ಕೆಲವು ಹನಿಗಳು...
ಕವನ
ಅಪ್ಪು
ರಾತ್ರಿ ಮಡದಿಯಲ್ಲಿ ಹೇಳಿದೆ
ನಾಳೆ ಪರಿಸರ ದಿನ
ಮರ ಅಪ್ಪುವ ಚಳುವಳಿ ಇದೆಯೆಂದು
ಅದಕ್ಕವಳು ಹೇಳಿದಳು
ನಾಳೆಯಲ್ಲವೆ ಅಲ್ಲಿಯವರೆಗೆ
ಕಾಯುವುದು ಏಕೆಂದು ಬಿಗಿದಪ್ಪಿದಳುಯಿಂದು
***
ಮನೆ ಮತ್ತು ಮಹಲು
ಮನೆಯಲ್ಲಿ ಮಹಲಲ್ಲಿ
ಕಛೇರಿಯ ಸೌಧದಲ್ಲಿ
ಮಹಾತ್ಮರ ಚಿತ್ರಗಳನಿಟ್ಟು ಪ್ರಯೋಜನವೇನು
ನಂಬಿಕೆ ಇಲ್ಲದೊಡೆ
ಭಯವು ಎಲ್ಲಿಂದ
ಅವರ ಆದರ್ಶ ಪಾಲಿಸದೊಡೆ ಲಾಭವೇನು
***
ಮನ
ಮನ ಝರ್ಜರಿತವಾಗುವ
ಮೊದಲೆ ಬದುಕ ಪಯಣ
ಕೊನೆಗೊಳ್ಳಬೇಕು ಯಾವಾಗಲೂ ಹೀಗೆಯೇ
ಮಲಗಿದಲ್ಲಿಯೆ ಕೆಮ್ಮು
ದಮ್ಮುಗಳ ಜೊತೆಯಿರೆ
ನೋಡುವವರಿಗೇ ಕಷ್ಟ ತಿಳಿಯೋಣ ಹೌದಲ್ಲವೇ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್