ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
October 7, 2008 - 12:40pm — Achala Sethu"ಅಮ್ಮ ಆರ್ ವಿ ದೇರ್ ಯೆಟ್?"
ಹರಟೆ ಆಟ ನೋಟ ಎಲ್ಲ ಮುಗಿಸಿದರೂ ಮುಗಿಯದ ವಿಮಾನಯಾತ್ರೆಯಿಂದ ಆದಿಗೆ ಬೇಸರ ಬಂದಿತ್ತು.
"ಇನ್ನೊನ್ನವರ್ ಕಣೋ ಆದಿ ನೀನು ಪzಲ್ ಬುಕ್ ಫಿನಿಶ್ ಮಾಡೋದ್ರಲ್ಲಿ ಅಟ್ಲಾಂಟದಲ್ಲಿರ್ತೀವಿ"
"ಓ..ಇನ್ನು ಒನ್ ಅವರ್ರಾ..ಸೋ ಬೋರಿಂಗ್"
ಆದಿಯ ಕುಯ್ಯೊಮರ್ರೊ ಕೇಳಿ ಹಿಂದಿನ ಸೀಟಲ್ಲಿ ಕುಳಿತಿದ್ದ ಗೌರಜ್ಜಿ ಎರಡು ಸೀಟುಗಳ ಸಂದಿಯಲ್ಲಿ ಮೂಗು ತೂರಿಸಿ
"ಹುಚ್ಚ ಮುರುವ ಹುರಳೀ ಬಿತ್ದ ಹೊತ್ತಿಗ್ ಮೂರ್ಸಲ ಕಿತ್ ಕಿತ್ ನೋಡ್ದ ಅನ್ನೊ ಹಾಗೆ ಘಳಿಗ್ ಘಳಿಗೆಗೂ ಊರು ಬಂತಾ ಬಂತಾ ಅಂದ್ರೆ ಬಂದ್ಬುಡತ್ತೇನೋ? ಸಮಾಧಾನವಾಗಿ ಕೂತ್ಕೊಬೇಕಪ್ಪ. ಲೇ ಅನು ನಿನಗಿರೊ ವ್ಯವಧಾನ ನಿನ್ನ ಮಗನಿಗೆ ಬರಲಿಲ್ಲ ಬಿಡು. ಎಲ್ಲಾ ಪ್ರಶಾಂತಂದೇ ಪಡಿಯಚ್ಚು" ಎಂದರು.
"ಕಿರೀಕು ಕಣೆ ನಿಮ್ಮಜ್ಜಿ. ಚಾನ್ಸ್ ಸಿಕ್ತು ಅಂದ್ರೆ ಸಾಕು ನಂಗೇ ಬತ್ತಿ ಇಡಕ್ಕೆ ನೋಡ್ತಿರತ್ತೆ. ಮಾಲಿ ಮದ್ವೇಗ್ಬೇರೆ ಕರ್ಕೊಂಡು ಹೋಗ್ತಾ ಇದೀವಿ. ಏನೇನೋ ಮಾತಾಡಿ ಆಭಾಸ ಮಾಡ್ದೇ ಇರೋ ಹಾಗೆ ನೀನೆ ಸ್ವಲ್ಪ ಕಂಟ್ರೊಲ್ ಮಾಡ್ಬೇಕು.ಬಾಲ ಅಂಕಲ್ ಬೇರೆ ಒಂಥರಾ" ಪ್ರಶಾಂತ ಪಿಸುಗುಟ್ಟಿದ.
ಗೌರಜ್ಜಿಯ ಬಾಯಿಗೆ ಬೀಗ ಹಾಕುವಂತಹ ಯಾವುದೇ ಪೊಳ್ಳು ಪ್ರಾಮಿಸ್ ಮಾಡಲು ಹೆದರಿ "ಸೋಚನಾ ಕ್ಯಾ ಜೋಭಿ ಹೋಗ ದೇಖಾ ಜಾಯೇಗ" ಹಾಡೊಂದನ್ನು ಗುನುಗಿ ಅವನ ಕೈ ಅಮುಕಿದೆ. ಯಾಕೋ ತಣ್ಣಗೆ ಕೊರೆಯುತ್ತಿತ್ತು.ಆಜ್ಜಿ ಆಡೋ ಗಾದೆಗಳನ್ನೋ ಅಥವಾ ತೆಗೆದ ತಗಾದೆಗಳನ್ನು ನೆನೆಸ್ಕೊತಾ ಇದ್ನೋ ಏನೊ! ಮಗಳು ಆದ್ಯ ಮಾತ್ರ ಬೆಚ್ಚಗೆ ಅವನೆದೆಗೊರಗಿ ನಿದ್ದೆ ಹೋಗಿದ್ದಳು. ಮುಂದೆ ಓದಿ »

ಲಿನಕ್ಸ್ ಗೆ ೧೭ ವರ್ಷದ ಹರೆಯ
October 7, 2008 - 9:01am — omshivaprakash
ಲಿನಕ್ಸ್ ಗೆ ಈಗ ೧೭ ವರ್ಷ. ಲಿನಕ್ಸ್ ಜರ್ನಲ್ ನಲ್ಲಿ ಕಂಡು ಬಂದ ಈ ಲೇಖನವನ್ನ ಒಮ್ಮೆ ಓದಿ. ೧೯೯೧ರಲ್ಲಿ ಲಿನಸ್ ಟೋರ್ವಾಲ್ಡ್ಸ್ "ನಿಮ್ಮ ಅಗತ್ಯಕ್ಕೆ ತಕ್ಕಂತೆ ಬದಲಿಸಿ ಉಪಯೋಗಿಸಿಕೊಳ್ಳ ಬಲ್ಲಂತಹ ಮಿನಿಕ್ಸ ಆಪರೇಟಿಂಗ್ ಸಿಸ್ಟಂ" ನ ಬಗ್ಗೆ ಜಗತ್ತಿಗೆ ಸಾರಿ ಹೇಳಿದ. ಇದನ್ನ ನೆನಪಿಸಿಕೊಳ್ಳಲು Encyclopedia Brittanica ಮೊನ್ನೆ ತನ್ನ ಮುಖಪುಟದ ವಿಷಯವನ್ನಾಗಿ "ಲಿನಕ್ಸ್ ಹುಟ್ಟು ಹಬ್ಬವನ್ನ" ಆಯ್ದು ಕೊಂಡಿತ್ತು. ಗಣಕ ತಂತ್ರಜ್ಞಾನದಲ್ಲಿ ಹೊಸದೊಂದು ಮೈಲಿಗಲ್ಲನ್ನೇ ಹಾಕಿಕೊಟ್ಟ ಟೋರ್ವಾಲ್ಡ್ಸನ ಕೆಲಸಕ್ಕೆ ಬೆನ್ನಲುಬಾಗಿದ್ದು, ಗ್ನು ಪ್ರಾಜೆಕ್ಟನ ಮೂಲಕ ೧೯೮೩ರಲ್ಲಿ ಜನರಿಗೆ ಸ್ವತಂತ್ರ ತಂತ್ರಾಂಶವನ್ನ ಪರಿಚಯಿಸಿದ "ರಿಚರ್ಡ್ ಸ್ಟಾಲ್ಮನ್" ಮತ್ತು ಗ್ನು ಪ್ರಾಜೆಕ್ಟ್ ನ ತಂತ್ರಾಂಶಗಳು. ಮಿಲಿಯಾಂತರ ಫೀ ಮತ್ತು ಓಪನ್ ಸೋರ್ಸ್ ಪ್ರಾಜೆಕ್ಟ್ ಗಳಿಗೆ ಇದು ಮಾದರಿಯಾಯ್ತು. ಜಗತ್ತಿನ ಕಂಪ್ಯೂಟರುಗಳಿಗೆ ಸ್ವತಂತ್ರ ತಂತ್ರಾಂಶವನ್ನ ಹುಟ್ಟುಹಾಕುವುದರೊಡನೆ, ಅನೇಕ ಹೊಸ ಆವಿಷ್ಕಾರಗಳು ಸಾಧ್ಯವಾದವು. ಮೈಕ್ರೋಸಾಫ್ಟ್ ವಿಂಡೋಸ್ ನ ಅಧಿಪತ್ಯವನ್ನ ಅಲುಗಾಡಿಸಿದ ಈ ತಂತ್ರಾಂಶ ಇಂದು ಕಂಪ್ಯೂಟರ್ ಗಳಲ್ಲದೆ, ಪಿಡಿಎ, ಮೊಬೈಲ್ ಫೋನು, ಎಮ್ಬೆಡೆಡ್ ಸಿಸ್ಟಂ ಹೀಗೆ ಅನೇಕ ಹಾರ್ಡ್ವೇರ್ಗಳಲ್ಲಿ ನಿರಾಳವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದೆ ಓದಿ »

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
October 7, 2008 - 12:32am — hamsanandiನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ. ದುರ್ಗಿ ಎಂದರೇನು? ಕಾಳಿ ಎಂದರೇನು? ಗೌರಿ ಎಂದರೇನು? ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ಎನ್ನುವ ಭಾವನೆ ನಮಗಿದ್ದರೂ ಕೂಡ ಅದೇನೋ ನವರಾತ್ರಿಯ ಏಳನೇ ದಿನ ಸರಸ್ವತಿಗೂ, ಎಂಟನೇ ದಿನ ದುರ್ಗಿಗೂ, ಒಂಬತ್ತು ಹತ್ತನೇ ದಿನಗಳು ಚಾಮುಂಡಿಗೂ ಇರುವುದು ಹಳೇ ಮೈಸೂರಿನ ಸಂಪ್ರದಾಯವಿರಬಹುದು. ದುರ್ಗಾಷ್ಟಮಿಯ ದಿನ ಮನೆ ಚಿಕ್ಕ ಹುಡುಗಿಯರನ್ನು ಕರೆದು ಅವರನ್ನಾದರಿಸುವ ಸಂಪ್ರದಾಯವೂ ಎಷ್ಟೋ ಕುಟುಂಬಗಳಲ್ಲಿದೆ.
ನೆನ್ನೆ ಶೃಂಗೇರಿ ಶಾರದೆಯ ಮೇಲೆ ಒಂದು ಕನ್ನಡದಲ್ಲಿರುವ ಹಾಡನ್ನು ಕೇಳಿಸಿದ್ದೆ. ಹೇಗಿದ್ದರೂ ಈಗ ನವರಾತ್ರಿಯಲ್ಲವೇ, ಅದಕ್ಕೆ ಇವತ್ತು ’ನವರಸ’ಕನ್ನಡದ ಒಂದು ಹಾಡನ್ನು ಕೇಳಿಸೋಣ ಎಂದುಕೊಂಡೆ
. ಹೌದು, ನವರಸ ಕನ್ನಡ ಅನ್ನುವುದೊಂದು ರಾಗದ ಹೆಸರು.
ಈ ರಚನೆ ಮುತ್ತಯ್ಯ ಭಾಗವತರದ್ದು. ನವರಾತ್ರಿಯ ಮೊದಲ ದಿನವೇ ಇವರದೊಂದು ದರು ವರ್ಣವನ್ನು ಕೇಳಿಸಿದ್ದೆನಲ್ಲ? ನೆನಪಿರಬಹುದು. ಮುಂದೆ ಓದಿ »

ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ
October 6, 2008 - 12:14pm — thoughtsarenotenough(ವೇಶ್ಯಾವಾಟಿಕೆ ಎಷ್ಟರಮಟ್ಟಿಗೆ ಸಾಮಾಜಿಕವಾಗಿ ಒಪ್ಪಲರ್ಹ, ಎಂಬುದನ್ನು ಮತ್ತೊಂದು ಲೇಖನದಲ್ಲಿ ಚರ್ಚಿಸಿದರಾಯಿತು. ಈ ಲೇಖನ, ಕೇವಲ acceptable prostitution ಬಗ್ಗೆ ಮಾತನಾಡುತ್ತದೆ.)
ಅನುಭವವನ್ನು ಕಾದಂಬರಿಯಲ್ಲಿ ತುಂಬಲು ಶಿವರಾಮ ಕಾರಂತರು ಮಾಡಿದ ಮತ್ತೊಂದು ಪ್ರಯತ್ನವೇ “ಮೈ ಮನಗಳ ಸುಳಿಯಲ್ಲಿ”. ಎಂದಿನಂತೆ ಕಾರಂತರು, ಕಥೆಯನ್ನು ಹೇಳುತ್ತ ಹೋಗುತ್ತಾರೆ. ಅವರ narrationನಲ್ಲಿ ಓದುಗನನ್ನು ಸೆಳೆದೆ ಹಿಡಿಯಬೇಕೆಂಬ ಹಂಬಲವಿಲ್ಲ. ಕಾದಂಬರಿಯನ್ನು ಅರ್ಧಕ್ಕೆ ನಿಲ್ಲಿಸಿ ಎದ್ದರೆ, ಎನೋ ಕಳೆದುಕೊಂಡೆ ಎನ್ನುವಂತಹ ಚಡಪಡಿಕೆ ಮೂಡಿಸುವದಿಲ್ಲ. ಆದರೆ, ಕಥೆಯನ್ನು ಹೇಳಿದಂತೆಲ್ಲ, ಕೇಳುವ ತಾಳ್ಮೆಯನ್ನು ಸೃಷ್ಟಿಸುತ್ತಾರೆ. ಇದು ಪಕ್ಷಪಾತ ರಹಿತ ಸಾಹಿತ್ಯಕ್ಕಿರಬೇಕಾದ ಮಹತ್ವದ ಲಕ್ಷಣ (ಇದು ಭೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವದಿಲ್ಲ. ಹೀಗಾಗಿ, ಅವರನ್ನು ನಿಷ್ಪಕ್ಷಪಾತ ಸಾಹಿತಿ ಎಂದು ನಾನು ಹೇಳಲಾರೆ.)
ಕಾರಂತರ ಎಲ್ಲ ಕಾದಂಬರಿಗಳನ್ನು ಗಮನಿಸಿದಾಗ, ಅವರು ಎಲ್ಲ ಪಾತ್ರಗಳನ್ನೂ ಅದರ ಸಾಮಾನ್ಯ ಪರಿಧಿಯಲ್ಲಿಯೇ ನಿಲ್ಲಿಸಿ ಅದಕ್ಕೆ ತೂಕ ತುಂಬುತ್ತಾರೆ. ಪಾತ್ರ ಬಣ್ಣ ಹಚ್ಚಿದಕ್ಷಣ ತನ್ನ ಎಲ್ಲ ಸಾಮಾನ್ಯ ಗುಣಗಳನ್ನು ಕಳೆದುಕೊಂಡು ಒಂದು ಹಂತ ಎತ್ತರಕ್ಕೆ ಹೋಗಲಾರದು.ಹಾಗೆ ಹೋಗಬಾರದು ಕೂಡ (ಹಾಗೇನಾದರೂ ಆದರೆ, ಪಾತ್ರಗಳು ತಮ್ಮ ನೈಜತೆಯನ್ನು ಕಳೆದುಕೊಂಡು, ಢೋಂಗಿಯಾಗಿಬಿಡುತ್ತವೆ. ಓದುಗನಿಗೆ ಒಂದು fairy tailನ ಅನುಭವ ಕೊಡುತ್ತವೆ. ಅಲ್ಲದೇ, ಅಲ್ಲಿ ಬರುವ “values and ethics” impractical ಆಗಿರುವ ಸಾಧ್ಯತೆ ಹೆಚ್ಚು). ಮುಂದೆ ಓದಿ »

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
October 6, 2008 - 10:34am — hamsanandiಇವತ್ತು ನವರಾತ್ರಿಯ ಏಳನೇ ದಿನ. ಮತ್ತೆ ಇವತ್ತೇ ಹೆಚ್ಚು ಜನರ ಮನೆಯಲ್ಲಿ ಸರಸ್ವತೀ ಪೂಜೆ ಕೂಡ. ಕೆಲವರು ಮಹಾನವಮಿಯ ಆಯುಧಪೂಜೆಯ ದಿನ ಸರಸ್ವತೀ ಪೂಜೆ ಮಾಡುವುದೂ ಉಂಟು.ಸರಸ್ವತಿ ಎಂದರೆ ನನಗೆ ನೆನಪಾಗುವುದು ಶೃಂಗೇರಿಯ ಶಾರದೆ. ಅದೆಂತಹ ಪ್ರಶಾಂತ ಸ್ಥಳ? ಅಲ್ಲಿ ದಸರೆಯ ಸಮಯದಲ್ಲಿ ನಡೆಯುವುವ ಪೂಜೆಗಳೂ ಹೆಚ್ಚಾಯದ್ದೇ. ಮಳಗಾಲ ಮುಗಿಯುತ್ತ ಬಂದಿರುವುದರಿಂದ ತಿಳಿಯಾಗಿ ಹರಿಯುವ ತುಂಗೆ. ಅದಕ್ಕೇ ಇರಬೇಕು ಶೃಂಗೇರಿಯ ಶಾರದೆಯ ಮೇಲಿರುವ ಸಂಗೀತ ರಚನೆಗಳಿಗೂ ಕೊರತೆ ಇಲ್ಲ.
ಕೆಲವು ಪ್ರಸಿದ್ಧ ಸರಸ್ವತೀ ಸ್ತುತಿಗಳನ್ನು ಕನ್ನಡಕ್ಕೆ(ಭಾವಾನುವಾದದಲ್ಲಿ) ತಂದಿರುವೆ. ಓದಿ, ನಂತರ ಹಾಡು ಕೇಳಬಹುದು. ಅಲ್ಲವೇ?
ಸರಸತಿಯೆ ತಲೆಬಾಗುವೆನು ಮನದಾಸೆಗಳನೀವಳೆ
ಅರಿವಿನಾಸೆಯೆನಗಿರಲು ಹರಸು ಕೈಗೂಡುತಿರಲೆಂದು ಮುಂದೆ ಓದಿ »





RSS: