ಕರ್ನಲ್ ನಿಗೆ ಯಾರೂ ಬರೆಯುವುದೇ ಇಲ್ಲ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಕನ್ನಡಕ್ಕೆ: ಶ್ರೀನಿವಾಸ ವೈದ್ಯ
ಪ್ರಕಾಶಕರು
ಮನೋಹರ ಗ್ರಂಥಮಾಲಾ, ಧಾರವಾಡ
ಪುಸ್ತಕದ ಬೆಲೆ
ರೂ.೬೦.೦೦ ಮುದ್ರಣ: ೨೦೧೩

ನೊಬೆಲ್ ಬಹುಮಾನ ಪುರಸ್ಕೃತ ಆಂಗ್ಲ, ಸ್ಪಾನಿಷ್ ಲೇಖಕರಾದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಇವರ ‘No one writes to the Colonel’ ಎಂಬ ಕಾದಂಬರಿಯನ್ನು ಕನ್ನಡಕ್ಕೆ ತಂದವರು ಶ್ರೀನಿವಾಸ ವೈದ್ಯ ಇವರು. ಶ್ರೀನಿವಾಸ ವೈದ್ಯ ಇವರು ಸೃಜನ ಶೀಲ ಸಾಹಿತ್ಯದಲ್ಲಿ ಅಪಾರ ಹೆಸರು ಗಳಿಸಿದ್ದಾರೆ. ಬರೆದದ್ದು ಕಡಿಮೆಯಾದರೂ ಬರೆದುದನ್ನು ಗಮನಿಸಲೇ ಬೇಕಾದ ಬರಹಗಳು ಇವರು ರಚಿಸಿದ್ದಾರೆ.

ಪಾಂಡೆಮಿಕ್

ಮಗಳು, 'ಅಮ್ಮ ಹೋಳಿಗೆ, ಮಾವಿನಹಣ್ಣಿನ ಸೀಕರಣಿ ಭಾಳ್ ಚಲೋ ಐತಿ!' ಅಂತ ಚಪ್ಪರಿಸಿಕೊಂಡು ತಿನ್ನುತ್ತಿರುವಾಗಲೇ, ಅಮಿತನಿಗೆ ಹೊರಗಡೆ ಏನೋ ಘೋಷಣೆ ಕೇಳಿಸಿದಂತೆ ಆಗಿ ಮಗಳಿಗೆ, 'ಒಂದ್ನಿಮಿಷ ಸುಮ್ಮನಿರು' ಎಂದು ಅತ್ತ ಕಿವಿಗೊಟ್ಟ.

Tags

ದಾಖಲೆಗಳ ಸರದಾರ, ಹಾಕಿ ದಿಗ್ಗಜ-ಬಲ್ಬೀರ್ ಸಿಂಗ್

ಕೆಲವೊಮ್ಮೆ ನನಗೆ ಪತ್ರಿಕೆಯಲ್ಲಿ ಯಾರಾದರೂ ಖ್ಯಾತ ವ್ಯಕ್ತಿಗಳು ನಿಧನ ಹೊಂದಿದ ಸುದ್ದಿ ತಿಳಿದಾಗ ಬೇಸರದ ಜೊತೆ ನಾಚಿಗೆಯೂ ಆಗುತ್ತದೆ. ಯಾಕೆಂದರೆ ಅವರ ಸಾಧನೆಗಳನ್ನು ಬದುಕಿರುವಾಗ ನಾವು ಗಮನಿಸಿರುವುದೇ ಕಮ್ಮಿ ಎಂದು ನಾಚಿಗೆ ಪಡುತ್ತೇನೆ. ಈಗ ನೋಡಿ ಇತ್ತೀಚೆಗೆ ನಮ್ಮ ಹಾಕಿಯ ಅಗ್ರಮಾನ್ಯ ಆಟಗಾರ, ಮಾಜಿ ನಾಯಕರಾದ ಬಲ್ಬೀರ್ ಸಿಂಗ್ ಸೀನಿಯರ್ ತಮ್ಮ ೯೬ನೇ ವರ್ಷದಲ್ಲಿ ನಿಧನ ಹೊಂದಿದರು.

Image

ತೇಜೋ-ತುಂಗಭದ್ರ

ಪುಸ್ತಕದ ಲೇಖಕ/ಕವಿಯ ಹೆಸರು
ವಸುಧೇಂದ್ರ
ಪ್ರಕಾಶಕರು
ಛಂದ ಪುಸ್ತಕ, ಬನ್ನೇರುಘಟ್ಟ ರಸ್ತೆ, ಬೆಂಗಳೂರು
ಪುಸ್ತಕದ ಬೆಲೆ
Rs.380.00 ಮುದ್ರಣ ೨೦೧೯

ತೇಜೋ-ತುಂಗಭದ್ರ ಎನ್ನುವ ಈ ಬೃಹತ್ ಕಾದಂಬರಿಯು ಹೆಸರೇ ಹೇಳುವಂತೆ ೨ ನದಿ ದಂಡೆಯಲ್ಲಿ ಬರುವ ಲಿಸ್ಬನ್, ವಿಜಯನಗರ, ಗೋವಾ ನಗರಗಳಲ್ಲಿ ಕತೆ ಮುಂದುವರೆಯುತ್ತದೆ. ೧೫-೧೬ನೇ ಶತಮಾನದ ಹಳೆಯ ಕತೆಯಾದರೂ ಸಾರಾಂಶವು ಈಗಿನ ವರ್ತಮಾನಕ್ಕೆ ಹತ್ತಿರವಾಗುತ್ತೆ. ಆ ಶತಮಾನದ ಸಮಯದಲ್ಲಿದ್ದ ಸತಿ ಪದ್ಧತಿ, ಯಹೂದಿಗಳ ಹತ್ಯೆ, ಗುಲಾಮರ ಚಟುವಟಿಕೆಗಳು ಮತ್ತು ಅವರ ಯಾತನಾಮಯ ದಿನಗಳು ಓದುಗರ ನಿದ್ದೆಯನ್ನು ಕೆಡಿಸುತ್ತವೆ.

ತೂಕ ಇಳಿಕೆ ಆರೋಗ್ಯದ ಗಳಿಕೆ

ಪುಸ್ತಕದ ಲೇಖಕ/ಕವಿಯ ಹೆಸರು
ಎಂ.ಎಲ್. ರಾಘವೇಂದ್ರ ರಾವ್
ಪ್ರಕಾಶಕರು
ಮಧುರ ಪ್ರಕಾಶನ, ರಾಜಾಜಿನಗರ, ಬೆಂಗಳೂರು-೫೬೦೦೧೦
ಪುಸ್ತಕದ ಬೆಲೆ
Rs 30.00, ಮುದ್ರಣ ೨೦೦೯

ಇಂದಿನ ದಿನಗಳಲ್ಲಿ ಎಲ್ಲರನ್ನೂ ಭೀತಿಗೊಳಗಾಗಿಸುವುದು ದೇಹದ ಸ್ಥೂಲತೆ. ದೇಹದ ತೂಕ ಅಧಿಕವಾದಂತೆಲ್ಲಾ ದೇಹ ಸ್ಥೂಲವಾಗುತ್ತದೆ. ಇದರಿಂದ ಮುಕ್ತರಾಗಲು ದೇಹದ ದಂಡನೆ ಅಗತ್ಯವಾಗಿರುತ್ತದೆ.

ಎರಡು ದಶಕದ ಸಂಭ್ರಮದಲ್ಲಿ ವಿಶ್ವ ಹಾಲು ದಿನಾಚರಣೆ

ಮಾನವ ಭೂಮಿಗೆ ಬಂದ ಬಳಿಕ ಪರಿಚಯವಾಗುವ ಮೊದಲ ಆಹಾರವೇ ಹಾಲು. ತಾಯಿಯ ಹಾಲು ಅಮೃತವೆನ್ನುತ್ತಾರೆ. ಇದರಲ್ಲಿ ಅತಿಶಯೋಕ್ತಿ ಏನಿಲ್ಲ. ಸತ್ಯ ಸಂಗತಿ. ತಾಯಿಯ ಹಾಲನ್ನು ಕುಡಿದು ಬೆಳೆದ ಮಕ್ಕಳು ಬಾಟಲಿ ಹಾಲು ಕುಡಿದು ಬೆಳೆದ ಮಕ್ಕಳಿಗಿಂತ ಅಧಿಕ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ.

Image

ಭಾರತೀಯ ಚಿತ್ರಕಲೆ - ಭಾಗ 3

ಪಟ ಚಿತ್ರಕಲೆ
ಇದು ಒರಿಸ್ಸಾದ ಚಿತ್ರಕಲೆ. ಇವನ್ನು ಪಟ ಎಂಬ ಬೋರ್ಡಿನಲ್ಲಿ ಚಿತ್ರಿಸುತ್ತಾರೆ. ಇವು ಶ್ರೀ ಜಗನ್ನಾಥ ದೇವರು ಮತ್ತು ಇತರ ಹಿಂದೂ ಧಾರ್ಮಿಕ ಕತೆಗಳಿಗೆ ಸಂಬಂಧಿಸಿದ ಪ್ರಸಂಗಗಳನ್ನು ಒಳಗೊಂಡಿರುತ್ತವೆ. ಜಾನಪದ, ಪ್ರಾಣಿಗಳು ಮತ್ತು ಹಕ್ಕಿಗಳಿಗೆ ಸಂಬಂಧಿಸಿದ ಚಿತ್ರಗಳೂ ಇರುತ್ತವೆ.

ಪ್ರಾಕೃತಿಕ ವಸ್ತುಗಳನ್ನೇ ಬಳಸಿ, ಕೆಂಪು, ಹಳದಿ ಮತ್ತು ಹಸುರು ಬಣ್ಣಗಳಲ್ಲಿ ಚಿತ್ರಗಳ ರಚನೆ. ಚಿತ್ರಗಳ ಮೂಲರೇಖೆಗಳು ಕಪ್ಪು ಬಣ್ಣದಲ್ಲಿರುತ್ತವೆ. ಚಿತ್ರಪಟದ ಅಂಚುಗಳು ಮತ್ತು ಮುಖ್ಯಚಿತ್ರದ ಹೊರತಾಗಿ ಉಳಿದ ಜಾಗವನ್ನು ಗಿಡಗಳು ಮತ್ತು ಹೂವಿನ ಚಿತ್ರಗಳು ತುಂಬುತ್ತವೆ. (ನೋಡಿ: ಕುದುರೆ ಚಿತ್ರ)

Image

ಮರಿಕುದುರೆ ರೋರೋ

ಮರಿಕುದುರೆ ರೋರೋ ಯಾರಿಗೂ ಸಹಾಯ ಮಾಡುತ್ತಿರಲಿಲ್ಲ. ಅದೊಂದು ದಿನ ಅದರ ತಾಯಿ ಸಿಟ್ಟಿನಿಂದ ಹೇಳಿತು, “ರೋರೋ,  ನಿನ್ನ ತಂಗಿ ಕೆಳಗೆ ಬಿದ್ದು ಅವಳ ಕಾಲಿಗೆ ಏಟಾದಾಗಲೂ ನೀನು ಅವಳಿಗೆ ಸಹಾಯ ಮಾಡಲಿಲ್ಲ. ಇವತ್ತು ನೀನು ಈ ತೆಂಗಿನ ತೋಟದಲ್ಲಿ ಸುತ್ತಾಡಿ, ಯಾರೋ ಒಬ್ಬರಿಗಾದರೂ ಸಹಾಯ ಮಾಡಿ ಬಂದು ನನಗೆ ಹೇಳಬೇಕು. ಅನಂತರವೇ ನಿನಗೆ ಊಟ ಕೊಡುತ್ತೇನೆ.”

Image

ಮಣ್ಣ ಮಡಿಲಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಕೆ.ಸಿ.ಶಶಿಧರ್
ಪ್ರಕಾಶಕರು
ಅರೀಡ್ಸ್, ಶರಾವತಿ ನಗರ, ಶಿವಮೊಗ್ಗ.(ಮುದ್ರಣ: ೨೦೧೭)
ಪುಸ್ತಕದ ಬೆಲೆ
Rs. 200.00

ಡಾ.ಕೆ.ಸಿ.ಶಶಿಧರ್ ಇವರು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ , ಶಿವಮೊಗ್ಗ ಇಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಶಿವಮೊಗ್ಗ ವಿಶ್ವ ವಿದ್ಯಾಲಯವು ನೇಗಿಲ ಮಿಡಿತ ಎನ್ನುವ ಕೃಷಿ ಮಾಸ ಪತ್ರಿಕೆಯನ್ನು ಹೊರ ತಂದಾಗ ಪ್ರಥಮ ಸಂಪಾದಕರಾಗಿದ್ದರು. ‘ಮಣ್ಣ ಮಡಿಲಲ್ಲಿ' ಎನ್ನುವ ಅಂಕಣವನ್ನು ಬಹುಕಾಲ ಕೆ.ಸಿ.ಶಶಿಧರ್ ಇವರು ಬರೆಯುತ್ತಾ ಬಂದರು.