ಶಿವರಾತ್ರಿ

ಶಿವರಾತ್ರಿ

ಬರಹ

ಇದೇ ತಿಂಗಳ ೫ - ೬ನೇ ದಿನಾಂಕಗಳಂದು ಬರುವ (ಪಾಲ್ಗುಣ ಚತುರ್ದಶಿ) ಶಿವರಾತ್ರಿ ನಮಗೆಲ್ಲಾ ಒಂದು ಪ್ರಮುಖ ಹಬ್ಬ. ಅಂದು ಶಿವನನ್ನು ಆರಾಧಿಸಿ ಪುಣ್ಯ ಸಂಪಾದನೆಯಲ್ಲಿ ಅತಿ ಹೆಚ್ಚಿನ ಗಳಿಕೆ ದೊರಕಿಸಿಕೊಳ್ಳುವ ಕಾತುರ, ಆತುರ ಭಕ್ತರೆಲ್ಲರಿಗೆ. ಶಿವದೇವಾಲಯಗಳಿಗೆ ಭಕ್ತರು ತಮ್ಮೆಲ್ಲಾ ಆಸೆ ಆಕಾಂಕ್ಷೆಗಳನ್ನು ಹೊತ್ತು ಶಿವನ ಆರಾಧನೆಯನ್ನು ಮಾಡುವ ತವಕ.
ಈ ಸಂದರ್ಭದಲ್ಲಿ ಸಂಪದದ ಓದುಗರಿಗೆ ಕಳೆದ ವರ್ಷವಷ್ಟೇ ಜೀರ್ಣೋದ್ಧಾರಗೊಂಡ ಚಿಕ್ಕಮಗಳೂರು ಜಿಲ್ಲೆ/ತಾಲ್ಲೂಕಿನ ಲೆಖ್ಯಾ ಹೋಬಳಿ ಬೆಳವಾಡಿ ಗ್ರಾಮದಲ್ಲಿರುವ ಉದ್ಭವ ಕಲ್ಲೇಶ್ವರ ಸ್ವಾಮಿಯ ದರ್ಶನವನ್ನು ಮಾಡಿಸುವುದು ನನ್ನ ಆಸೆ. ನಮ್ಮ ಕುಟುಂಬವರ್ಗವೇ ಮುಂದಾಗಿ ನಿಂತು, ವೆಚ್ಚದ ಅತಿ ಹೆಚ್ಚು ಭಾಗವನ್ನು ಹೊತ್ತು, ಶೃಂಗೇರಿ ಶ್ರೀ ಶಂಕರಮಠ, ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರು, ಭಕ್ತರು ಹಾಗು ಆಸ್ತಿಕರೆಲ್ಲರ ಸಹಕಾರಗಳೊಂದಿಗೆ ಕೇವಲ ಒಂಭತ್ತು ತಿಂಗಳಿನಲ್ಲಿ ೧೨ನೇ ಶತಮಾನದ, ನೆಲ ಕಚ್ಚಿದ್ದ ದೇವಾಲಯವನ್ನು ಜೀರ್ಣೋದ್ಧಾರ ಕಾರ್ಯ ನಡೆಸಿ ೨೦-೦೧-೨೦೦೭ರಂದು ಸಾಂಗವಾಗಿ ನಡೆಸಲಾಯಿತು. ಮಹಿಮೆಯುಳ್ಳ ದೇವರೆನಿಸಿಕೊಂಡಿರುವ ಇಲ್ಲಿ ವರ್ಷಕ್ಕೊಂದುಬಾರಿ ಹಳ್ಳಿಗರೆಲ್ಲರೂ ಸೇರಿ "ಬಂಡಿಹಬ್ಬ"ವನ್ನು ಆಚರಿಸುತ್ತಾರೆ. ಶಿವರಾತ್ರಿಯಂದು ರಾತ್ರಿಯಿಡೀ ಜಾಗರಣೆ ಮಾಡಿ, ಶಿವನಿಗೆ ಅರ್ಚನೆಗಳನ್ನು ಸಲ್ಲಿಸಿ, ಜಾತಿ, ಮತ ಭೇದವಿಲ್ಲದೆ ಬೆರೆತು ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಾರೆ. ಬನ್ನಿ, ನೀವೂ ಸ್ವಾಮಿಯ ದರ್ಶನ ಪಡೆದು ಧನ್ಯರಾಗಿರಿ. ಜೀರ್ಣೋದ್ಧಾರ ಕಾರ್ಯದ ಪ್ರಮುಖ ಘಟ್ಟಗಳಲ್ಲಿ ತೆಗೆದ ಚಿತ್ರಗಳನ್ನು ನೋಡಬೇಕೆನಿಸಿದರೆ, ಇಲ್ಲಿದೆ ಲಿಂಕ್:
http://www.flickr.com/photos/agilenag/
ನೋಡಿ, ಅನಂದಿಸಿ, ಸ್ವಾಮಿಯ ಕೃಪೆಗೆ ಪಾತ್ರರಾಗಿ, ನಿಮ್ಮ ಅನಿಸಿಕೆಗಳನ್ನು ಮರೆಯದೆ ನನ್ನ ಇ-ಮೇಲ್ ವಿಳಾಸಕ್ಕೆ ನೀಡಿರಿ.
ಎ.ವಿ. ನಾಗರಾಜು
ಅಗಿಲೆನಾಗ್[ಎಟ್]ರೀಡಿಫ್ ಮೇಲ್.ಕಾಂ