ಹುಡುಕುವ ಕಣ್ಣಿಗೆ ನೀ ಕಂಡೆ

ಹುಡುಕುವ ಕಣ್ಣಿಗೆ ನೀ ಕಂಡೆ

 

 

ಹುಡುಕುವ ಕಣ್ಣಿಗೆ ನೀ ಕಂಡೆ ಮೂರು ವರುಷದ ಬಳಿಕ
ಮಿಡಿಯುವ ಹೃದಯಕೆ ನೂರು ಹರುಷದ ಪುಳಕ

ದೂರಸರಿದ ಕಾಲಕೆ ನೀ ದೂರ ಹೋದ ಕಾರಣ ನಾ ಕೇಳೆನು
ಹೇಳ ಬಯಸಿದ ಮಾರು ಬಯಕೆಯ ಸರಮಾಲೆ ನಾ ಪೇಳ್ವೆನು

ಮೊದಲ ಪತ್ರಕ್ಕಾಗಿ ನಾ ಹುಡುಕಿದ ಪದಗಳು ಸಾವಿರಾರು
ನೀ ಎದುರು ಬಂದಾಗ ನಿನಾಗಗಿಯೇ ಬರೆದದ್ದು ನನ್ನನ್ನಲ್ಲೇ ಉಳಿದದ್ದು ಹಲವಾರು

ಭಯದ ಬಲೆಯಲ್ಲಿ ನನ್ನಲ್ಲೇ ಅಂದು ಉಳಿದ ಪ್ರೇಮ ನಿವೇದನೆ
ದೂರವಾದ ಬಳಿಕ ಒಬ್ಬನೇ ಅನುಭವಿಸಿದ ಆ ಪ್ರೇಮ ವೇದನೆ

ಕಣ್ಣ ಮುಂದೆ ನಿನ್ನೆ ಬಂದಿರುವ ಚಿತ್ರವೇ, ಜೀವ ತಳೆದು ಬಾ ಬಳಿಗೆ
ಕಣ್ಣ ಒಳಗೆ ನಿನ್ನ ಭಂದಿಸಿಡುವ ಸ್ವಾರ್ಥ ನಿನ್ನ ಈ ಹುಚ್ಚು ಪ್ರೇಮಿಗೆ

 

 

 ಕಾಮತ್ ಕುಂಬ್ಳೆ

Rating
No votes yet

Comments