ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ

ಬರಹ

ದೋರಸಮುದ್ರವೆಂದು ಒಂದಾನೊಂದು ಕಾಲದಲ್ಲಿ ಹೆಸರಾಗಿದ್ದ, ಇಂದಿನ ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯವು ೧೨ನೇ ಶತಮಾನದ್ದಾಗಿದ್ದು, ಎರಡನೇ ವೀರಬಲ್ಲಾಳ (ವಿಷ್ಣುವರ್ಧನ)ನಿಂದ ನಿರ್ಮಿತವಾದದ್ದೆಂದು ಚರಿತ್ರೆ ತಿಳಿಸುತ್ತದೆ. ಹಳೇಬೀಡಿನ ದೇವಾಲಯವನ್ನು ಹೊರಗಡೆ ನೋಡು, ಬೇಲೂರು ದೇವಾಲಯವನ್ನು ಒಳಗಿನಿಂದ ನೋಡು ಎಂಬ ಹೇಳಿಕೆಯಂತೆ, ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಹೊರನೋಟವು ಅತ್ಯಂತ ಮನೋಹರವಾಗಿದೆ. ಶಿಲ್ಪಕಲೆ ಇಲ್ಲಿಯೇ ಜನ್ಮಿಸಿ, ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡಿದೆಯೆನ್ನಿಸುತ್ತದೆ. ನೋಡಿದಷ್ಟೂ ಸಾಲದೆಂಬಂತಹ ಶಿಲ್ಪ ಸೌಂದರ್ಯ. ಆದರೆ ಇದಕ್ಕೆ ದೃಷ್ಟಿಬೊಟ್ಟಿನಂತೆ ಇರುವ ವಿಷಯಗಳೆಂದರೆ, ಮೊದಲಾಗಿ ಮುಸಲ್ಮಾನರ ದಾಳಿಗೆ ತುತ್ತಾಗಿ ವಿಕೃತಗೊಂಡಿರುವ ಹಲವಾರು ಭಂಜಿಕೆಗಳು ಮತ್ತು ಎರಡನೆಯದಾಗಿ ಪ್ರಾಚ್ಯ ಸಂಶೋಧನಾ ಇಲಾಖೆಯ ದಿವ್ಯ ನಿರ್ಲಕ್ಷ್ಯ. ನಾಮಕಾವಸ್ತೆ ಉಸ್ತುವಾರಿ ಇಲ್ಲಿ ನಡೆಯುತ್ತಿರುತ್ತದೆ.

ಇತ್ತೀಚೆಗೆ ನಾನು ಹಳೇಬೀಡಿಗೆ ಭೇಟಿ ನೀಡಿದಾಗ ತೆಗೆದ ಕೆಲವು ಚಿತ್ರಗಳನ್ನು ಫ್ಲಿಕ್ಕರ್.ಕಾಮ್ ನಲ್ಲಿ ಏರಿಸಿದ್ದೇನೆ. ಅದರ ಕೊಂಡಿ ಹೀಗಿದೆ:
http://www.flickr.com/photos/agilenagaraju/. ಆಸಕ್ತಿಯುಳ್ಳ ಸಂಪದದ ಓದುಗರು ನೋಡಿ ಆನಂದಿಸಬಹುದು. ಈ ಲೇಖನದೊಂದಿಗೆ ಹೊಯ್ಸಳೇಶ್ವರನ ಒಂದು ಛಾಯಾಚಿತ್ರವನ್ನು ಕೊಟ್ಟಿದ್ದೇನೆ.

ಧನ್ಯವಾದಗಳೊಂದಿಗೆ,
ಎ.ವಿ. ನಾಗರಾಜು