುವುದಿಲ್ಲ.

ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿನ ನನ್ನ ಈ ವಾರದ ಅಂಕಣ ಲೇಖನ ಈ ಮೇಲಿನ ವಿಷಯಗಳ ಕುರಿತು ಮತ್ತು ಅಮೆರಿಕದ ರಿಪಬ್ಲಿಕನ್ ಪಕ್ಷದಿಂದ ಉಪ-ರಾಷ್ಟ್ರಪತಿ ಅಭ್ಯರ್ಥಿಯಾಗಿ ಕೆಲವರು ಬಾಬ್ಬಿ ಜಿಂದಾಲ್ ಹೆಸರನ್ನು ತೇಲಿಬಿಡುತ್ತಿರುವುದರ ಕುರಿತಾಗಿದೆ. ಪೂರ್ಣ ಲೇಖನ ಇಲ್ಲಿದೆ:
http://amerikadimdaravi.blogspot.com/2008/02/blog-post_13.html

ಲೇಖನದ ವಿಡಿಯೊ ಪ್ರಸ್ತುತಿಗೆ ಇಲ್ಲಿ ಕ್ಲಿಕ್ಕಿಸಿ
Rating
No votes yet