ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕಳ್ಳ-ಕಳ್ಳರೆಲ್ಲಾ ಸೇರಿದಲ್ಲಿ ಒಳ್ಳೆಯದನ್ನರೆಸುವುದೆಲ್ಲಿ?

                ಸಂಸತ್ತಿನ ಇಡೀ ಚಳಿಗಾಲದ ಅಧಿವೇಶನ ಶೂನ್ಯದಲ್ಲಿ ಮುಗಿದುಹೋಯಿತು!


                ವಿರೋಧ ಪಕ್ಷಗಳ ನಂಬಿಕೆದ್ರೋಹವಂದೇ ವಿವೇಕಿಗಳಿದನ್ನು ಭಾವಿಸಬೇಕಾಗುತ್ತದೆ. ಆಡಳಿತದವರು ಸಹಸ್ರ ಸಹಸ್ರ ಕೋಟಿಗಳನ್ನು ಲೆಕ್ಕ-ಜಮಾಗಳಿಲ್ಲದೆ ನುಂಗಿ ನೊಣೆದರಂತೆ. ಹಾಗೆಂದು ವಿರೋಧ ಪಕ್ಷದವರು ಕುಣಿದು ಕುಪ್ಪಳಿಸಿದರು. ಆದರೆ ಸಂಸತ್ತಿನ ಒಳಗೆ ಹೊಗುವಷ್ಟೂ ಧೈರ‍್ಯವಿಲ್ಲದ ಅವರ ಪುಕ್ಕಲಿನಿಂದಾಗಿ, ತಿಂದವರು ಬಚವಾಗಿಬಿಟ್ಟರು! ಇಂತಹ ನಾಟಕದ ಒಳ ಒಪ್ಪಂದವೇ “ಆಳುವ”, “ಆಡುವ” ಕುಳಗಳ ನಡುವೆ ಆಗಿದ್ದಿರಲಾರದೇಕೆ?!

ಉಪ್ಪಿಯ "ಸೂಪರ್"...ಸೂಪರ್..

ಶನಿವಾರ ಸಂಜೆ ಸಮಯ ಕಳೆಯಲು ಉಪ್ಪಿಯ ಸೂಪರ್ ಸಿನಿಮಾ ನೋಡಲು ಹೋಗಿದ್ದೆ. ಉಪ್ಪಿ ನನ್ನ ಅಚ್ಚುಮೆಚ್ಚಿನ ಕಲಾವಿದ. ಆತನ ಕ್ರಿಯಾಶೀಲತೆ, ವಿಭಿನ್ನತೆ ನನಗೆ ಬಹಳ ಇಷ್ಟ. ಅದೂ ಅಲ್ಲದೆ ಹತ್ತು ವರ್ಷಗಳ ನಂತರ ಮತ್ತೆ ನಿರ್ದೇಶನ ಮಾಡಿರುವ ಚಿತ್ರ. ನಾನು ಆತನ ಕಡೆಯ ಚಿತ್ರ ನೋಡಿದ್ದು ರಕ್ತ ಕಣ್ಣೀರು. ಆಮೇಲೆ ಬಂದ ಆತನ ಬಹುಪಾಲು ಚಿತ್ರಗಳು ರೀಮೇಕ್ ಆದ್ದರಿಂದ ನೋಡಿರಲಿಲ್ಲ. ಹಾಗಾಗಿ ಬಹಳ ನಿರೀಕ್ಷೆಯೊಂದಿಗೆ ಸೂಪರ್ ಸಿನಿಮಾ ನೋಡಲು ಹೋದೆ. ಚಿತ್ರ ಮುಗಿಸಿ ಬಂದ ಮೇಲೆ ನನ್ನ ನಿರೀಕ್ಷೆ ಹುಸಿಯಾಗಲಿಲ್ಲ. Uppi is Back with a Bang .

ಇಂದಿನ ಪರಿಸ್ಥಿತಿಯಲ್ಲಿ ಸ್ವದೇಶಿ ಯಾವುದು? ವಿದೇಶಿ ಯಾವುದು?

        ವಿಕಾಸ ಹೆಗಡೆ ರಾಜೀವ ದೀಕ್ಷಿತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬರೆದ ಲೇಖನದ (http://sampada.net/blog/vikashegde/03/12/2010/29321)  ಚ ರ್ಚೆಯು ಎಲ್ಲೆಲ್ಲೋ ತಲುಪಿದೆ. ಆ ಕೊಂಡಿಯು ಚರ್ಚೆಗೆ ಸರಿಯಲ್ಲ ಅನ್ನಿಸಿದ್ದು, ಚರ್ಚೆಯು ಅಗತ್ಯ ಎನ್ನಿಸಿದ್ದರಿಂದ ಈ ಕೊಂಡಿಯಲ್ಲಿ ಮುಂದುವರಿಸುತ್ತಿದ್ದೇನೆ.

 

 ವಿಷಯ ಇಷ್ಟು!

ಒಂದು:

ಸ್ವದೇಶಿ ಎಂಬ ತತ್ವವನ್ನು ಬಹಳ ಜನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಸ್ವದೇಶಿ ಎಂದರೆ ಆ ಪ್ರದೇಶದ್ದು ಮಾತ್ರ ಎಂದರ್ಥ. ಭಾರತ ದೇಶದ್ದು ಅಂತ ಅರ್ಥ ಅಲ್ಲ.

ಸ್ವದೇಶಿಯಲ್ಲಿ ಎಂದರೆ ಮೆಟ್ಟಿಲುಗಳು ಹೀಗಿವೆ,

ಹಿಮದ ನಾಡಿನಲ್ಲಿ...

ದೇನೋ ಕೆಲಸದ ಮೇಲೆ ಕ೦ಪೆನಿಯವರು ನನ್ನ ಮೇಲೆ ಕೃಪೆ ತೋರಿ ಅಮೆರಿಕಾಕ್ಕೆ ಕಳಿಸಿದರು. ಹೋಟೆಲ್ ನಮ್ಮ ಪಾಲಿನ ತಾತ್ಕಾಲಿಕ ಮನೆ. ಜೀವನದಲ್ಲಿ ಮೊದಲ ಬಾರಿ ಹಿಮ ಬೀಳೋದನ್ನು ನೋಡಿದಾಗದ ಕೆಲವು ಅನುಭವಗಳನ್ನು ಇಲ್ಲಿ ಬರೆದಿದ್ದೇನೆ. ಈ ಬರಹದಲ್ಲಿ 90% ವಾಸ್ತವ, ಆಮೇಲೆ ರುಚಿಗೆ ಸ್ವಲ್ಪ ಉಪ್ಪು ಖಾರ.

ಭಾನುವಾರದ ಒಂಟಿತನದ ಲಹರಿಯಲ್ಲಿ. ಸ .ರಿ .ಗ .ಮ. ಪ.

ಇಂದೂ ಕೂಡ ಎಂದಿನಂತೆಯೇ ಮೂಡಣದಲ್ಲಿ ಭಾಸ್ಕರ ನಗುತ್ತಾ ಮೂಡಿದನಾದರೂ’ನನ್ನ ಹೃದಯದಲ್ಲಿ,ಮನೆಯಲ್ಲಿ,ಮನದಲ್ಲಿ ಬರೀ ಖಾಲಿ ಖಾಲಿ ಏಕೆ?,ನನ್ನ ಜೀವನದಲ್ಲಿ ಅಂತಹ ವ್ಯತ್ಯಾಸ ಏನಾಯಿತು? ಹೀಗೇಕೆ ಆಯಿತು?’ ಎಂದು ಯೋಚಿಸುತ್ತಿರುವಾಗಲೇ ಮೊಬೈಲ್ ಕೋಳಿ ’ಬೆಳಗಾಗಿದೆ’ಎಂದು ಸುಪ್ರಭಾತ ಹಾಡತೊಡಗಿತು. ಕಣ್ಣು ಮುಚ್ಚಿಕೊಂಡೆ ಕೂಗುವ ಕೋಳಿಯ ತಲೆಯ ಮೇಲೆ ಮಟುಕಿದೆ ಮತ್ತು ಹಾಗೇ ಮಂಚದ ಮೇಲೆ ಹೊರಳಾಡುತ್ತಿದ್ದಂತೆಯೇ ಮತ್ತೆ ಅದೇ ಪ್ರಶ್ನೆ ’ ಮನಸ್ಸೆಲ್ಲಾ ಖಾಲಿ ಖಾಲಿ ಏಕೆ?’. ಮಾಗಿಯ ಚಳಿ ಬೇರೆ ಹೊದಿಕೆಯ ಜೊತೆ ಮಂಚದ ಹಾಸಿಗೆ ಕೂಡ ಮೈಗೆ ಅಂಟಿಕೊಂಡಂತೆ ಭಾಸವಾಯಿತು.