ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಡಾಕು ಮಂಗಲ್ ಸಿಂಗ್....

ಮುಂಜಾನೆ ಬೇಗ ಎದ್ದು, ನಾನು ಬರೆದಿರುವ ಲೇಖನದ ಹಿಟ್ಸ್ ನೋಡುತ್ತಾ ಕುಳಿತಿದ್ದೆ. ಇನ್ನೂ ಸವಿ ನಿದ್ದೆಯಲ್ಲೇ ಇದ್ದ, ನನ್ನ ಮಡದಿ ಏನ್ರೀ, ಏನು ಮಾಡುತ್ತಾ ಇದ್ದೀರ ಎಂದಳು. ಹಿಟ್ ನೋಡುತ್ತಾ ಇದ್ದೀನಿ ಕಣೇ ಎಂದೆ. ಏಕೆ? ಎಂದು ಬೆಚ್ಚಿ ಎದ್ದು ಬಿಟ್ಟಳು. ಎಲ್ಲಿದೆ ಜಿರಳೆ? ಎಂದಳು. ಅವಳಿಗಿಂತ ಜ್ಯಾಸ್ತಿ ಘಾಬರಿ ಆಗಿದ್ದು ನಾನು. ನಾನು ಕುರ್ಚಿಯಿಂದ ಟ್ಯಾಂಗ್ ಎಂದು ಜಿಗಿದೆ. ಕುರ್ಚಿ ಲಡಕ್ಕ್ ಎಂದು ಮುರಿದು, ಅದರ ಜೊತೆ ನಾನು ಬಿದ್ದೆ. ನಾನು ಅವಳಿಗೆ ಕೇಳಿದೆ ಎಲ್ಲಿದೆ ಜಿರಳೆ ಎಂದು. ನೀವು ತಾನೇ ಹಿಟ್ ಹುಡುಕುತ್ತಾ ಇರೋದು ಎಂದಳು. ನಾನು ತಲೆ ಜಜ್ಜಿಕೊಂಡು, ನಾನು ನೋಡುತ್ತಾ ಇರೋದು ನನ್ನ ಲೇಖನದ ಹಿಟ್ಸ್ ಗಳನ್ನ ಎಂದಾಗ, ಓ ಕರ್ಮ ನಿಮಗೆ ಒಂದು ಕೆಲಸ ಇಲ್ಲ ಎಂದರೆ, ಎಲ್ಲರೂ ಹಾಗೇನಾ? ಎಂದು ಬೈದು, ಮುಖ ತೊಳೆದುಕೊಂಡು ಬಂದು ಟೀ ಮಾಡಲು ಅನುವಾದಳು.

ತಾಯಿ

ಎರಡಕ್ಷರದ ದೈವ ಸ್ವರೂಪ ಈ ತಾಯಿ

ಭೂಮಿಯ ಮೇಲೆ ಅವತರಿಸಿರುವ ಪ್ರತ್ಯಕ್ಷ ದೈವ ತಾಯಿ

 

ನವಮಾಸಗಳು ಹೊತ್ತು ಜನ್ಮ ಕೊಟ್ಟ ಸಹೃದಯಿ ತಾಯಿ

ತನ್ನ ನೋವಿನಲ್ಲೂ ನಮ್ಮ ನಗುವ ಕಾಣಬಯಸುವ ತಾಯಿ..

 

ಕರುಣೆಯ ಭಂಡಾರ ಕರುಣಾಮಯಿ ಈ ತಾಯಿ

ಸದಾ ನಮ್ಮೊಳಿತಿಗೆ ಜೀವ ಸವೆಸುವ ಈ ತಾಯಿ

 

ಸಹನಾಮಯಿ ಅದರ್ಶರೂಪಿ ಈ ತಾಯಿ

ಮಮತೆ ವಾತ್ಸಲ್ಯಗಳ ಪ್ರತಿರೂಪಿ ತಾಯಿ

 

ಹೇಗೆ ತೀರಿಸಲಿ ನಿನ್ನ ಋಣವ ತಾಯಿ

ವಂದಿಪೆ ನಿನಗೆ ಶಿರವ ಬಾಗಿ ತಾಯಿ..

ಸ್ವಗತ

ಇಂದು ಕೊನೆಗೂ ನಿನ್ನ ಆಸೆ ಈಡೇರಿಸಲು ನಾನು ಬರೆಯಲು ಹೊರಟಿರುವ ಈ ಬರಹವನ್ನು ಪ್ರಾರಂಭಿಸುವ ಮೊದಲು ನನ್ನ ಮನದಲ್ಲಿ ದುಗುಡ, ನ್ಯಾಯ ಸಲ್ಲಿಸಬಲ್ಲೆನೇ? ಇನ್ನೊಬ್ಬರನ್ನು ಮೆಚ್ಚಿಸಲೆಂದೇ ಬರೆದು ಸ್ವಂತದ ಖುಶಿಗೆ ಬರೆವೆನೆಂಬ ಆಷಾಢಭೂತಿತನಕ್ಕೆ ಮತ್ತು ಇನ್ನೊಬ್ಬರ ಭಾವನೆಗಳನ್ನು ಕದ್ದು ಕಾಗದಕ್ಕಿಳಿಸಿ ಓದುವವರಿಗೆ ಸಂತೋಷವನ್ನೋ ಅಥವಾ ನೋವನ್ನೋ ಕೊಡುವ ಸೃಜನಶೀಲ ಪರಂಪರೆಗೆ ನಿನ್ನನ್ನೂ ಸಲ್ಲಿಸುತ್ತಿದ್ದೇನೆಯೇ, ಗೊತ್ತಿಲ್ಲ. ಆದರೆ ನಿನ್ನ ಬಗ್ಗೆ ಬರೆಯಲೇ ಬೇಕು ಎಂದು ತೀರ್ಮಾನಿಸಿದ್ದೇನೆ. ಏಕೆಂದರೆ ಬದುಕು ಇಂದು ತಂದೊಡ್ಡಿರುವ ಕವಲುಗಳಲ್ಲಿ ಇನ್ನು ಮುಂದೆ ನಿನ್ನ ಬಗ್ಗೆ ಬರೆಯಬಲ್ಲೆನೋ.. ನನಗೇ ಗೊತ್ತಿಲ್ಲ.

ಹನಿಗವನಗಳು

   ಸಮರ್ಪಣೆ

" ಭಾವಲೋಕದೊಳು ವಿಹರಿಸಿ

  ಭಾವನೆಗಳ ಸಂಗ್ರಹಿಸಿ

  ಭಾವನೆಗಳನ್ನು ಪದಗಳಿಂದ ಬಂಧಿಸಿ

  ಪದಗಳನ್ನು ಹೃದಯವೆಂಬ ಹಾಳೆಯೊಳು ಇಳಿಸಿ

  ನನ್ನ ಹೃದಯದಿಂದ ನಿಮ್ಮ ಹೃದಯಕೆ ಕಳುಹಿಸಿ

  ಧನ್ಯನಾಗುವೆ ನಿಮಗೆಂದು ಸಮರ್ಪಿಸಿ.."

 

  ಓ ನನ್ನ ನಲ್ಲೆ

" ಓ ನನ್ನ ನಲ್ಲೆ

  ನೀ ಎಷ್ಟೆಂದರು ವಲ್ಲೆ

  ನಿಲ್ಲುವದಿಲ್ಲಾ ಈ ಪ್ರೀತಿಯ ಸೆಲೆ

 

   ಈ ಪ್ರೀತಿಗಿಲ್ಲ ಯಾವುದರ ಬಂಧನ

   ನೀ ಮಾಡಿದರೆ ಇದಕೆ ಸ್ಪಂದನ

   ಆಗುವದು ನಮ್ಮಿಬ್ಬರ ಪ್ರೇಮ ಬಂಧನ.."

 

ರೌಡಿ ಗೌಡಪ್ಪ

ಗೌಡಪ್ಪ ಯಾಕೋ ಮನೆ ಮುಂದೆ ದರ್ಬೇಸಿ ತರಾ ಕುಂತಿದ್ದ. ಯಾಕಲಾ, ಥೂ ಯಾಕ್ರೀ ಅಂದೆ. ನೋಡಲಾ ಯಾವನೋ ರೌಡಿಯಂತೆ, ಬಂದು ಮಗನೇ ಎತ್ತಲಾ ಕಾಸು ಅಂದು ಹತ್ತು ಸಾವಿರ ರೂಪಾಯಿ ತಗೊಂಡು ಹೋದ ಕಲಾ ಅಂದ. ನೋಡಲಾ ನಾನು ರೌಡಿ ಆಯ್ತೀನಿ, ಯಾಕ್ರೀ ಇಂತಹ ಕೆಟ್ಟ ಯೋಸನೆ ಅಂದೆ. ನೋಡಲಾ ಬಂಡವಾಳ ಇಲ್ಲದ ದುಡಿಮೆ ಅಂದ್ರೆ ಇದೇ ಕಲಾ. ಅಂಗೇ ಸಾನೆ ಬೆಲೆ ಅಂದ. ಯಾಕೆ ಭಿಕ್ಸಾಟನೆ ಅಯ್ತಲ್ಲಾ ಅಂದೆ. ಏ ಥೂ ಅದರಿಂದ ನಮ್ಮ ಡಿಗಿನಿಟಿ ಡವನ್ ಆಯ್ತದೆ ಅಂದೋನು. ನೋಡಲಾ ನಾನು ಬೆಂಗಳೂರಿಗೆ ಹೊಂಟೀವ್ನಿ. ಯಾರನ್ನ ಭೇಟಿಯಾಗಬೇಕು ಹೇಳಲಾ ಅಂದ ಗೌಡಪ್ಪ. ನೋಡ್ರೀ ಜಯ ಕುಮಾರ್, ಕೊತ್ವಾಲ್ ಅಂದೆ. ಲೇ ಅವರೆಲ್ಲ ಸತ್ತು ಹೋಗವ್ರೆ ಅಂದ ಗೌಡಪ್ಪ.

ನಾನೊ೦ದು ಹಿಮಬಿ೦ದು!

(ದಿನಾ೦ಕ ೨೧, ನವೆ೦ಬರ್, ೨೦೧೦ರ೦ದು ನಡೆದ ಸ೦ಪದ ಸಮ್ಮಿಲನದಲ್ಲಿ ವಾಚಿಸಿದ ಪುಟ್ಟ ಕವನವಿದು.)

ನಾನೊ೦ದು ಹಿಮಬಿ೦ದು
ಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!

ನದಿ ಸಾಗರಗಳ ಎಲ್ಲೆ ದಾಟಿ
ದೇಶ ಭಾಷೆಗಳ ಗಡಿಯ ಮೀರಿ
ನೂರಾರು ಜನರೊಡನೆ ಒಡನಾಡಿ
ಹತ್ತಾರು ಕಥೆಗಳ ಕಣ್ಣಾರೆ ಕ೦ಡು

ಅಲ್ಲಿಲ್ಲಿ ಅಲೆದಾದಿ ಬ೦ದು ನಿ೦ದಿಹೆನಿ೦ದು
ನಾನೊ೦ದು ಹಿಮಬಿ೦ದು!

ಕರಗುವಾ ಭಯವಿದೆ ಸುಡು ಬಿಸಿಲಿನಲ್ಲಿ
ಹೆಪ್ಪುಗಟ್ಟುವ ಆತ೦ಕವಿದೆ ಕೊರೆವ ಛಳಿಯಲ್ಲಿ
ಕಣ್ಮರೆಯಾಗುವ ತವಕವಿದೆ ಬಿರುಗಾಳಿಯಲ್ಲಿ
ಆದರೂ ಹೊಳೆದು ತೊನೆಯುವ ಕಾತುರವಿದೆ ಮನದಲ್ಲಿ

ನಾನೊ೦ದು ಹಿಮಬಿ೦ದು
ಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!

ಪ್ರಭಾವಿತ ಸಾಹಿತ್ಯ ಕೃಷಿ...!

 

 

ಕತೆ ಕವಿತೆ ಕಾವ್ಯವೆಂಬ ಸಾಹಿತ್ಯ ಕೃಷಿಯೆಂಬುದು
ವಾಹನ ಚಲಾಯಿಸಿದಂಥೆ ಎಂದೆಂಬ ಮಾತುಗಳನ್ನು ಕೇಳಿರುವೆನು ನಾನು

ವಾಹನ ಚಲಾಯಿಸಲು ತರಬೇತಿ ಪಡೆದರಷ್ಟೇ
ಉತ್ತಮ ಚಾಲಕರಾಗಬಲ್ಲರು ಎಂದೆಂಬ ಉದಾಹರಣೆಗೂ ಕಿವಿಯಾದೆ ನಾನು

ಅನ್ಯರು ಬರೆದುದೆಲ್ಲವ ಓದುತ್ತಾ ಇದ್ದು ಸಾಹಿತ್ಯ ಕೃಷಿ
ನಡೆಸಿದರಷ್ಟೇ ಉತ್ತಮ ಚಾಲಕರಂಥೆ ಉತ್ತಮ ಬರಹಗಾರರಾಗಬಲ್ಲರಂತೆ

ರಸ್ತೆ ಬದಿಯಲಿ ನಿಂತು ಓಡುವ ವಾಹನಗಳನ್ನು ನೋಡುತ್ತಾ

ವಾಹನ ಚಲಾಯಿಸಲು ಕಲಿಯಲಾದೀತೇ ಎಂಬುದೇ ನನ್ನನ್ನು ಕಾಡುವ ಚಿಂತೆ

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗೆನು

ಪ್ರಸಕ್ತ ಯಡ್ಡಿ ರಾಜಕೀಯವನ್ನು ಕಸ್ತೂರಿ ನಿವಾಸ ಚಿತ್ರದ ಆಡಿಸಿ ನೋಡು ಹಾಡಿಗೆ ಸಾಹಿತ್ಯ ಬದಲಿಸಿ ಬರೆದಿದ್ದೇನೆ.

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗೆನು..

ಏನೇ ಬರಲಿ ಯಾರಿಗು ಸೋತು ತಲೆಯ ಬಾಗೆನು..

ಎಂದಿಗು ನಾನು ಹೀಗೆ ಇರುವೆ ಎಂದು ನಗುವೆನು ಹೀಗೆ ನಗುತಲಿರುವೆನು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗೆನು

 

ಹಗರಣವಾಗಲಿ ಗಲಾಟೆಯಾಗಲಿ ಆಟ ನಿಲ್ಲದು..

ಸಿದ್ದುವೆ ಬರಲಿ ಕುಮಾರ ಬರಲಿ ಕ್ಯಾರೆ ಎನ್ನೆನು..

ಕಷ್ಟವೋ ಸುಖವೋ ಅಳುಕದೆ ಆಡಿ ತೂಗುತಿರುವೆನು....ತೂಗುತಿರುವೆನು

ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗೆನು

 

ಭೂಮಿಯ ನುಂಗಿ ನೀರನು ಕುಡಿದರೆ ಹಣವು ಬರುವುದು..

ಸಿಡಿ ಯ ಕೊಟ್ಟರು ದಾಖಲೆ ಇಟ್ಟರು ಇನ್ನು ನುಂಗುವೆನು