ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ನಾನು ಮತ್ತು ಸೋಲು (soul) ಚತುರೋಕ್ತಿ-೧೨

1
ಸೋಲೊಳಗಿನ ಗೆಲುವು ನಾಲ್ಕು ಮತ್ತು ಒ೦ದು
2
ಸಾಲದ ಸೋಲಿನ ದಾಹ ಸೋಲಲೇಬೇಕು
ಸೋಲದ ಸೋಲಿ(soul)ಗೊ೦ದು ಸೋಪಾನ ನಾನು
3
ಒ೦ದು ಮೋಲ್ ಸೋಲಿಗೆಷ್ಟು ರೂಪಾಯಿ
ಆತ್ಮ ಪರಮಾತ್ಮ ಸಿದ್ಧಿಯೇ ಕಾಯಿ ಕಾಯಿ
ಸ್ವರ್ಗದ ಬಾಗಿಲಲಿ ಒ೦ಟಿ ನಾಯಿ
4
ಸೋಲು೦ಡ ಗೋಲಿಯ ಕಥೆ ಗೋಳು ಗೋಳು
ಬಯಲಿನಲ್ಲಿ ಕ೦ಡದ್ದು ಬಚ್ಚ ಬೋಳು ಬೋಳು
ಸೋಲು೦ಡವನು ಮೇಲು ಬೆವರ ಹನಿ ಸಾಲು ಸಾಲು
ವಿರಿ೦ಚಿಯೂ ನಾನೂ ಸೋತು ಒ೦ದಾದೆವು

ಯೋಚಿಸಲೊ೦ದಿಷ್ಟು... ೧೯

೧. ನಾವು ಇನ್ನೊಬ್ಬರ ಬದುಕನ್ನು ಕ೦ಡು “ಅವರ ಬದುಕು ಸ೦ತಸದಿ೦ದ ಕೂಡಿದೆ“ ಎ೦ದು ಭಾವಿಸುತ್ತೇವೆ. ಹಾಗೆಯೇ ನಮ್ಮ ಬದುಕನ್ನು ಕ೦ಡು ಮತ್ತೊಬ್ಬರು “ ನಮ್ಮ ಬದುಕು ಸ೦ತಸದಿ೦ದಿದೆ“ ಎ೦ದು ಭಾವಿಸುತ್ತಾರೆ!  


೨. “ತಾಯಿ“ ಎ೦ಬುವವಳು ಮಕ್ಕಳ ಹೃದಯದಲ್ಲಿ ಹಾಗೂ ತುಟಿಯಲ್ಲಿ ನಲಿದಾಡುವ ದೇವರು!


೩.  ತಾಯಿ ನೀಡಿದ ಕೈ ತುತ್ತಿನ ಅದ್ಭುತ ಸವಿಯು ಹೃದಯವ೦ತರಿಗೇ ಮಾತ್ರವೇ ಆರಿವಾಗುವ೦ತಹದು.


೪.  ಮಕ್ಕಳನ್ನು ಹೆತ್ತವರು ನಲಿಯುವುದೂ ಉ೦ಟು! ಅಳುವುದೂ ಉ೦ಟು!


೫.  ದೇವರು ಎಲ್ಲ ಕಡೆಯಲ್ಲಿಯೂ ತಾನಿರಲು ಸಾಧ್ಯವಿಲ್ಲವೆ೦ದೇ “ತಾಯಿ“ಯನ್ನು ಸೃಷ್ಟಿಸಿದ!


೬.  ನಮ್ಮ ತಪ್ಪನ್ನು “ಸರಿ“ ಎ೦ದು ನಾವು ಸಾಕಷ್ಟು ಕಾಲ ಹೇಳುತ್ತ ಅಥವಾ ಪ್ರತಿಭಟಿಸುತ್ತಲೇ ಇದ್ದರೆ, ಅದು “ತಪ್ಪೇ“ ಆಗಿರುತ್ತದೆ!


೭.  ಮನಸ್ಸು ಮತ್ತು ಆತ್ಮಗಳು “ದಾಸ್ಯ“ ದ ಸ೦ಕೋಲೆಯಿ೦ದ ಕಳಚಿಕೊ೦ಡಲ್ಲಿ ಮಾತ್ರವೇ ಒ೦ದು ಜನಾ೦ಗದ ಅಥವಾ ವ್ಯಕ್ತಿಯ ರಾಜಕೀಯ ವಿಕಾಸ ಸಾಧ್ಯ!

ಮಾನ್ಯ ಶ್ರೀ ಯಡಿಯೂರಪ್ಪನವರೇ....

  1. ತಮಗೆ ಸಿಕ್ಕ ಈ "ಅವಕಾಶ"ವನ್ನು ಹೀಗೆ ಬಳಸಿಕೊಳ್ಳುವಿರಾ? ,,,,
  2. ೧. ತಾವೇ ಸೃಷ್ಟಿಸಿಕೊಂಡ ಈ ಅವಕಾಶವನ್ನು ಒಂದು ಗೆಲುವು ಎಂದುಕೊಳ್ಳುವಿರ?

  3. ೨. ಯಾತಕ್ಕಾಗಿ ಈ ಹರ ಸಾಹಸಪಟ್ಟೆ ಎಂದು ತನ್ನನ್ನು ತಾನೇ ನೋಡಿಕೊಳ್ಳುವಿರ?
  4. ೩. ತನ್ನ ಜಾತಿಯ ಜನ ತನ್ನನ್ನು ಉಳಿಸಿದ್ದಾರೆಂದು ಹಿಗ್ಗದೇ  ಭಾರತದ ಜನತಂತ್ರದಲ್ಲಿ ಇದು ಅಪಾಯಕಾರಿ ಎಂಬುದನ್ನು ಅರಿಯುವಿರ?ಮತ್ತು ಈ ಕಳಂಕದಿಂದ ಮುಕ್ತಿ ಪಡಯುವಿರಾ?

ನನ್ನ ದೇಹದ ಬೂದಿ


ನಾನು ಕೆಲ ದಿನಗಳಿಂದ ದಿನಕರ ದೇಸಾಯಿ ಅವರ  "ನನ್ನ ದೇಹದ ಬೂದಿ" ennuva ಕವನಕ್ಕಾಗಿ ಹುಡುಕುತ್ತಿದ್ದೇನೆ.

ಸಾಹಿತ್ಯ ಸಿಕ್ಕಿದೆಯಾದರು ಹಾಡು ಸಿಕ್ಕಿಲ್ಲ. ನಿಮ್ಮಲ್ಲಿ ಯಾರಿಗಾದರು ಡೌನ್ಲೋಡ್ ಲಿಂಕ್ ಗೊತ್ತಿದ್ದರೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ. ನಿಮ್ಮ ಬಳಿ ಹಾಡು ಇದ್ದಾರೆ 007san.shetty@gmail.com   ಗೆ ಕಳುಹಿಸಿ ಕೊಡಿ.

ಗೆಳೆಯ

ನೀನು  ಕೃಷ್ಣನಲ್ಲ,ನಾನು ಕುಚೇಲನು ಅಲ್ಲ
ಅದ್ರು ಗೆಳೆತನ ಸೆಳೆತನ
ಹೇನು ಹೆಕ್ಕಿ ತಿನ್ನುವ ಮಂಗಗಳು
ಆಗಾಗ ಭಾವನೆಗಳನು ಹೆಕ್ಕುತ್ತೇವೆ ,ಬಿಕ್ಕುತ್ತೇವೆ
ಜೀವನದ ಮನೆ ಮಂಥನದ ಉತ್ಕನನಗಳಲ್ಲಿ
ಸಿಗೋಣ ಮತ್ತೆ ಮತ್ತೆ ಹಿಂಗಾರು ಮುಂಗಾರು ಮಳೆಯಂತೆ .


ಹೋಗಿ ಬಾ ಗೆಳೆಯ ಜೊತೆಗಿರುವೆ ಸದಾ ಕರ್ಣನೊಂದಿಗಿನ ಏಕಲವ್ಯನಂತೆ .

ದುಂಡಾವರ್ತಿ ರಾಜಕೀಯದಿಂದ ಬೆಲೆಗಳ ಏರಿಕೆ

ಈಗಿನ ರಾಜಕೀಯ ಬೆಳವಣಿಗೆಗಳಿಂದ ಜನಸಾಮಾನ್ಯರ ದಿನಸಿ ಪದಾರ್ಥಗಳು ಹಾಗು ತರಕಾರಿಗಳು ಗಗನಕ್ಕೇರಿವೆ. ಎಲ್ಲ ಮಧ್ಯಮ ವರ್ಗದವರಿಗೂ ಹಾಗು ಕೆಳವರ್ಗದ ಜನರಿಗೂ ಬೆಲೆಯೂ ಎಟುಕದಂತಾಗಿದೆ. ರಾಜಕೀಯ ಮುಖಂಡರಿಗೆ ಅಧಿಕಾರದ ರುಚಿಯು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ, ಬೆಲೆ ಏರಿಕೆಯ ಬಿಸಿಯು ಅವರುಗಳಿಗೆ ನಾಟಿದಂತಿಲ್ಲ.

ಹುಡುಕುವ ಕಣ್ಣಿಗೆ ನೀ ಕಂಡೆ

 

 

ಹುಡುಕುವ ಕಣ್ಣಿಗೆ ನೀ ಕಂಡೆ ಮೂರು ವರುಷದ ಬಳಿಕ
ಮಿಡಿಯುವ ಹೃದಯಕೆ ನೂರು ಹರುಷದ ಪುಳಕ

ದೂರಸರಿದ ಕಾಲಕೆ ನೀ ದೂರ ಹೋದ ಕಾರಣ ನಾ ಕೇಳೆನು
ಹೇಳ ಬಯಸಿದ ಮಾರು ಬಯಕೆಯ ಸರಮಾಲೆ ನಾ ಪೇಳ್ವೆನು

ಮೊದಲ ಪತ್ರಕ್ಕಾಗಿ ನಾ ಹುಡುಕಿದ ಪದಗಳು ಸಾವಿರಾರು
ನೀ ಎದುರು ಬಂದಾಗ ನಿನಾಗಗಿಯೇ ಬರೆದದ್ದು ನನ್ನನ್ನಲ್ಲೇ ಉಳಿದದ್ದು ಹಲವಾರು

ಭಯದ ಬಲೆಯಲ್ಲಿ ನನ್ನಲ್ಲೇ ಅಂದು ಉಳಿದ ಪ್ರೇಮ ನಿವೇದನೆ
ದೂರವಾದ ಬಳಿಕ ಒಬ್ಬನೇ ಅನುಭವಿಸಿದ ಆ ಪ್ರೇಮ ವೇದನೆ

ಕಣ್ಣ ಮುಂದೆ ನಿನ್ನೆ ಬಂದಿರುವ ಚಿತ್ರವೇ, ಜೀವ ತಳೆದು ಬಾ ಬಳಿಗೆ
ಕಣ್ಣ ಒಳಗೆ ನಿನ್ನ ಭಂದಿಸಿಡುವ ಸ್ವಾರ್ಥ ನಿನ್ನ ಈ ಹುಚ್ಚು ಪ್ರೇಮಿಗೆ