ಭವದ ಅಗುಳಿ

ಪುಸ್ತಕದ ಲೇಖಕ/ಕವಿಯ ಹೆಸರು
ಸಂತೋಷ ಅಂಗಡಿ
ಪ್ರಕಾಶಕರು
ಅನ್ವೇಷಣೆ ಪ್ರಕಾಶನ, ಚಿಕ್ಕಲಸಂದ್ರ, ಬೆಂಗಳೂರು -೫೬೦೦೬೧
ಪುಸ್ತಕದ ಬೆಲೆ
ರೂ. ೧೨೫.೦೦, ಮುದ್ರಣ : ೨೦೨೩

'ಭವದ ಅಗುಳಿ’ ಸಂತೋಷ ಅಂಗಡಿ ಅವರ ಕವನ ಸಂಕಲನ. ಈ ಕೃತಿಗೆ ಎಚ್.ಎಲ್. ಪುಷ್ಪ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಇಲ್ಲಿನ ಕವಿತೆಗಳಲ್ಲಿ ತಾನು ಕಂಡ, ಅರ್ಥೈಸಿಕೊಂಡ ಬದುಕನ್ನು ಹಿಡಿಯಲೆತ್ನಿಸುವ ಒಬ್ಬ ಕವಿಯಿದ್ದಾನೆ. ಇಲ್ಲ ಲೋಕ ಸಾಂಗತ್ಯದ ಜೊತೆಗೆ, ಅವನಿಗೆ ಆತ್ಮ ಸಾಂಗತ್ಯವೂ ಸಹ ಸಾಧ್ಯ. ಹೀಗಾಗಿ ಅವನು ಹೊರಗೂ, ಒಳಗೂ ಸಂವಾದಿಸಬಲ್ಲವನು.

ನನ್ನದೊಂದು ಬದುಕಿನ ಪುಸ್ತಕ…(ಭಾಗ 1)

ವಿಶ್ವ ಪುಸ್ತಕ ದಿನದ ಅಂಗವಾಗಿ, ಏಪ್ರಿಲ್ 23. ಈ ದಿನದ ನೆನಪಾಗಿ ನನಗೂ ಪುಸ್ತಕ ಬರೆಯುವ ಆಸೆಯಾಗುತ್ತಿದೆ. ಬಹಳಷ್ಟು ಜನರು, ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ, ಬರೆಯುತ್ತಲು ಇದ್ದಾರೆ. ಆ ಪುಸ್ತಕಗಳ ಶೀರ್ಷಿಕೆಗಳೇ ನನಗೊಂದು ಅದ್ಭುತ, ಆಶ್ಚರ್ಯ, ಕುತೂಹಲಕರ.

Image

ಸ್ಟೇಟಸ್ ಕತೆಗಳು (ಭಾಗ ೯೪೫)- ಮೀನು

ನನ್ನ ಜೀವನಕ್ಕೆ ಏನು ಅರ್ಥ ಎಲ್ಲರಂತೆ. ನಾನು ಒಬ್ಬ ಜೀವಿ. ನನಗೂ ಬದುಕುವ ಹಕ್ಕಿದೆ.ಆದರೆ ನನ್ನ ಬದುಕು ಎಲ್ಲರ ಹಾಗಿಲ್ಲ. ನಾನು ನಿಮ್ಮನ್ನ ಸಂತೋಷ ಪಡಿಸುವುದಕ್ಕೆ ಸಂಭ್ರಮ ಪಡಿಸುವುದಕ್ಕೆ ಮಾತ್ರ ಹುಟ್ಟಿದ್ದೇನೆ ಅನ್ನುವ ಯೋಚನೆ ನನ್ನನ್ನು ಕಾಡ್ತಾ ಇದೆ. ಅಲ್ಲೆಲ್ಲೋ ಸಮುದ್ರದಲ್ಲಿ ನನ್ನಷ್ಟಕ್ಕೆ ಸಂಭ್ರಮದಿಂದ ಆಟವಾಡ್ತಾ ಇದ್ದಂತಹ ಕುಟುಂಬ ನಮ್ಮದು.

Image

ಇರುವೆಯಿಂದ ಕಲಿಯೋಣ !

ಇರುವೆಗಳ ಬಗ್ಗೆ ಕೇಳಿದಾಗ ಚಿಕ್ಕ ಜೀವಿಯೆಂದು ತಾತ್ಸಾರ ಮಾಡುವವರೇ ಹೆಚ್ಚು. ಇರುವೆಗಳಲ್ಲಿ ಕಣಜ ಮತ್ತು ದುಂಬಿಗಳು ಸೇರಿದಂತೆ ಹನ್ನೆರಡು ಸಾವಿರಕ್ಕೂ ಅಧಿಕ ಪ್ರಭೇದಗಳಿವೆ. ಇರುವೆಗಳು ಚಿಕ್ಕವುಗಳಾದರೂ ಅವುಗಳ ಜೀವನ ಕ್ರಮ ಬಹಳ ಚೊಕ್ಕ. ಇರುವೆಗಳಿಂದ ಮನುಷ್ಯರು ಕಲಿಯಲೇ ಬೇಕಾದ ಅನೇಕ ವಿಷಯಗಳಿವೆ.       

Image

ಹಳೆ ಅಡಿಕೆ- ಹೊಸ ಅಡಿಕೆ ಬೆಲೆ ವ್ಯತ್ಯಾಸ ಯಾಕೆ?

ಅಡಿಕೆ ಹಳೆಯದಾದರೆ ಅದಕ್ಕೆ ವಾರ್ಷಿಕ ಶೇ.೨೫ರ ಬಡ್ಡಿ ಬರುತ್ತದೆ ಎಂಬುದು ಈ ವರ್ಷದ ಧಾರಣೆಯಲ್ಲಿ ಮನವರಿಯಾಗಿದೆ. ದರ ಹೀಗೇ ಉಳಿದರೆ ಮುಂದೆ ಬೆಳೆಗಾರರು ಯಾವುದಾದರೂ ಬ್ಯಾಂಕ್ ನಲ್ಲಿ ಸಾಲ ಮಾಡಿ ಅದರ ಬಡ್ಡಿ ಕಟ್ಟಿದರೂ ಹೊಸ ಅಡಿಕೆ ಮಾರಾಟ ಮಾಡಬೇಕಾಗಿಲ್ಲ. ಹೊಸ ಅಡಿಕೆ ಮುಂದಿನ ಫಸಲು ಬರುವವರೆಗೆ ಉಳಿಸಿಕೊಂಡರೆ ಅದಕ್ಕೆ ಕಿಲೋ ಮೇಲೆ ೧೦೦ ರೂ.

Image

ಗುಕೇಶ್ ಗೆಲುವು : ಭಾರತದ ಯುವಶಕ್ತಿಯ ಸಂಕೇತ

ಕೆನಡಾದ ಟೊರಂಟೋದಿಂದ ಸೋಮವಾರ ಬೆಳಿಗ್ಗೆ ಭಾರತಕ್ಕೊಂದು ಶುಭ ಸಮಾಚಾರ ಬಂತು. ಡಿ.ಗುಕೇಶ್ ಕ್ಯಾಂಡಿಡೇಟ್ಸ್ ಚೆಸ್ ಪ್ರಶಸ್ತಿಯನ್ನು ಗೆದ್ದು ವಿಶ್ವಚಾಂಪಿಯನ್ ಶಿಪ್ ಫೈನಲ್ ಗೇರಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ. ೨೦೨೩ರಲ್ಲಿ ಆರ್. ಪ್ರಜ್ಞಾನಂದ ಚೆಸ್ ವಿಶ್ವಕಪ್ ಫೈನಲ್ ಗೇರಿದ, ಭಾರತದ ಕೇವಲ ೨ನೇ ಆಟಗಾರ ಎನಿಸಿಕೊಂಡಿದ್ದರು.

Image

ದೇಶ ಮುಖ್ಯವೋ, ದ್ವೇಷ ಮುಖ್ಯವೋ ದಯವಿಟ್ಟು ಅರ್ಥಮಾಡಿಕೊಳ್ಳಿ !

ಚೆಂಬು -  ಚಿಪ್ಪು -  ಮಂಗಳಸೂತ್ರ -  ಅಕ್ಷಯ ಪಾತ್ರೆ -  ಹಿಂದೂ - ಮುಸ್ಲಿಂ - ಗ್ಯಾರಂಟಿ - ಮುಂತಾದ ವಿಷಯಗಳ ಸುತ್ತ 2024 ನೇ ಲೋಕಸಭಾ ಚುನಾವಣಾ  ರಾಜಕೀಯ ನಡೆಯುತ್ತಿದೆ. ಪ್ರಧಾನಮಂತ್ರಿಗೂ ಅಧಿಕಾರದ ಚಿಂತೆ, ಮುಖ್ಯಮಂತ್ರಿಗೂ ಅಧಿಕಾರದ ಚಿಂತೆ, ಎಲ್ಲಾ ರಾಜಕೀಯ ನಾಯಕರಿಗೂ ತಮ್ಮ ಸ್ವಹಿತಾಸಕ್ತಿಯ ಸ್ವಾರ್ಥದ ಚಿಂತೆಯ ನಡುವೆ ನಲುಗುವುದು ಮಾತ್ರ ದೇಶ ಮತ್ತು ಜನರು.

Image

ಸ್ಟೇಟಸ್ ಕತೆಗಳು (ಭಾಗ ೯೪೪)- ಗೊಂಬೆ

ಸಣ್ಣದಾದ ಅಳುವಿನ ಸ್ವರ ಕೇಳುತ್ತಿದೆ. ಒಳಗೆ ಮನುಷ್ಯರ ಓಡಾಟವಿಲ್ಲ. ಅಳುವವರು ಯಾರೆಂದು ತಿಳಿಯುತ್ತಿಲ್ಲ. ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ತುಂಬಾ ನೋವಿನ ಕೂಗು ಅದು. ಇಷ್ಟು ದಿನ ಜೊತೆಗಿದ್ದು ಈಗ ತೊರೆದು ಹೋಗುವ ಮನಸ್ಥಿತಿಯ ಯಾತನೆಯ ಅಳುವಿನಂತೆ ಬಾಸವಾಗುತ್ತಿದೆ. ಅಳುವ ಹುಡುಕ ಹೊರಟವನಿಗೆ ಮನೆಯ ಮೂಲೆಯಲ್ಲಿ ದೂಳು ತಿನ್ನುತ್ತಾ  ಬಿದ್ದಿದ್ದ ಹಲವಾರು ಗೊಂಬೆಗಳ ಒಳಗಿನಿಂದ ಹೊರಟ ಸ್ವರವೆಂದು ಅರ್ಥವಾಯಿತು.

Image