"ಮನಸ್ಸಿನ ಸ್ಮಶಾನ ಮೌನದಲಿ ಇನ್ನೂ ಸುಡುತಿದೆ ನಿನ್ನ ನೆನಪು"-ರಾಜು

"ಮನಸ್ಸಿನ ಸ್ಮಶಾನ ಮೌನದಲಿ ಇನ್ನೂ ಸುಡುತಿದೆ ನಿನ್ನ ನೆನಪು"-ರಾಜು

ಸಮಯ ಸಾದಕಿ,

ಸಾಕು ಕಣೆ ಇನ್ನು ಮೇಲೆ ನಿನ್ನ ಸಹವಾಸ.ನಿನ್ನ ಪ್ರೀತಿಯ ಬಲೆಯಲ್ಲಿ ಸಿಕ್ಕು ನೀರು ಬಿಟ್ಟ ಮೀನಿನಂತಾಗಿದ್ದೇನೆ.ಈ ಸಲದ ಪ್ರೇಮಿಗಳ ದಿನ ನನಗೆ ರಜ.ನನ್ನ ಹ್ರದಯದಲಿ ನೀ ನೆಟ್ಟಾ ಪ್ರೀತಯ ಮರಕ್ಕೆ ನೀರುಣಿಸುವವರು ಯಾರು ಇಲ್ಲ!!.

ಎಂಟ್ರಿ ನೇ ಇಲ್ಲದ ನನ್ನ ಹ್ರದಯದಲಿ ಪ್ರವೇಶವಾದವಳು ನೀನು.ಮನಸ್ಸೆಂಬ ಸ್ವಚ್ಚಂದ ಸರೋವರವನ್ನ ಕಲಕಿ ನಿನಗೇನು ತಿಳಿಯದವಳೆಂತೆ ಹೋದವಳು.ಮೌನವೇ ಗೊತ್ತಿಲ್ಲದ ನನಗೆ ನನ್ನ ಮಾತಿಗೆ ನೇಣು ಹಾಕಿದವಳು.ಪ್ರೀತಿಯಲ್ಲಿ ಹೀಗೆಲ್ಲ ಆಗುತ್ತಾ??.ಅಂಥ ಬಡಬಡಿಸಿ,ನಸು ನಕ್ಕು,ಖುಶಿ ಪಡುವಾಗ ನನ್ನೆದೆಯಿಂದ ಎದ್ದು ಹೋದವಳು.ಹ್ರದಯದ ಎಗ್ಸಿಟ್ನಲ್ಲಿ ಇಂದು ನಾನೋಬ್ಬನೆ.

ಈ ಐದು ವರುಶದಲ್ಲಿ ಏನೇಲ್ಲ ಆಗಿ ಹೋಯ್ತು ಅಲ್ವ?.ಮಾತು ಮಾತಿನ ಸಲುಗೆ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಗೆ ನಾಂದಿ ಹಾಡಿ,ಹುಸಿ ಮನಸ್ಸುಗಳು ಕನಸ್ಸಿನ ಗೋಪುರ ಕಟ್ಟಿದ್ದು ಬರೀ ನಿಮಿಶದಲ್ಲಿ.ಎಂದ್ದಾದರೂ ರಜೆ ಬಂದರೆ ನಮ್ಮದು ಅಂದು ದೂರ ಪ್ರಯಾಣ.ನಾನು ಒಂದೋಂದು ಸಾರಿ ಫಿಲ್ಮಿಗೆ ಅಥವ ಹೋಟೆಲಿಗೆ ಅಂದರೆ ,ನೀನು ಬೇಡಾ ಎಲ್ಲಾದರೂ ದೂರ ಹೋಗೋಣ ಅಲ್ಲಿ ನಾವಿಬ್ಬರೇ ಇರೋಣ, ಅಂತಿದ್ದೆ.ನನ್ನ ಬೈಕು ನಿಮ್ಮ ಮನೆಯ ಅನತಿ ದೂರದಲ್ಲಿ ಬಂದು ನಿಲ್ತಾ ಇದ್ದರೆ, ನೀನು ತಲೆಗೆ ನಿನ್ನ ದುಪ್ಪಟ್ಟಾ ಸುತ್ತಿಕೊಂಡು ಬರ್ತಾ ಇದ್ದೆ.ಯಾರದರೂ ನೋಡಿಯಾರು ಎಂಬ ಭಯ ನಿನಗೆ.ಹೀಗೆ ಚಲಿಸುತ್ತಿದ್ದ ನಮ್ಮ್ನ ಬೈಕಿನಲ್ಲಿ ನಾವಿಬ್ಬರೂ ಮೌನಿಗಳು.ನಮ್ಮ ಮನಸ್ಸುಗಳಿಗಷ್ಟೇ ಅಲ್ಲಿ ಕೆಲಸ.ಹಾಗೇ ಮರಳಿ ಬಂದ ಎರಡೂ ಮನಸ್ಸುಗಳಲ್ಲಿ ಪ್ರೀತಿ ಎರಡು ಪಟ್ಟು ಹೆಚ್ಚಾಗಿರುತ್ತಿತ್ತು.ಹೀಗೆ ಬಂದವನು ನಿನ್ನನ್ನಿ ಯವುದೋ ಬಸ್ಸ್ಟಾಂಡಿನಲ್ಲಿ ನಿಲ್ಲಿಸುತ್ತಿದ್ದೆ. ನೀನು ಅಲ್ಲಿಂದಲೇ ಬಸ್ ಹತ್ತಬೇಕು.ಎಕೆಂದರೆ ಮತ್ತೆ ಯಾರದರೂ ನೊಡೀಯಾರು ಎಂಬ ಭಯ ನಿನಗೆ.ನೀನು ಬಸ್ಸ್ಟಾಂಡಿನಲ್ಲಿ ನಿಂತರೆ, ನಾನಿ ಅನತಿ ದೂರದಲ್ಲಿ ನಿಲ್ಲುತ್ತಿದ್ದೆ.ನೀನು ಎಲ್ಲಿ ನನ್ನ ಬಿಟ್ಟೂ ಹೋದನೋ ಎಂದು ತಿರುಗಿ ತಿರುಗಿ ನೋಡ್ತಾ ಇದ್ದೆ.

ಕಳೆದು ಹೋದ ಸಮಯ
ಮರೆತು ಹೋದ ಮಾತು
ಹ್ರದಯದಲಿ ನೀ ಆಡಿದ ಮಾತಿನ ಸಾಲುಗಳು
ಮನಸ್ಸು ನಸುನಕ್ಕು,ಮುಂದೆ ಸಾಗಿತು.

ಇಂತಿ ನಿನ್ನ.....

Rating
No votes yet