ನಿಲ್ಲು ನಿಲ್ಲು ಎಲೆ ಮನವೆ...!.
ನಿಲ್ಲು ನಿಲ್ಲು ಎಲೆ ಮನವೆ..,
ಜಗದ ಪಾಪಗಳ ಕಂಡು..,
ನೊಂದು ಮರುಗಿ ಹೋಗದಿರು..,
ನೂರು ಕರ್ಮಗಳ ಸುತ್ತ ನಮ್ಮ ಬಾಳು..
ಹಲವು ಕನಸುಗಳನು ಬಿತ್ತಿ..,
ಕಣ್ಣೀರು ಸುರಿಸಿದರು..,
ಮೊಳಕೆಯೊಡೆಯಲಿಲ್ಲವೆಂದು..,
ಭ್ರಮಿಸಿ ನೀ ಸಾಗದಿರು..,
ಕಲ್ಲು ಕರಗುವ ಸಮಯ ಬಂದೇ ಬರುವುದು..
ಕಾಣದ ಸತ್ಯಗಳಿಗಾಗಿ ಬುದ್ಧ ತಡಕಾಡಿ..,
ಗಾಂಧಿ ಸುತ್ತಾಡಿ, ಅಲ್ಲಮರು..,
ತಲೆಯ ಮೇಲೆ ಕೈಹೊತ್ತು..,
ಏನಾದರೂ ಉತ್ತರವಿದೆಯೇ ಎಂದು..,
ಬಾಬರೆಡೆಗೆ ಮುಖಮಾಡಿದರು..
ಜಗದ ಕಲ್ಮಶಗಳನ್ನು ಅವರಿಂದಲೂ..,
ಪೂರ್ಣವಾಗಿ ತೋಳೆಯಲಾಗಲಿಲ್ಲ..,
ಒಂದು ಸತ್ತರೆ ನೂರು..,
ಮರುಹುಟ್ಟು ಪಡೆಯುತ್ತಿದ್ದರೆ..,
ಸತ್ಯಗ್ರಹವನ್ನೇ ನಂಬಿ ಕೂರಲಾಗುವುದೆ..
ಹುಟ್ಟು ಸಾವಿನ ನೆರಳು..,
ಎತ್ತಹೋದರೂ ಬಿಡಲೊಲ್ಲದು..,
ಸಂಜೆಗತ್ತಲಾದರೂ..,
ಮರು ಮುಂಜಾನೆ ಬೆಳಕು ಬೆಳಕಲ್ಲವೆ......
ವಸಂತ್
ಚಿತ್ರಕೃಪೆ. http://lh5.ggpht.com/
ತುಂಬಾ ದಿನಗಳ ನಂತರ ಸಂಪದದಲ್ಲಿ ಕವನವನ್ನು ಪ್ರಕಟಿಸುತ್ತಿದ್ದೇನೆ. ಸಂಪದವು ಹೋಸ ರೂಪವನ್ನು ಪಡೆಯುತ್ತಿದ್ದರಿಂದ ಕವನಗಳನ್ನು ಪ್ರಕಟಿಸಿರಲಾಗಿಲ್ಲ ತಡವಾಗಿ ಪ್ರಕಟಿಸಿದ್ದಕ್ಕೆ ಸಂಪದಿಗರೆಲ್ಲರಲ್ಲೂ ಕ್ಷಮೆಯನ್ನು ಕೋರುತ್ತಿದ್ದೇನೆ ಧನ್ಯವಾದಗಳೊಂದಿಗೆ.