ಎಲ್ಲೋ ಜೋಗಪ್ಪ

ಎಲ್ಲೋ ಜೋಗಪ್ಪ

ಎಲ್ಲೋ ಜೋಗಪ್ಪ
ಹೆಂ|| ಕಿನ್ನೂರಿ ನುಡಿಸೋನ...ಆ..ಆ..ಆ..ಆ... ದನಿ ಚೆಂದಾವೋ.... |
ಕಿನ್ನೂರಿ ನುಡಿಸೋನ...ಆ..ಆ..ಆ..ಆ... ಬೆರಳಿನಂದಾ ಚೆಂದವೋ |
ಕಿನ್ನೂರಿ ನುಡಿಸೋನ............... ಬೆರಳಿನಂದಾ ಚೆಂದವೋ||

ಗಂ|| ಮುತ್ತಿನುಂಗ್ರಕ್ಕೆ ನಾರಿ ಮನಸಿಟ್ಟಳೊ |
ಬೆಳ್ಳಿನುಂಗ್ರಕ್ಕೆ ನಾರಿ ಮನ ಸೋತಳೊ | ನಾರಿ |
ಬೆಳ್ಳಿನುಂಗ್ರಕ್ಕೆ ನಾರಿ ಮನ ಸೋತಳೊ ||

ಎಲ್ಲ|| ಎಲ್ಲೋ ಜೋಗಪ್ಪ ನಿನ್ನರಮನೆ | ಎಲ್ಲೋ ಜೋಗಪ್ಪ ನಿನ್ನ ಸ್ಥಳಮನೆ |
ಎಲ್ಲೋ ಜೋಗಪ್ಪ ನಿನ್ನರಮನೆ | ಎಲ್ಲೋ ಜೋಗಪ್ಪ ನಿನ್ನ ಸ್ಥಳಮನೆ ||

ಗಂ|| ಅಲ್ಲಲ್ಲಿ ದಾನವೊ | ಅಲ್ಲಲ್ಲಿ ಧರ್ಮವೊ |
ತಂದಿಡೆ ನಾರಿ ನೀ ಚಿತ್ತವ | ನಾರಿ |
ತಂದಿಡೆ ನಾರಿ ನೀ ಚಿತ್ತವ |
ತಂದಿಡೆ ನಾರಿ ನೀ ಚಿತ್ತವ |
ತಂದಿಡೆ ನಾರಿ ನೀ ಚಿತ್ತವ ||

ಹೆಂ|| ಅತ್ತಿತ್ತ ಬಂದರೆ ಅತ್ತೆ ಮಾವಂದಿರು ಬೈಯುತ್ತಾರೆ |
ಕೊಳ್ಳೋ ಜೋಗಪ್ಪ ನಿನ್ನ ಕಡಿದಾನ | ಜೋಗಿ |
ಕೊಳ್ಳೋ ಜೋಗಪ್ಪ ನಿನ್ನ ಕಡಿದಾನ |
ಕೊಳ್ಳೋ ಜೋಗಪ್ಪ ನಿನ್ನ ಕಡಿದಾನ |
ಕೊಳ್ಳೋ ಜೋಗಪ್ಪ ನಿನ್ನ ಕಡಿದಾನ ||

ಗಂ|| ಇತ್ತಿತ್ತ ಬಂದರೆ ಅತ್ತೆ ಮಾವಂದಿರು ಬೈಯಲಿಕ್ಕೆ |
ಆನೆ ಸಾಲು ನಾನು ಕದ್ದೆನೇನೆ ನಾರಿ |
ಕುದುರೆ ಸಾಲು ನಾನು ಕದ್ದೆನೇನೆ |
ಹೆರರ ಹೆಣ್ಣಿಗೆ ನಾನು ಬಿದ್ದೆನೇನೆ |
ಹೆರರ ಹೆಣ್ಣಿಗೆ ನಾನು ಬಿದ್ದೆನೇನೆ ||

ಎಲ್ಲ|| ಎಲ್ಲೋ ಜೋಗಪ್ಪ ನಿನ್ನರಮನೆ | ಎಲ್ಲೋ ಜೋಗಪ್ಪ ನಿನ್ನ ಸ್ಥಳಮನೆ |
ಎಲ್ಲೋ ಜೋಗಪ್ಪ ನಿನ್ನರಮನೆ | ಎಲ್ಲೋ ಜೋಗಪ್ಪ ನಿನ್ನ ಸ್ಥಳಮನೆ ||

ಗಂ|| ಇದ್ದ ಬದ್ದ ಬಟ್ಟೆನೆಲ್ಲ ಗಂಟುಮೂಟೆ ಕಟ್ಟಿಕೊಂಡು
ಹೆಂ|| ಓ... ಓ............... ಓ... ಓ.... ಓ... ಓ... ...
ಓ..ಓ........ಓ... ಓ....ಓ..ಓ........ಓ... ಓ....
ಓ........ಓ... ಓ....

ಗಂ|| ಇದ್ದ ಬದ್ದ ಬಟ್ಟೆನೆಲ್ಲ ಗಂಟುಮೂಟೆ ಕಟ್ಟಿಕೊಂಡು
ಹೊರಟಾಳೊ ಜೋಗಿಯ ಮುಂದುಗೂಟೆ | ನಾರಿ |
ಹೊರಟಾಳೊ ಜೋಗಿಯ ಹಿಂದುಗೂಟೆ |
ಹೊರಟಾಳೊ ಜೋಗಿಯ ಮುಂದುಗೂಟೆ |
ಹೊರಟಾಳೊ ಜೋಗಿಯ ಹಿಂದುಗೂಟೆ ||

ಹೆಂ|| ಹಾರುವಾರ ಕೇರಿಯ ಗಾರೇ ಪಡಸಾಲೆ ಮೇಲೆ |
ಕೋಲು ಕಿನ್ನುರಿ ಮಾಡಿ ನುಡಿಸೋನೆ | ಜೋಗಿ |
ಕೋಲು ಕಿನ್ನುರಿ ಮಾಡಿ ನುಡಿಸೋನೆ |
ಮೊಗ್ಗಾಗಿ ಬಾರೋ ತುರುಬೀಗೆ |
ಮೊಗ್ಗಾಗಿ ಬಾರೋ ತುರುಬೀಗೆ ||

ಗಂ|| ಎಳ್ಳಿನ ಹೊಲವಾ ಬಿಟ್ಟೆ | ಒಳ್ಳೆ ಗಂಡನ ಬಿಟ್ಟೆ |
ಕಳ್ಳಾಟದ ಜೋಗಿ ಕೂಡ ಬರಬಹುದೆ | ನಾರಿ |
ಕಳ್ಳಾಟದ ಜೋಗಿ ಕೂಡ ಬರಬಹುದೆ |
ಕಳ್ಳಾಟದ ಜೋಗಿ ಕೂಡ ಬರಬಹುದೆ |
ಕಳ್ಳಾಟದ ಜೋಗಿ ಕೂಡ ಬರಬಹುದೆ ||

ಎಲ್ಲ|| ಎಲ್ಲೋ ಜೋಗಪ್ಪ ನಿನ್ನರಮನೆ | ಎಲ್ಲೋ ಜೋಗಪ್ಪ ನಿನ್ನ ಸ್ಥಳಮನೆ |
ಎಲ್ಲೋ ಜೋಗಪ್ಪ ನಿನ್ನರಮನೆ | ಎಲ್ಲೋ ಜೋಗಪ್ಪ ನಿನ್ನ ಸ್ಥಳಮನೆ ||

ಗಂ|| ಎಲ್ಲಾನು ಬಿಟ್ಟಮೇಲೆ ನನ್ನನ್ಯಾಕೆ ಬಿಡಲೊಲ್ಲೆ |
ನನ್ನಲ್ಲಿ ನಿನಗೆ ಮನಸ್ಯಾಕೆ | ಬಾಲೆ |
ನನ್ನಲ್ಲಿ ನಿನಗೆ ಮನಸ್ಯಾಕೆ |
ನನ್ನಲ್ಲಿ ನಿನಗೆ ಮನಸ್ಯಾಕೆ |
ನನ್ನಲ್ಲಿ ನಿನಗೆ ಮನಸ್ಯಾಕೆ ||

ಹೆಂ|| ನಿನ್ನಾ ಕಂಡಾಗಲಿಂದ ಕಣ್ಣೂರಿ ಕಣೊ | ಜೋಗಿ |
ನಿನ್ನಾ ಬಿಟ್ಟು ನಾನಿರಲಾರೆ | ಜೋಗಿ |
ನಿನ್ನಾ ಬಿಟ್ಟು ನಾನಿರಲಾರೆ |
ನಿನ್ನಲ್ಲಿ ನನಗೆ ಮನಸಾದೆ|
ನಿನ್ನಲ್ಲಿ ನನಗೆ ಮನಸಾದೆ||

ಗಂ|| ನನ್ನ ತೋಳಲ್ಲಿ ನಿನ್ನ ಕಿನ್ನೂರಿ ಮಾಡಿಕೊಂಡು |
ಚಂದಾದ ಪದವ ನುಡಿಸೇನೆ | ನಾರಿ |
ಚಂದಾದ ಪದವ ನುಡಿಸೇನೆ |
ಚಂದಾದ ಪದವ ನುಡಿಸೇನೆ |
ಚಂದಾದ ಪದವ ನುಡಿಸೇನೆ ||
********************ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿಜಯ್ ಹೆಮ್ಮರಗಾಲ

Rating
No votes yet

Comments