ನಮ್ಮ ಚಟಕ್ಕೆ ಬರೆಯುತ್ತೇವೆಯೇ?
ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ:
ಶೀತೋಷ್ಣ ಸು:ಖ ದು:ಖೇಷು ಸಮ: ಸಂಗ ವಿವರ್ಜಿತ:|
- Read more about ನಮ್ಮ ಚಟಕ್ಕೆ ಬರೆಯುತ್ತೇವೆಯೇ?
- 21 comments
- Log in or register to post comments
ಸಮ: ಶತ್ರೌ ಚ ಮಿತ್ರೇ ಚ ತಥಾ ಮಾನಾಪಮಾನಯೋ:
ಶೀತೋಷ್ಣ ಸು:ಖ ದು:ಖೇಷು ಸಮ: ಸಂಗ ವಿವರ್ಜಿತ:|
ಹಿಂದೀ ಚಲನಚಿತ್ರ ಗೀತೆಯೊಂದರ ಭಾವಾನುವಾದ:
ನಾ ನಿನ್ನ ನೋಡುತ್ತಿದ್ದರೆ ನನಗನ್ನಿಸುತಿದೆ ಹೀಗೆ
ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ
ನೀನು ಸಾಗರವಾದರೆ ಬಾಯಾರಿದ ನದಿ ನಾನು
ಸುರಿವ ಸೋನೆಯಾದರೆ ಸುಡುತಿಹ ಹೂವು ನಾನು
ನೀನು ಸಾಗರದಂತೆ..
ನನ್ನ ನಿದ್ದೆ, ನೆಮ್ಮದಿಯ ಮರಳಿಸು ನನಗೆ ನೀನು
ಸುಂದರ ಕನಸುಗಳ ರಾತ್ರಿಯೊಂದ ನೀಡು ನೀನು
ಈ ಮಾತನ್ನು ನಾನು ಹಿಂದೆಯೂ ನುಡಿದಿರುವೆ
ಅದೇ ಮಾತ ಇಂದು ನಾ ಮರು ನುಡಿಯುತಿರುವೆ
ನೀನು ಸಾಗರದಂತೆ..
ನಿನ್ನ ಸ್ಪರ್ಷಿಸಿದ ಧೂಳು ಕ್ಷಣದಲ್ಲಿ ಚಂದನವಾಯ್ತು
ಆ ಗಂಧದಿಂದೀ ತನುವೂ ಕಂಪ ಸೂಸುವಂತಾಯ್ತು
ಡಿಸೆಂಬರ್ ಐದರ ಕಾರ್ಯಕ್ರಮದ ಕುರಿತು ಚರ್ಚೆ ಇಲ್ಲಿ ನಡೆಸಬಹುದು.
ಮತ್ತೊಮ್ಮೆ, ಕಾರ್ಯಕ್ರಮದ ವಿವರ:
ಡಿಸೆಂಬರ್ 5, 2010
ಭಾನುವಾರ
ಮಧ್ಯಾಹ್ನ 3.00 ಗಂಟೆಗೆ
ಸ್ಥಳ:
'ಸಾರಂಗ', s1197,
ಭಾರತ್ ನಗರ ಎರಡನೇ ಹಂತ,
ಬೆಂಗಳೂರು.
ನಿಲ್ಲು ನಿಲ್ಲು ಎಲೆ ಮನವೆ..,
ಜಗದ ಪಾಪಗಳ ಕಂಡು..,
ನೊಂದು ಮರುಗಿ ಹೋಗದಿರು..,
ನೂರು ಕರ್ಮಗಳ ಸುತ್ತ ನಮ್ಮ ಬಾಳು..
ಹಲವು ಕನಸುಗಳನು ಬಿತ್ತಿ..,
ಕಣ್ಣೀರು ಸುರಿಸಿದರು..,
ಮೊಳಕೆಯೊಡೆಯಲಿಲ್ಲವೆಂದು..,
ಭ್ರಮಿಸಿ ನೀ ಸಾಗದಿರು..,
ಕಲ್ಲು ಕರಗುವ ಸಮಯ ಬಂದೇ ಬರುವುದು..
ಕಾಣದ ಸತ್ಯಗಳಿಗಾಗಿ ಬುದ್ಧ ತಡಕಾಡಿ..,
ಹಿಂದಿನ ಋಷಿ ಮುನಿಗಳು ಶಾಪ ಕೊಟ್ಟ ಕಥೆಗಳು ನಮಗೆಲ್ಲ ಗೊತ್ತೇ ಇವೆ. ಶಾಪ ಕೊಡುವುದರಲ್ಲೇ ಆಗ್ರ ಪಂಕ್ತಿಯಲ್ಲಿದ್ದವರು ದುರ್ವಾಸ ಮತ್ತು ವಿಶ್ವಾಮಿತ್ರರು. ಇಬ್ಬರಿಗೂ ಭಯಂಕರ ಕೋಪ ಮತ್ತು ಭಲೇ ego ಪಾರ್ಟಿಗಳು.
ಗೌತಮರ ಶಾಪದಿಂದ ಅಹಲ್ಯೆ ಕಲ್ಲಾದಳು, ಶಾಪ ವಿಮೋಚನೆಯ ನಂತರ ಬದುಕಿನಲ್ಲಿ ಜಿಗುಪ್ಸೆ ಬಂದು ಸ್ವಯಂ ಪ್ರೇರಣೆಯಿಂದ ಮತ್ತೆ ಕಲ್ಲಾದಳು ಎಂಬುದನ್ನು ಮೊನ್ನೆಯಷ್ಟೆ ಓದಿದ್ದೇವೆ.
ಹೌದು ಈ ಬುಧವಾರ ರಾಷ್ಟ್ರರಾಜಕಾರಣದಲ್ಲಿ ಮಹತ್ವದ್ದು.ಇಲ್ಲಿ ಎರಡು ವ್ಯಕ್ತಿಗಳು ತಮ್ಮ ವಿಭಿನ್ನ
ಸಾಧನೆಯ ನೆಲೆಯಲ್ಲಿ ಬೆಳಕಿಗೆ ಬಂದಿದ್ದಾರೆ ಅಥವಾ ಮರುಜೀವ ಪಡೆದಿದ್ದಾರೆ.ಧನಾತ್ಮಕವಾಗಿ ನೋಡಿದರೆ
ನಿತೀಶ್ ಕುಮಾರ್ ಗೆ ಸಿಕ್ಕ ಬೆಂಬಲ ಬೆರಗುಗೊಳಿಸುವಂತುಹುದು.ಮೊದಲಬಾರಿ ಬಿಹಾರದಲ್ಲಿ ಜಾತೀಯ ಸಮೀಕರಣ
ಮೀರಿ ಅಭಿವೃದ್ಧಿಗೆ ಬೆಂಬಲ ಸೂಚಿಸಿದ್ದಾರೆ. ನಿಜ ಬಿಹಾರಿಗಳು ಪಟ್ಟ ಅಪಮಾನ. ನಿರಾಸೆ ನೋವು ಬಹುಷಃ ಬೇರೆ ಯಾವ ಪ್ರಜೆಯೂ ಪಟ್ಟಿರಲಾರ. ಬಿಹಾರದಲ್ಲಿ ಗಂಗೆ ಮಾತ್ರ ಚಲನಶೀಲಳು ಉಳಿದೆಲ್ಲ ನಿಂತ ಬಂಡೆ ಎಂಬ ಮಾತಿತ್ತು.
ಹೀಗಾಗಿ ಬಿಹಾರಿಗಳು ಮುಂಬಯಿ,ದೆಹಲಿ ಕಡೆ ರಿಕ್ಷಾ,ಟ್ಯಾಕ್ಸಿ ಇತ್ಯಾದಿ ಸಾಗಿಸುತ್ತ ಜೀವನ ನಿರ್ವಹಣೆ ಮಾಡುತ್ತಿದ್ದರು.
ಎಲ್. ಕೇಮಚಂದ್ರ ಉಡುಪರು ಬರೆದ ಇತ್ತೀಚಿಗಿನ ಕವಿತೆ.
ಪ್ರೇಮದಾಚೆಗಿನ ಅವಸ್ಥೆ :
ಅಳುವಿನಂತ:ಪುರದೊಳಗೆ ನಾನೊಬ್ಬನೇ
ಒಬ್ಬಂಟಿ ; ಸುತ್ತ
ಕತ್ತಲೆಯ ಶ್ವಾಸ , ಗಾಢ
ಅಂಧಕಾರದೊಳಗೊಣ ಎನ್ನ ನಿಶ್ವಾಸ
ದು:ಖ ದುಗುಡ ದುಮ್ಮಾನ ತುಂಬಿದೆರಡು
ಕಂಗಳ ಮಧ್ಯೆ ನಾನೊಬ್ಬನೇ ಒಬ್ಬಂಟಿ.!
ನಾಲಿಗೆಯಾಡಿಸಿದರೆ ಉಪ್ಪುಪ್ಪು
ನಿನ್ನ ನೆನಪಿನ ಹನಿಗಳ ಆವಿ
ತುಟಿಯಮೇಲೆ ಒಂಟಿ .!
ಉಸಿರ ಹೀರಿ ಹಿಡಿದು , ಕೋಶ ಸುಡಲೆಂದು
ಒಳಗೆಳೆದ ಆಮ್ಲಜನಕ , ಹೊರಬಿಡುವಾಗ ಇಂಗಾಲ
ಜೀವ ಸುಟ್ಟು ದಹದಹಿಸಿ ಹೊರಬಿಡುವಂತೆ
ಒಳಗೆಳೆದ ಪ್ರೇಮ ಒಳಗೊಳಗೆ ಬೆಂದು , ಸುಟ್ಟು
ಹೊರಬಿಡುವ ಹಾದಿ ನಿನ್ನ ನೆನಪುಗಳ ಶವ.!
ಕಿಟಕಿಗಳೇ ಇಲ್ಲ ಅಳುವಿನಂತ:ಪುರ
ದೊಳಗೆ ; ಬರಲೊಂದು ಬಾಗಿಲು ಹೋಗಲು
ಧುತ್ತನೆ ನಿಂತ ಗಹಗಹಿಸುವ ನಿನ್ನ ಪ್ರೇಮ ಕಳೇಬರ.!
ನಿದ್ರೆ ಬರದ ರಾತ್ರಿಗಳು
ಕನವರಿಸುತ್ತವೆ , ಹೇಳು ಸಖಿ
ನಿನ್ನ ಕಂಗಳು ಮೊದಲಿಂತೆ ವಜ್ರವಾ?
ಕವಿತೆ ಬರೆಯಲು ತಿಣುಕಾಡಿ,
ಪದಗಳ ಅಕ್ಷರಗಳ ಜೊತೆ ಗುದ್ದಾಡಿ,
ಅದೇನನ್ನೋ ಗೀಚಿ ಒಗೆದೆ.
ಕ್ಷಮಿಸಿ ಬರೆದೆ.
ಕವನಕ್ಕೆ ವಸ್ತುವೇಕೆ ಬೇಕು?
ಬರೆದುದ್ದೆಲ್ಲಾ ಕವನವೇ;
ಪದಗಳ ಕೆಳಗೆ ಪದ ಜೋಡಿಸಿದರೆ
ಮುಗಿಯಿತು ಎನಿಸಿ ಜೋಡಿಸಿದೆ.
ಪ್ರಾಸದ ಬೂಸ ಹಿ೦ಡಿ ಹಿ೦ಡಿ
ತಿ೦ದು ತೇಗಿ ಕೂಡಿಸಿದೆ.
ನನಗ್ಯಾವ ಪ್ರಕಾರ?
ನಾ ನಡೆದದ್ದೇ ಪ್ರಾಕಾರ,
ದೃಷ್ಟಿ ಕೀಲಿಸಿ
ಕೀಲಿ ಮಣೆ ಕುಟುಕಿಸಿ ಬರೆದದ್ದೇ
ಬ೦ತು; ವಸ್ತುವಿಲ್ಲದ, ರಸವಿಲ್ಲದ,
ಆಳ-ಗಾಢವಿಲ್ಲದ, ಶೋಧವಿಲ್ಲದ
ಜೋಡಿ ಪದಗಳ ಗುಚ್ಚ.
ಗಣಕ ಸಾಹಿತ್ಯವೆ೦ಬ ಪ್ರಕಾರ
ಹುಟ್ಟಿದ್ದು ಹೀಗೆ....
ಪದಗಳನ್ನು ಸರ್ಚ್ ಮಾಡಿ
ಕಾಪಿ ಮಾಡಿ, ಪೇಸ್ಟ್ ಮಾಡಿದರಾಯ್ತು.
ಆಮೇಲೆ ಬೇಕಿದ್ದರೆ ಅದನ್ನು ಸಿ೦ಗರಿಸಲು
ಗೂಗಲ್ನಲ್ಲಿ ಅದಕ್ಕೆ ಸಮಾನಾರ್ಥಕ ಹುಡುಕಿ ಅ೦ಟಿಸಿದರೆ
ತೊಡಿಸಲೇ ಮುತ್ತಿನ ತೋರಣ ನಿನ್ನ ಹಣೆಮೇಲೆ
ತಿನಿಸಲೇ ಪ್ರೀತಿಯ ಹೂರಣ ನನ್ನೀ ಕೈಯಿಂದಲೇ
ಮೋಡದ ನಡುವಿನ ಚಂದಿರ ನನ್ನ ಗಾಳಕ್ಕೆ ಬೀಳಬೇಕಿದೆ
ಅದ ತಂದು ನಾ ನಿನ್ನ ಮುನಿಸು ತಣಿಸ ಬೇಕಿದೆ
ನಾ ಕಾಣದ ಬಣ್ಣವ ನೀನೇ ಹುಡುಕ ಬೇಕಿದೆ
ಮಳೆ ಬಿಲ್ಲೊಳು ಆ ಬಣ್ಣವ ಬಳಿಯಲು ನೀ ಬರಬೇಕಿದೆ ||ತೊಡಿಸಲೇ ಮುತ್ತಿನ....||
ಎಂದೂ ನೋಡದ ಕನಸ ಕಾಡುವ ಹಂಬಲ ಕಣ್ಣಿಗೆ
ಅಲ್ಲೂ ನಡೆಯಬೇಕಿದೆ ಬರಿ ನಿನ್ನಯ ನೆನಪ ಮೆರವಣಿಗೆ
ನಾನಾಡದ ಮಾತು ನೀನಿಂದು ಆಲಿಸಬೇಕಿದೆ
ನಿನ್ನ ಮಾತ ನಡುವಿನ ಮೌನದ ವರ್ಣನೆಯೇ ಅಲ್ಲಿರಬೇಕಿದೆ ||ತೊಡಿಸಲೇ ಮುತ್ತಿನ....||