Honey' Kavana!!

Honey' Kavana!!

ಬರಹ

ಮು0ಗಾರಿನ ಮು0ಜಾನೆ :

ಮು0ಗಾರಿನ ಚುಮು ಚುಮು
ಮು0ಜಾನೆಯಲಿ ಮ0ದಾರಗಳ
ಮು0ಗುರುಳ ಸರಿಸಿ ಮೇಲೆರುವ
ನೇಸರನ ಪ್ರತಿ ಮುಗ್ದ ಕಿರಣಗಳು
ನನ್ನ ರೆಪ್ಪೆಗಳಿಗೆ ಮುತ್ತಿಕ್ಕಿ
ನನ್ನೆಲ್ಲ ಸಿಹಿ ಕನಸುಗಳನ್ನು
ಕದ್ದೊಯ್ಯುವ ಮುನ್ನ....
ಆವನನ್ನು ಮರೆಮಾಡಲು ನನ್ನ
ಸುತ್ತೆಲ್ಲ ನೀನೆ ಇದ್ದರೆ ..
ಕತ್ತಲು ಎಷ್ಟು ಸು0ದರ ..
ಆಲ್ಲವೆ ಗೆಳತಿ.. ?!!?

-----------------------------------------------
ಪ್ರೀತಿ !!

ಕಡಲ ನಡುವಲಿ ನಿ0ತು
ನೀರಿಗಾಗಿ ಬೊಬ್ಬೆ ಹಾಕುವವನ ಸುತ್ತ
ಸತ್ತು ಬಿದ್ದಿರುವ ರಾಶಿ ರಾಶಿ
ಉಪ್ಪು ನೀರಲ್ಲ ಪ್ರೀತಿ ....
ಕನಸುಗಳ ಮೂಟೆ ಹೊತ್ತು
ಮರುಭೂಮಿಯಲಿ ಸುತ್ತುವ ಪ್ರೇಮಿಯ
ಕಾಲಿಗೆ ತಡುಕುವ
ಸಿಹಿ ನೀರ ಬುಗ್ಗೆ...

------------------------------------------------
ತು0ಟ ನೇಸರ !!

ಪ್ರತಿ ಮು0ಜಾನೆ
ಗುಲಾಬಿ ಮೇಲಿನ
ಮುತ್ತಿನ ಹನಿಗಳನ್ನು
ಕದ್ದೊಯ್ಯುವ ನೇಸರ....
ಬಿಸಿಲದಾರಿಯಲಿ ನಡೆವಾಗ
ಅವಳ ಕೆನ್ನೆಗಳ ಮೇಲೆ
ಅವುಗಳನು ಚೆಲ್ಲಿ ನಗುತಾನೆ...