ಕರಿಬೇವಿನ ಕೊಬ್ಬರಿ ಚಟ್ನಿ

Image

ಮೊದಲಿಗೆ ಕರಿಬೇವನ್ನು ಚೆನ್ನಾಗಿ ತೊಳೆದು ಸ್ವಚ್ಚ ಗೊಳಿಸಿ. ಒಣ ಕೊಬ್ಬರಿಯನ್ನು ತುರಿದು ಇಡಿ. ಕರಿ ಬೇವು ಮತ್ತು ಮೆಣಸನ್ನು ಪ್ರತ್ಯೇಕವಾಗಿ ಹುರಿಯಿರಿ. ಕಡಲೇ ಬೇಳೆಯನ್ನು ಹುರಿದು ನಯವಾಗಿ ಹುಡಿಯಾಗುವಂತೆ ಮಿಕ್ಸಿಯಲ್ಲಿ ಹುಡಿ ಮಾಡಿರಿ. ಕೊಬ್ಬರಿ ತುರಿಯನ್ನು ತುಪ್ಪದಲ್ಲಿ ಹುರಿಯಿರಿ. ಇಂಗನ್ನು ಸ್ವಲ್ಪ ಎಣ್ಣೆಯಲ್ಲಿ ಬಿಸಿ ಮಾಡಿ. ಹುಣಸೇ ಹುಳಿಯ ಸಣ್ಣ ಸಣ್ಣ ತುಂಡು ಮಾಡಿ.

ಬೇಕಿರುವ ಸಾಮಗ್ರಿ

ಬೇಕಾಗುವ ವಸ್ತುಗಳು: ಒಣಗಿದ ಕೊಬ್ಬರಿ ೧, ಕಡಲೇ ಬೇಳೆ ೧ ಕಪ್, ೨೫-೩೦ ಕರಿಬೇವಿನ ಗರಿ, ಕೆಂಪು ಮೆಣಸಿನ ಕಾಯಿ ೨೦, ಹುಣಸೆ ಹುಳಿ, ರುಚಿಗೆ ಉಪ್ಪು, ಸ್ವಲ್ಪ ಇಂಗು, ತುಪ್ಪ ೨ ಚಮಚ

 

ಒಂದು ಹಾಡು ಮತ್ತು ಒಬ್ಬ ಪ್ರಧಾನಿ

 

ನನ್ನ ಹಾಡುಗಳ ಸಂಗ್ರಹವನ್ನು ನೋಡುತ್ತಿದ್ದಾಗ ಅದರಲ್ಲಿ Hello , Rajiv Gandhi  ಎಂಬ ಹೆಸರಿನ ಇಂಗ್ಲೀಷ್ ಹಾಡು ಸಿಕ್ಕಿತು. 

ಅದು ರೇಮೋ ಫರ್ನಾಂಡಿಸ್ಎಂಬ fusion ಸಂಗೀತಗಾರ  1991 ರಲ್ಲಿ ಬರೆದು ಸಂಗೀತ ಸಂಯೋಜಿಸಿ  ಹಾಡಿದ ಹಾಡು.  

ಮೊದಲು ಕನ್ನಡದಲ್ಲಿ  ಅನುವಾದ , ನಂತರ ಇಂಗ್ಲೀಷ್ ಮೂಲ . ಯಾಕಂದರೆ ಕನ್ನಡಕ್ಕೆ ತಾನೆ ಮೊದಲ ಮಣೆ ?. 

 

ಹಲೋ ರಾಜೀವ್ ಗಾಂಧಿ, ನಿನಗೆ ದೇಶದ ಅತ್ಯುನ್ನತ ಸ್ಥಾನದಲ್ಲಿದ್ದಾಗ ಹೇಗನಿಸಿತು ?

ಏನಿದು ಬಿಳಿ, ಗುಲಾಬಿ, ಕೆಂಪು ಮತ್ತು ಹಸಿರು ಬಂಗಾರ?

ಬಂಗಾರವೆಂದರೆ ಹಳದಿ ಲೋಹ. ಹಳದಿ ಲೋಹದ ಮೋಹ ಭಾರತೀಯ ಮಹಿಳೆಯರಿಗೆ ಈಗಿನದ್ದಲ್ಲ, ಪುರಾತನ ಕಾಲದಿಂದಲೂ ಇದೆ. ಬಂಗಾರಕ್ಕೆ ಈಗ ಬಂಗಾರದ ಬೆಲೆ ಬಂದಿದೆ!!. ಕೊರೋನಾ ಮಹಾಮಾರಿ ಭಾರತಕ್ಕೆ ಕಾಲಿಟ್ಟ ಬಳಿಕ ಬಂಗಾರದ ದರ ಗಗನಕ್ಕೆ ಏರಿದೆ. ಬಂಗಾರದ ಬಣ್ಣ ಹಳದಿ. ಆದರೆ ಇದೇನು ಬಿಳಿ, ಗುಲಾಬಿ, ಕೆಂಪು, ಹಸಿರು ಬಂಗಾರ?

Image

ಚಾರ್ಲಿ ಚಾಪ್ಲಿನ್ ನ ಮರೆಯಲಾಗದ ಆ ಎರಡು ಚಿತ್ರಗಳು

ಚಾರ್ಲಿ ಚಾಪ್ಲಿನ್ ಎಂದರೆ ಯಾರಿಗೆ ಗೊತ್ತಿಲ್ಲ? ಅಬಾಲವೃದ್ಧರಾದಿಯಾಗಿ ಈ ಮೂಕಿ, ಕಪ್ಪು ಬಿಳುಪು ಚಿತ್ರದ ನಾಯಕ, ನಿರ್ದೇಶಕನನ್ನು ಗುರುತಿಸಿಯೇ ಗುರುತಿಸುತ್ತಾರೆ. 1889ರ ಎಪ್ರಿಲ್ ೧೬ರಂದು ಜನಿಸಿದ ಚಾಪ್ಲಿನ್ ತನ್ನ ಬಾಲ್ಯವನ್ನು ಅತ್ಯಂತ ಬಡತನ ಮತ್ತು ಕಷ್ಟದಿಂದ ಕಳೆದ. ತಂದೆಯ ನೆರಳಿಲ್ಲದ ಮಗುವನ್ನು ಕಷ್ಟದಿಂದ ಸಾಕಿದ ಚಾಪ್ಲಿನ್ ತಾಯಿ ಅಧಿಕ ಸಮಯ ಮಗನನ್ನು ನೋಡಲು ಬದುಕಲಿಲ್ಲ.

Image

ಎಳೆಯ ಗೇರುಬೀಜದ ಪಲ್ಯ

Image

ತಯಾರಿಕಾ ವಿಧಾನ: ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ ಮತ್ತು ಕೆಂಪು ಮೆಣಸನ್ನು ಹಾಕಿ ಹುರಿಯಿರಿ. ಸಾಸಿವೆ ಸಿಡಿದ ನಂತರ ಕತ್ತರಿಸಿದ ಗೇರು ಬೀಜಗಳನ್ನು ಬಾಣಲೆಗೆ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯುವಷ್ಟು ಸ್ವಲ್ಪ ನೀರು ಹಾಕಿ, ಬಾಣಲೆಯ ಬಾಯಿ ಹಾಕಿ ಸ್ವಲ್ಪ ಸಮಯದವರೆಗೆ ಬೇಯಿಸಿ. ಬೆಂದ ಮೇಲೆ ತೆಂಗಿನ ತುರಿ, ಸ್ವಲ್ಪ ಇಂಗಿನ ನೀರು, ಚಿಟಿಕೆಯಷ್ಟು ಸಕ್ಕರೆ ಹಾಕಿ ಮಗುಚಿ ಕೆಳಗಿಡಿ. ಗೇರುಬೀಜದ ಜೊತೆ ಎಳೆಯ ತೊಂಡೆಕಾಯಿಗಳನ್ನೂ ಕತ್ತರಿಸಿ ಜೊತೆಯಲ್ಲೇ ಬೆರೆಸಿ ಪಲ್ಯ ತಯಾರಿಸಿದರೆ ಇನ್ನೂ ರುಚಿಕರವಾಗಿರುತ್ತದೆ.

ಬೇಕಿರುವ ಸಾಮಗ್ರಿ

ಈಗ ಎಳೆಯ ಗೇರುಬೀಜದ ಸೀಸನ್ ನಡೆಯುತ್ತಿದೆ. ಆದುದರಿಂದ ಈ ಎಳೆಯ ಗೇರು ಬೀಜಗಳನ್ನು ಬಳಸಿ ಪಲ್ಯ ತಯಾರಿಸುವುದು ಸುಲಭ ಮತ್ತು ರುಚಿಕರ. 

ಬೇಕಾಗುವ ಸಾಮಾಗ್ರಿಗಳು: ಸುಲಿದು ಎರಡು ಭಾಗ ಮಾಡಿದ ಎಳೆಯ ಗೇರು ಬೀಜಗಳು ೧೦೦ರಷ್ಟು, ಸಾಸಿವೆ ೧ ಚಮಚ, ಕೆಂಪು ಮೆಣಸು ೩-೪, ಎಣ್ಣೆ ಸ್ವಲ್ಪ. ರುಚಿಗೆ ಉಪ್ಪು, ಸ್ವಲ್ಪ ತೆಂಗಿನ ಕಾಯಿಯ ತುರಿ, ಚಿಟಕಿಯಷ್ಟು ಸಕ್ಕರೆ, ಸ್ವಲ್ಪ ಇಂಗು.

 

ನೋಡ ಬನ್ನಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಕೋರೋನಾ ಮಹಾಮಾರಿ ದೇಶದೆಲ್ಲಡೆ ಪಸರಿಸುತ್ತಿರುವಾಗ, ಹೊರಗಡೆ ಹೋಗುವುದೇ ದುಸ್ತರವಾಗಿರುವಾಗ ಇವನ್ಯಾವನೋ ನೋಡ ಬನ್ನಿ ಉದ್ಯಾನವನ ಎಂದು ಕರೆಯುತ್ತಿರುವವನು ಎಂದು ಹುಬ್ಬೇರಿಸದಿರಿ. ನಮ್ಮ ದೇಶಕ್ಕೆ, ರಾಜ್ಯಕ್ಕೆ ಬಂದ ಕೊರೋನಾ ಕಾರ್ಮೋಡ ಕರಗುತ್ತೆ. ಇದರಲ್ಲಿ ಅನುಮಾನ ಬೇಡ.

Image

ಮುದ್ರಾ ವಿಜ್ಞಾನ ಮತ್ತು ಆರೋಗ್ಯ

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀಮತಿ ಸುಮನ್ ಕೆ.ಚಿಪ್ಳೂಣ್ ಕರ್
ಪ್ರಕಾಶಕರು
ಅಭಿಜಿತ್ ಪ್ರಕಾಶನ, ಮುಂಬಯಿ
ಪುಸ್ತಕದ ಬೆಲೆ
ರೂ. 250.00

ಶ್ರೀಮತಿ ಸುಮನ್ ಕೆ. ಚಿಪ್ಳೂಣ್ ಕರ್ ಇವರು ಬರೆದ ಮುದ್ರಾ ವಿಜ್ಞಾನ ಮತ್ತು ಆರೋಗ್ಯ ಪುಸ್ತಕ ಮಾಹಿತಿ ಪೂರ್ಣವಾಗಿದೆ. ಬೆನ್ನುಡಿಯಲ್ಲಿ ಡಾ.ತಾಳ್ತಜೆ ವಸಂತ್ ಕುಮಾರ್ ಇವರು ಬರೆಯುತ್ತಾರೆ- ಜೀವನ ಪದ್ಧತಿಗಳು ನಿಸರ್ಗದ ಶಿಶುವಾದ ಮಾನವನನ್ನು ಅವನ ಮೂಲ ಶಕ್ತಿ ಸ್ರೋತದಿಂದ ಬಹುದೂರಕ್ಕೆ ಕೊಂಡೊಯ್ಯುತ್ತಿವೆ. ಆಹಾರ, ವಿಹಾರ, ಚಿಂತನೆ, ವಿಶ್ರಾಂತಿ ಮುಂತಾದ ಸಾಮಾನ್ಯ ದಿನಚರ್ಯೆಗಳು ಕೂಡಾ ಅನಿಯಂತ್ರಿತವಾಗಿ ಯೋಚನೆ-ಯೋಜನೆಗಳ ಸಾಂಗತ್ಯಗಳಿಂದ ದೂರವಾಗುತ್ತಿವೆ. ಈ ವಿಕೃತ ವಿಧಾನಗಳ ಪ್ರತ್ಯಕ್ಷ-ಪರೋಕ್ಷ ಪರಿಣಾಮಗಳು ಮನುಷ್ಯನ ಬದುಕನ್ನು ಅಸಹನೀಯಗೊಳಿಸುತ್ತಿವೆ.

ಹಳದಿ ತಿರುಳಿನ ಕಲ್ಲಂಗಡಿ

ಮೊದಲೆಲ್ಲಾ ನಮ್ಮಲ್ಲಿ ಒಂದು ಕಲ್ಪನೆಯಿತ್ತು. ಕಲ್ಲಂಗಡಿ ಎಂದರೆ ಹೊರಗಡೆ ಹಸಿರು ಒಳ ತಿರುಳು ಕೆಂಪು ಎಂದು. ಆದರೆ ಇಂದಿನ ವಿಚಿತ್ರಯುಗದಲ್ಲಿ ಎಲ್ಲವೂ ಉಲ್ಟಾ ಪುಲ್ಟಾ ಆಗಿದೆ. ಕೆಲವು ವರ್ಷಗಳ ಹಿಂದೆ ನಾನು ಸೂಪರ್ ಮಾರ್ಕೆಟ್ ಗೆ ಹೋಗಿದ್ದೆ. ಆಗ ಹಳದಿ ತಿರುಳಿನ ಕಲ್ಲಂಗಡಿ ಎಂಬ ನಾಮ ಫಲಕ ನೋಡಿ ಆಶ್ಚರ್ಯ ಪಟ್ಟುಕೊಂಡು ದುಬಾರಿ ದರ ತೆತ್ತು ಕಲ್ಲಂಗಡಿಯನ್ನು ಮನೆಗೆ ತೆಗೆದು ಕೊಂಡು ಬಂದೆ.

Image

ಮೃತ ಸಂಜೀವಿನಿ

ಪುಸ್ತಕದ ಲೇಖಕ/ಕವಿಯ ಹೆಸರು
ತೀರ್ಥರಾಮ ವಳಲಂಬೆ
ಪ್ರಕಾಶಕರು
ಯಾನ ಪ್ರಕಾಶನ, ಅ.ಪೆ.ಸಂಖ್ಯೆ ೫೮೫, ಕಂಕನಾಡಿ, ಮಂಗಳೂರು-೫೭೫೦೦೨
ಪುಸ್ತಕದ ಬೆಲೆ
ರೂ.120.00

ಪತ್ರಕರ್ತ ತೀರ್ಥರಾಮ ವಳಲಂಬೆಯವರ ಲೇಖನಿಯಿಂದ ಮೂಡಿ ಬಂದ ಒಂದು ಅಪೂರ್ವ ಪುಸ್ತಕ ಎಂದರೆ ತಪ್ಪಾಗದು. ಪಾಕೇಟ್ ಸೈಜ್ ಆಕಾರ ಹೊಂದಿರುವ ಈ ಪುಸ್ತಕವನ್ನು ತೀರ್ಥರಾಮ ಇವರು ಬಹಳಷ್ಟು ಅಧ್ಯಯನ ಮಾಡಿ ಬರೆದಿದ್ದಾರೆ. ಅವರೇ ಹೇಳಿರುವಂತೆ ಈ ಪುಸ್ತಕದ ಕಲ್ಪನೆ ಸಾಕಾರಗೊಳ್ಳಬೇಕಾದರೆ ಅದಕ್ಕಾಗಿ ನಾನು ಸಾಕಷ್ಟು ಅಧ್ಯಯನ ಹಾಗೂ ಅಭ್ಯಾಸಗಳನ್ನು ಮಾಡಬೇಕಾಗಿತ್ತು. ಆಧುನಿಕ ವಿಜ್ಞಾನ ಇಷ್ಟೊಂದು ಮುಂದುವರೆದಿರುವಾಗ ಜನರನ್ನು ವೈಜ್ಞಾನಿಕವಾಗಿ ಯೋಚಿಸಲು ಪ್ರೇರೇಪಿಸಬೇಕೇ ಹೊರತು ನಮ್ಮ ಯಾವುದೇ ಬರವಣಿಗೆಯ ಸಾಲುಗಳು ಜನರಲ್ಲಿ ಗೊಂದಲಗಳನ್ನು ಮೂಡಿಸಬಾರದು ಎನ್ನುವ ನಿಲುವು ನನ್ನದಾಗಿತ್ತು. ಈ ಮಾತುಗಳನ್ನು ವಳಲಂಬೆಯವರು ಉಳಿಸಿಕೊಂಡಿದ್ದಾರೆ. ಅವರ ಬಿಡುವಿಲ್ಲದ ಕಾರ್ಯ ಚಟುವಟಿಕೆಗಳ ನಡುವೆ ಈ ಅಧ್ಯಯನ, ಯೋಗ, ಪ್ರಾಣಾಯಾಮ, ಸನ್ಮೋಹಿನಿ, ರೇಖಿ, ಮುದ್ರೆ...

ನೆಕ್ಕರೆ ಮಾವು ಕಂಡೀರಾ?

ಎಪ್ರಿಲ್-ಮೇ ತಿಂಗಳು ಬಂತೆಂತಾದರೆ ಹಣ್ಣುಗಳ ಸೀಸನ್. ಅದರಲ್ಲೂ ಹಣ್ಣುಗಳ ರಾಜ ಮಾವಿನ ಹಣ್ಣು ಯಾರಿಗೆ ಇಷ್ಟವಿಲ್ಲ ಹೇಳಿ. ಮೊದಲಾದರೆ ನಮ್ಮ ದಕ್ಷಿಣ ಕನ್ನಡದಾದ್ಯಂತ ಸ್ಥಳೀಯ ಮಾವಿನ ಹಣ್ಣುಗಳದ್ದೇ ಕಾರುಬಾರು. ಮರದಿಂದ ಕೊಯ್ದು ಅಲ್ಲೇ ಕೆಳಗಡೆ ಮಾರಿ ಹಣ ಹಿಡಿದುಕೊಂಡು ಮನೆಗೆ ಹೋಗುವುದಷ್ಟೇ ಮಾರಟ ಮಾಡುವವನ ಕಾಯಕವಾಗಿತ್ತು. ಈಗೀಗ ದಿನಕಳೆದಂತೆ ಮಾವಿನ ಮರಕ್ಕೆ ಹತ್ತುವವರ ಸಂಖ್ಯೆಯೂ ಕಮ್ಮಿ ಆಯಿತು.

Image