ಚಂದಮಾಮ

ಚಂದಮಾಮ

ಸೂರ್ಯಾನು ಮುಳುಗಿದನೋ

ಚಂದೀರ ಬೆಳಗಿದನೋ

ಚಂದಮಾಮ ಮೂಡೀದನೆಂದು

ಹಕ್ಕಿ ಗೂಡ ಸೇರಿದವೋ॥

 

ಸುಂದಾರ ಚಂದಿರನೋ

ಬೆಳದಿಂಗ್ಳ ಚೆಲ್ಲಿಹನೋ

ದಿಗಂತದಾಚೆ ಬೆಟ್ಟದ ಮೇಲೆ

ಚಂದೀರ ಬೆಳಗಿಹನೋ॥

 

ಆಕಾಶ ನೌಕೆಯೊಂದೂ

ವಿಕ್ರಮನ ಹೊತ್ತೊಯ್ದೂ

ಚಂದ್ರಾನ ಮೇಲೇ ಇಳಿಸಿ

ದಾಖಾಲೆ ಬರೆದಿಹೆವೋ॥

 

ಚಂದ್ರಾನ ನೆಲದ ಮ್ಯಾಲೇ

ತ್ರಿವರ್ಣಾ ಧ್ವಜವಾ ನೆಟ್ಟು

ದೇಶಾದ ಕೀರ್ತಿ ಹರಡಿ

ಸಂಭ್ರಮವ ಚೆಲ್ಲುತಿಹೆವೋ॥

(ಧಾಟಿ: ತಿಂಗಾಳು ಮುಳುಗಿದವೋ...)

-ಕೆ ನಟರಾಜ್. ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ