ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?

ಬೆಂಗಳೂರಿನಲ್ಲಿ ಲಿನಕ್ಸ್ ಹಬ್ಬ - ಏನೇನಿದೆ?

ಬರಹ

GNU/Linux habba!
ಓಂಶಿವು ಅವರ ಲೇಖನ ನೀವೆಲ್ಲರೂ ನೋಡಿದ್ದೀರ ಎಂದುಕೊಂಡಿದ್ದೇನೆ. [:article/8005|ಇಲ್ಲ ಎಂದರೆ ಇಲ್ಲಿ ನೋಡಿ].

ಈ ಲಿನಕ್ಸ್ ಜಾತ್ರೆಯಲ್ಲಿ :) ಏನೇನಿರುತ್ತದೆ ? ಈ ಲಿನಕ್ಸ್ ಹಬ್ಬ ಎಂದರೆ ಏನು ? ಏನು ಮಾಡುತ್ತೀರ ಇಲ್ಲಿ ಅಂತ ಬಹಳ ಜನ ಕೇಳ್ತಿದ್ದಾರೆ.
ಈ ಹಬ್ಬದಲ್ಲಿ ನಾವು,

೧. ನಿಮ್ಮ ಲ್ಯಾಪ್ಟಾಪ್/ಡೆಸ್ಕ್ಟಾಪ್ ನಲ್ಲಿ ಲಿನಕ್ಸ್ ಹಾಕಿಕೊಳ್ಳುವುದು ಹೇಗೆ ಅಂತ ತೋರಿಸುತ್ತೇವೆ.
೨. ಲಿನಕ್ಸಿನಲ್ಲಿ ಕನ್ನಡ ಬರೆಯುವುದು ಹೇಗೆ ಮತ್ತು ಕನ್ನಡ ಓದುವುದು ಹೇಗೆ? ತೋರಿಸುತ್ತೇವೆ
೩. ನೀವು ತಂದಿರುವ ಲ್ಯಾಪ್ಟಾಪ್/ ಡೆಸ್ಕ್ಟಾಪ್ ನಲ್ಲಿ ನಿಮ್ಮ ಮುಂದೆಯೇ ಲಿನಕ್ಸ್ ಹಾಕಿಕೊಡುತ್ತೇವೆ.
೪. ನೀವು ಒಂದು ಖಾಲಿ ಸಿ.ಡಿ ತಂದರೆ ನಮ್ಮ ಬಳಿ ಇರುವ ಲಿನಕ್ಸಿನ ಒಂದು ಕಾಪಿ ನಿಮಗೂ ಕೊಡುತ್ತೇವೆ. (ಇದು ಪೈರಸಿ ಆಗೋಲ್ಲ!! ನೀವೂ ಆ ಸಿಡಿಯನ್ನ ಬೇರೆಯವರಿಗೆ ಹಂಚಬಹುದು!)
೫. ನಿಮ್ಮ ಯಾವುದೇ ಲಿನಕ್ಸ್ ಮತ್ತು ಕನ್ನಡ ಫಾಂಟ್ ಪ್ರಶ್ನೆಗೆ ಉತ್ತರ ಹೇಳಲು ನಾವು ತಯಾರಿರುತ್ತೇವೆ.

ನೀವು ಭಾಗವಹಿಸಬೇಕಾದರೆ,
೧. [:event/GNU-Linux-Habba|ಕಾರ್ಯಕ್ರಮ ಪುಟದಲ್ಲಿ ನೋಂದಾಯಿಸಿಕೊಳ್ಳಿ].
೨. ಟೆಕ್ಕಿಗಳಾದರೆ - ಭಾಗವಹಿಸುವ ಗೆಳೆಯರ ಸಿಸ್ಟಂಗಳಲ್ಲಿ ಉಬಂಟು ಹಾಕಿಕೊಡುವ ಕೆಲಸದಲ್ಲಿ ನಮ್ಮೊಂದಿಗೆ ಕೈ ಜೋಡಿಸಿ[:article/8005|ವಿವರಗಳಿಗೆ ಓಂಶಿವು ಅವರ ಲೇಖನ ನೋಡಿ].
೩. ನಮಗೆ ಟೆಕ್ನಿಕಲ್ ಅಲ್ಲದ ವಿಷಯಗಳಲ್ಲಿ ಕೈ ಜೋಡಿಸುವ ಗೆಳೆಯರ ಅಗತ್ಯವೂ ಇದೆ. ನಿಮಗೆ ಪಾಲ್ಗೊಳ್ಳುವ ಆಸಕ್ತಿ ಇದ್ದರೆ ಖಂಡಿತ ತಿಳಿಸಿ.
೪. ನಿಮಗೂ ನಿಮ್ಮ ಲ್ಯಾಪ್ಟಾಪ್ / ಡೆಸ್ಕ್ಟಾಪ್ ಗಳಲ್ಲಿ ಲಿನಕ್ಸ್ ಮತ್ತು ಕನ್ನಡ ಬೇಕೆಂದಿದ್ದರೆ, ನಿಮ್ಮ ಲ್ಯಾಪ್ಟಾಪ್ / ಡೆಸ್ಕ್ಟಾಪ್ ತೆಗೆದುಕೊಂಡು ಬನ್ನಿ. ನಿಮಗೆ ಸಹಾಯ ಮಾಡಲು ನಾವಿದ್ದೇವೆ.
೫. ನಿಮಗೆ ಲಿನಕ್ಸ್ ಮತ್ತು/ಅಥವಾ ಕನ್ನಡ ಫಾಂಟ್ನಲ್ಲಿ ಏನಾದರೂ ಪ್ರಶ್ನೆಗಳಿದ್ದರೆ, ಭಾಗವಹಿಸಿ, ನಮ್ಮ ಕೈಲಾದಷ್ಟು ಉತ್ತರ ಕೊಡುತ್ತೇವೆ.

ನಾವು ಇನ್ನೂ ಜಾಗ ಮತ್ತು ಸಮಯ ಹೊಂದಿಸಬೇಕಾಗಿದೆ. ಇನ್ನೆರಡು ದಿನಗಳಲ್ಲಿ ಇದರ ಬಗ್ಗೆ ಖಚಿತವಾಗಿ ತಿಳಿಸುತ್ತೇವೆ.

ಮತ್ತು ಕೊನೆಗೆ ಸಾಮಾನ್ಯವಾಗಿ ಕೇಳೀಬರುವ ಪ್ರಶ್ನೆಗಳು

೧. ಲಿನಕ್ಸ್ ಎಂದರೆ ಬರೀ ಕಮ್ಯಾಂಡ್ ಪ್ರಾಂಪ್ಟ್ (command prompt) ಅಲ್ಲವಾ ? ಅದೇ ಕಪ್ಪು ಸ್ಕ್ರೀನಿನದು ಅಂತಲೂ ಜನ ಕೇಳಿದ್ದಿದೆ!!
ಇಲ್ಲ. ಲಿನಕ್ಸ್ ನಿಮ್ಮ ವಿಂಡೋಸ್ ವಿಸ್ತಾ ಅಥವಾ XP ನಂಥೆಯೇ GUI ಇರುವ ಆಪರೇಟಿಂಗ್ ಸಿಸ್ಟಂ. ವಿಸ್ತಾಗಿಂತ ಮುಚೆಯೇ 3D ಇದ್ದ ಸಿಸ್ಟಂ.

೨. ಲಿನಕ್ಸ್ ಬಿಟ್ಟಿಯಾ? ನಿಮಗಿದರಿಂದ ಏನು ಲಾಭ?
ಗ್ನೂ/ ಲಿನಕ್ಸ್ ಬಿಟ್ಟಿ (free as in free beer) ಅನ್ನುವುದಕ್ಕಿಂತ ಮುಕ್ತ (free as in freedom) ತಂತ್ರಾಂಶಗಳ ಗುಂಪು. ನಿಮಗೆ ಕಾನೂನಿನ ಪ್ರಕಾರ ಇದನ್ನು ನಿಮ್ಮ ಗೆಳೆಯರಿಗೆ ಕೊಡುವ (ಬಿಟ್ಟಿ/ಹಣಕ್ಕೆ) ಸ್ವಾತಂತ್ರ ಇದೆ. ಕೊಟ್ಟರೆ ನೀವು ಈ ತಂತ್ರಾಂಶಗಳ ಮೂಲವನ್ನು (source code) ಕೂಡ ಕೊಡಬೇಕು ಅಷ್ಟೇ. ಅವರಿಗೂ ಕೊಟ್ಟ ಸಾಫ್ಟ್ವೇರನ್ನು ಇಷ್ಟಬಂದಂತೆ ಮಾರ್ಪಾಡು ಮಾಡುವ ಸ್ವಾತಂತ್ರ ಕೊಡಬೇಕು.
ಹಬ್ಬದಲ್ಲಿ ನಾವು ನಿಮಗೆಲ್ಲರಿಗೂ ಲಿನಕ್ಸನ್ನು ಬಿಟ್ಟಿಯಾಗಿ ಕೊಡುತ್ತೇವೆ. ಸಿ.ಡಿ / ಲ್ಯಾಪ್ಟಾಪ್ /ಡೆಸ್ಕ್ಟಾಪ್ ನೀವೇ ತರಬೇಕು. ಇದು ನಮಗೆ ಸಂತಸ ತಂದ ಲಿನಕ್ಸ್ಅನ್ನು ನಿಮ್ಮೊಂದಿಗೂ ಹಂಚಿಕೊಳ್ಳುವ ಆಸೆ ಅಷ್ಟೆ. ನಮಗೆ ಲಾಭ ಮಾಡಿಕೊಳ್ಳುವ ಆಸೆ ಇಲ್ಲ. ನೀವೂ ನಿಮ್ಮ ಗೆಳೆಯರಿಗೆ ಇದೇ ರೀತಿಯ ಸಹಾಯ ಮಾಡಿದರೆ ನಮಗೂ ಸಂತಸ.

೩. ಇವುಗಳ ಬಗೆಗೆ ನಾನು ಇನ್ನೂ ಹೆಚ್ಚು ತಿಳಿಯಬೇಕೆಂದರೆ ಏನು ಮಾಡಬಹುದು?
ಈ ಪುಟಗಳನ್ನು ಓದಿ
ಅ. Free software foundation - http://www.fsf.org/
ಆ. ಲಿನಕ್ಸ್ ಬಗೆಗಿನ ವಿಕಿಪೀಡಿಯಾ ಲೇಖನ - http://en.wikipedia.org/wiki/Linux

ಉಬುಂಟು ಕ್ಯಾನೋನಿಕಲ್ ಟ್ರೇಡ್-ಮಾರ್ಕ್.
ವಿಂಡೋಸ್, ವಿಸ್ತಾ ಮತ್ತು XP ಮೈಕ್ರೋಸಾಫ್ಟಿನ ಟ್ರೇಡ್-ಮಾರ್ಕ್ ಗಳು.