ರುಚಿ ಸಂಪದ

  • ಹುರುಳಿಕಾಳನ್ನು 10ಗಂಟೆಗಳ ಕಾಲ ನೆನೆಸಿಡಿ, ಅಕ್ಕಿ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಎರಡು ಗಂಟೆ ನೆನಸಿಡಿ. ಅಕ್ಕಿಯನ್ನು ತರಿತರಿಯಾಗಿ, ಉದ್ದಿನಬೇಳೆಯನ್ನು ನುಣ್ಣಗೆ ರುಬ್ಬಿ, ಎರಡನ್ನೂ ಬೆರೆಸಿ ಹುದುಗಲು ಬಿಡಿ. ಹುರುಳಿಕಾಳನ್ನು ನುಣ್ಣಗೆ ರುಬ್ಬಿ , ಹುದುಗಿದ ಅಕ್ಕಿ, ಉದ್ದಿನಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಉಪ್ಪು ಸೇರಿಸಿ ಕಲಸಿಕೊಳ್ಳಿ, ತಕ್ಷಣ ಲೋಟದಲ್ಲಿ ಹಾಕಿ, ಕಡುಬಿನ ರೀತಿಯಲ್ಲಿ ಹಬೆಯಲ್ಲಿ ಬೇಯಿಸಿ. ಬಿಸಿಯಿರುವಾಗ ಮೃದುವಾದ ಈ ಸುರುಳಿ ಕಡುಬನ್ನು ಬೆಣ್ಣೆ ಮತ್ತು ಕಾಯಿ ಚಟ್ನಿಯೊಂದಿಗೆ ಸವಿಯಿರಿ.

    0
  • ಹುರುಳಿಕಾಳು ಮತ್ತು ಉಳಿದ ಎಲ್ಲ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ನಂತರ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿ. ಉಪ್ಪನ್ನೂ ಪುಡಿ ಮಾಡಿ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ. ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
    ಎರಡು ತಿಂಗಳವರೆಗೂ ಇದನ್ನು ಬಳಸಬಹುದು. ಬಿಸಿ ಅನ್ನ, ಇಡ್ಲಿ, ದೋಸೆಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

    0
  • ಹಣ್ಣಾದ ಹಲಸಿನ ತೊಳೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ, ನೆನೆಸಿಟ್ಟ ಅಕ್ಕಿಯೊಂದಿಗೆ ಸೇರಿಸಿ, ಉಪ್ಪು, ಜೀರಿಗೆ, ಕಾಳುಮೆಣಸು ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ರುಬ್ಬಬೇಕು. ಹಲಸಿನ ದೋಸೆ ಸಿಹಿಯಾಗುವುದರಿಂದ ತುಂಬಾ ಸಿಹಿ ಆಗದವರು, ಮಿಕ್ಸಿಗೆ ಹಾಕಿ ರುಬ್ಬುವ ಮಿಶ್ರಣಕ್ಕೆ ಎರಡು ಮೆಣಸು ಹಾಕಿಕೊಳ್ಳಬಹುದು. ರುಬ್ಬಿದ ಮಿಶ್ರಣವನ್ನು ಇಡ್ಲಿಯ ಹಿಟ್ಟಿನ ಹದ ಬರುವಂತೆ ನೀರು ಹಾಕಿ ಕಲಸಿ. ಹೆಚ್ಚು ನೀರಾಗಬಾರದು. ನಂತರ ದೋಸೆ ಕಾವಲಿಯನ್ನು ಇಟ್ಟು ಹದವಾದ ಉರಿಯಲ್ಲಿ ಕಾವಲಿಯನ್ನು ಕಾಯಿಸಿ, ಎಣ್ಣೆಯನ್ನು ಹಚ್ಚಬೇಕು. ಕಾವಲಿ ಕಾದ ನಂತರ ಹಿಟ್ಟಿನಿಂದ ದೋಸೆಯನ್ನು ಹುಯ್ಯಿರಿ. ಈ ದೋಸೆ ದಪ್ಪ…

    1
  • ಕಾಳು ಮೆಣಸು ಮತ್ತು ಜೀರಿಗೆಯನ್ನು ಹುರಿದಿಡಿ, ಮಿಕ್ಸಿಗೆ ಕಾಯಿತುರಿ, ಹುರಿದಿಟ್ಟ ಕಾಳು ಮೆಣಸು ಮತ್ತು ಜೀರಿಗೆ ಹಾಕಿ ನುಣ್ಣಗೆ ರುಬ್ಬಿ, ಒಂದೆಲಗವನ್ನು ಬೇರೆಯಾಗಿಯೇ ರುಬ್ಬಿ ಸೋಸಿ ಇಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ರುಬ್ಬಿದ ಕಾಯಿತುರಿ ಮಿಶ್ರಣ, ಸೋಸಿದ ಒಂದೆಲಗದ ರಸ, ಮಜ್ಜಿಗೆ, ಉಪ್ಪು, ಮತ್ತು ಬೆಲ್ಲವನ್ನು ಹಾಕಿ ಚೆನ್ನಾಗಿ ಕಲಸಿ. ನಂತರ ಎಣ್ಣೆ, ಸಾಸಿವೆ ಮತ್ತು ಒಣಮೆಣಸಿನ ಒಗ್ಗರಣೆ ಕೊಡಿ. ತಂಬುಳಿ ರೆಡಿ.

    0
  • ಇಡ್ಲಿ ಬೇಯಿಸುವ ಪಾತ್ರದಲ್ಲಿ ನೀರು, ಉಪ್ಪು ಹಾಕಿ ಹಲಸಿನ ಬೀಜವನ್ನು, ಹದವಾದ ಹಬೆಯಲ್ಲಿ ಚೆನ್ನಾಗಿ ಬೇಯಿಸಿ.
    ನಂತರ ತಟ್ಟೆ ಅಥವಾ ಪ್ಲಾಸ್ಟಿಕ್ ನಲ್ಲಿ ಹಾಕಿ ಒಂದು ವಾರ ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ನಂತರ ಒಂದು ಪ್ಲಾಸ್ಟಿಕ್ ನಲ್ಲಿ ಹಾಕಿ ಬೆಚ್ಚಗೆ ಕಟ್ಟಿಡಿ. ಜೋರಾಗಿ ಮಳೆ ಬರುವ ಸಮಯ ಮಳೆಗಾಲದಲ್ಲಿ ಚಳಿಗೆ ಜಗಿಯಲು ಚೆನ್ನಾಗಿರುತ್ತದೆ.
    ಅತಿ ಸುಲಭವಾಗಿ ಮಾಡುವ ರುಚಿಕರ ತಿನಿಸು. ಮಕ್ಕಳಿಗಂತೂ ಹೆಚ್ಚು ಪ್ರಿಯವಾಗುತ್ತದೆ.

    6
  • ಅಕ್ಕಿಯನ್ನು ತೊಳೆದು ನೆನೆಸಿಡಿ. ತರಕಾರಿಯನ್ನು ಹೆಚ್ಚಿಕೊಂಡು ಬೇಯಿಸಿಕೊಳ್ಳಿ. ನೆನೆಸಿದ ಅಕ್ಕಿ, ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ, ಇವುಗಳನ್ನೆಲ್ಲ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಬೆಂದ ತರಕಾರಿಗೆ ಜೊತೆಗೆ ಹಾಕಿ ಉಪ್ಪು ಮಿಶ್ರ ಮಾಡಿ ಕುದಿಸಿ. ಒಂದೆರಡು ಕುದಿ ಬಂದನಂತರ ಕೆಳಗಿಸಿ. ನಂತರ ಒಗ್ಗರಣೆ ಮಾಡಿ. ತಣ್ಣಗಾದ ನಂತರ ಮೊಸರು ಹಾಕಿ ಚೆನ್ನ್ನಾಗಿ ಮಿಶ್ರ ಮಾಡಿ. ಈಗ ಪಳದ್ಯ ಸವಿಯಲು ತಯಾರಾಗಿ.

    ಸೂಚನೆ : ಅಕ್ಕಿಯ ಬದಲಿಗೆ ಕಡಲೆ ಬೇಳೆ ಉಪಯೋಗಿಸಿದರೆ ಮಜ್ಜಿಗೆ ಹುಳಿಯಾಗುತ್ತದೆ

    1
  • ಟೊಮೆಟೊ, ಕ್ಯಾರೆಟ್, ಹಾಗೂ ಈರುಳ್ಳಿಯನ್ನು ದೊಡ್ಡ ದೊಡ್ಡ ತುಂಡುಗಳನ್ನಾಗಿ ಮಾಡಿ. ಅದಕ್ಕೆ ದಾಲ್ಚಿನಿ ಹಾಕಿ 6 ಕಪ್ ನೀರು ಸೇರಿಸಿ ಕುಕ್ಕರ್ ನಲ್ಲಿ ಎರಡು ವಿಸಲ್ ಬರುವವರೆಗೆ ಬೇಯಿಸಿ ತಣಿದ ಮೇಲೆ ಸೋಸಿರಿ. ನಂತರ ಉಪ್ಪು ಮತ್ತು ಅರ್ದ ಚಮಚ ಸಕ್ಕರೆ ಸೇರಿಸಿ ೧೦ ನಿಮಿಷ ಕುದಿಸಿರಿ. ಸೂಪ್ ಬಾಲ್‌ಗಳಿಗೆ ಎರಡೆರಡು ಹುರಿದ ಬ್ರೆಡ್ ತುಂಡುಗಳನ್ನು ಹಾಕಿ ಬೇಕಿದ್ದಲ್ಲಿ ಒಂದು ಸಣ್ಣ ಬೆಣ್ಣೆ ಉಂಡೆ ಹಾಕಿ, ಕರಿಮೆಣಸಿನ ಪುಡಿ ಸೇರಿಸಿ ಬಿಸಿಬಿಸಿಯಾಗಿ ಸೇವಿಸಿರಿ.

    0
  • ಹದವಾಗಿ ಬೆಳೆದ ಹಲಸಿನ ಕಾಯಿಯನ್ನು ಕತ್ತರಿಸಿ, ಅದರ ತೊಳೆಗಳನ್ನು ಪ್ರತ್ಯೇಕ ಮಾಡಿಕೊಳ್ಳಬೇಕು. ಆ ಹಲಸಿನ ತೊಳೆಗಳನ್ನು ಹಬೆಯಲ್ಲಿ ಚೆನ್ಬೇನಾಗಿ ಬೇಯಿಸಿ, ನಂತರ ಒರಲು ಕಲ್ಲಿನಲ್ಲಿ ಬೇಯಿಸಿದ ತೊಳೆಗಳನ್ನು ಹಾಕಿ,ಸ್ವಲ್ಪ ಮೆಣಸಿನಕಾಯಿಪುಡಿಯನ್ನು ಮತ್ತು ಉಪ್ಪನ್ನು ಹಾಕಿ, ಒನಕೆಯಿಂದ ಕುಟ್ಟಬೇಕು ಅಥವಾ ಮಿಕ್ಸಿಯಲ್ಲಿ ಹಾಕಿ ತಿರುವಬೇಕು - (ಚಪಾತಿ ಹಿಟ್ಟಿನ ರೀತಿ). ಅದನ್ನು, ಚಪಾತಿ ಮಾಡುವ ರೀತಿ, ಉಂಡಗಳನ್ನಾಗಿ ಮಾಡಿ, ಎರಡು ಮಣೆಗಳ ಮಧ್ಯೆ ಪ್ಲಾಸ್ಟಿಕ್ ಹಾಳೆಗಳ ನಡುವೆ ಅಥವಾ ಬಾಳೆ ಎಲೆಗಳ ಮಧ್ಯೆ ಇಟ್ಟು ಚಪಾತಿಯ ಆಕಾರಕ್ಕೆ ತರಬೇಕು. ಪ್ಲಾಸ್ಟಿಕ್ ಹಾಳೆಗೆ ಆ ಹಿಟ್ಟು ಅಂಟದಂತೆ ಮಾಡಲು, ತೆಂಗಿನ ಎಣ್ಣೆಯನ್ನು…

    1
  • ಬೇಯಿಸಿದ ಅಲೂಗಡ್ಡೆಗೆ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಎರಡು ಚಮಚ ಕಾರ್ನ್ ಫ್ಲೋರ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಸ್ಮಾಷ್ ಮಾಡಿಕೊಳ್ಳಬೇಕು. ಬೇಯಿಸಿದ ಮೊಟ್ಟೆಯನ್ನು ಎರಡು ಭಾಗ ಮಾಡಿ ಕತ್ತರಿಸಿ ಒಂದು ಭಾಗಕ್ಕೆ ಸ್ಮಾಷ್ ಮಾಡಿದ ಅಲೂಗಡ್ಡೆಯನ್ನು ಹಚ್ಚಿ. ಕಡಿಮೆ ಉರಿಯಲ್ಲಿ ಎಣ್ಣೆಯನ್ನು ಇಟ್ಟು ಫ್ರೈ ಮಾಡಬೇಕು. ಬಿಸಿ ಬಿಸಿ ಬೋಂಡಾ ರೆಡಿ. ಮೊಟ್ಟೆ ನಾಲಿಗೆಗೆ ಎಷ್ಟು ರುಚಿಯೋ ಆರೋಗ್ಯಕ್ಕೂ ಅಷ್ಟೇ ಹಿತಕರ.

    0
  • ಟೊಮ್ಯಾಟೋ ಕಾಯಿಯನ್ನು ತೊಳೆದು ಕತ್ತರಿಸಿಟ್ಟುಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಮಧ್ಯಕ್ಕೆ ಸೀಳಿಕೊಳ್ಳಿ. ಸಣ್ಣ ಬಾಣಲೆಗೆ ಎಣ್ಣೆ ಹಾಕಿ ಸ್ಟೌ ಮೇಲಿಡಿ. ಎಣ್ಣೆ ಬಿಸಿಯಾದ ನಂತರ ಟೊಮ್ಯಾಟೋ ಮತ್ತು ಹಸಿ ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ. ಕೊನೆಯಲ್ಲಿ ಅರಿಶಿನ ಹಾಕಿ. ಚೆನ್ನಾಗಿ ಫ್ರೈ ಆದ ನಂತರ ಕೆಳಗಿಳಿಸಿ, ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ತಿರುವಿರಿ. ಟೊಮ್ಯಾಟೋ ಚೆನ್ನಾಗಿ ನುಣ್ಣಗಾದ ನಂತರ ಉಪ್ಪನ್ನು ಹಾಕಿ ಪುನಃ ಒಂದೆರಡು ಬಾರಿ ತಿರುವಿರಿ. ಈಗ ಈ ಮಿಶ್ರಣವನ್ನು ಒಂದು ಪುಟ್ಟ ಬೌಲಿಗೆ ಬಗ್ಗಿಸಿಕೊಳ್ಳಿ. ಮೇಲೆ ಹೇಳಿದ ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ. ದಿಢೀರ್ ಟೊಮ್ಯಾಟೋ ಕಾಯಿ ಚಟ್ನಿ…

    0