ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...!
ಹಿಂದೀ ಚಲನಚಿತ್ರ ಗೀತೆಯೊಂದರ ಭಾವಾನುವಾದ:
ನಾ ನಿನ್ನ ನೋಡುತ್ತಿದ್ದರೆ ನನಗನ್ನಿಸುತಿದೆ ಹೀಗೆ
ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ
ನೀನು ಸಾಗರವಾದರೆ ಬಾಯಾರಿದ ನದಿ ನಾನು
ಸುರಿವ ಸೋನೆಯಾದರೆ ಸುಡುತಿಹ ಹೂವು ನಾನು
ನೀನು ಸಾಗರದಂತೆ..
ನನ್ನ ನಿದ್ದೆ, ನೆಮ್ಮದಿಯ ಮರಳಿಸು ನನಗೆ ನೀನು
ಸುಂದರ ಕನಸುಗಳ ರಾತ್ರಿಯೊಂದ ನೀಡು ನೀನು
ಈ ಮಾತನ್ನು ನಾನು ಹಿಂದೆಯೂ ನುಡಿದಿರುವೆ
ಅದೇ ಮಾತ ಇಂದು ನಾ ಮರು ನುಡಿಯುತಿರುವೆ
ನೀನು ಸಾಗರದಂತೆ..
ನಿನ್ನ ಸ್ಪರ್ಷಿಸಿದ ಧೂಳು ಕ್ಷಣದಲ್ಲಿ ಚಂದನವಾಯ್ತು
ಆ ಗಂಧದಿಂದೀ ತನುವೂ ಕಂಪ ಸೂಸುವಂತಾಯ್ತು
ಬರಸೆಳೆದು ನನ್ನನ್ನೊಮ್ಮೆ ಅಪ್ಪಿಕೋ, ಸಖ, ನೀನು
ನಿನ್ನಿಂದ ಬೇರಿನ್ನೇನನ್ನೂ ಬಯಸುತ್ತಲೇ ಇಲ್ಲ ನಾನು
ಎತ್ತಿಕೋ ನನ್ನನ್ನೊಮ್ಮೆ ಕೊಳಲೆಂದು ತಿಳಿದು ನೀನು
ಒಂದೇ ಒಂದು ಬಾರಿ ಆ ತುಟಿಗಳಲ್ಲಿರಿಸಿಕೋ ನೀನು
ನನ್ನ ಎದೆ ಬಡಿತಗಳೂ ಹೊಮ್ಮಿಸಲಿ ಸ್ವರವೊಂದನ್ನು
ನನ್ನ ಸ್ವರಗಳಿಂದಲೇ ಮುನಿದು ದೂರವಾಗಿಹೆ ನಾನು
*********
ಮೂಲ ಗೀತೆ:
ಚಿತ್ರ : ತುಮ್ಹಾರೇ ಲಿಯೇ
ಸಂಗೀತ : ಜಯದೇವ್
ಮೂಲ ಸಾಹಿತ್ಯ : ನಕ್ಷ್ ಲಾಯಲ್‍ಪುರಿ
ಹಾಡುಗಾರರು : ಲತಾ ಮಂಗೇಶ್ಕರ್
ತುಮ್ಹೇಂ ದೇಖ್ತೀ ಹೂಂ ತೋ ಲಗ್ತಾ ಹೈ ಐಸೇ |
ಕಿ ಜೈಸೇ ಯುಗೋಂ ಸೇ ತುಮ್ಹೇಂ ಜಾನ್ತಿ ಹೂಂ ||
ಅಗರ್ ತುಂ ಹೋ ಸಾಗರ್ ಮೈ ಪ್ಯಾಸೀ ನದೀ ಹೂಂ |
ಅಗರ್ ತುಂ ಹೋ ಸಾವನ್ ಮೈ ಜಲ್ತೀ ಕಲೀ ಹೂಂ |
ಪಿಯಾ ತುಂ ಹೋ ಸಾಗರ್... ||
ಮುಝೇ ಮೇರೀ ನೀನ್ದೇಂ ಮೇರಾ ಚೈನ್ ದೇ ದೋ |
ಮುಝೇ ಮೇರೀ ಸಪ್ನೋಂ ಕೀ ಏಕ ರೈನ್ ದೇ ದೋ ನಾ |
ಯೆಹೀ ಬಾತ್ ಪೆಹಲೇ ಭೀ ತುಂ ಸೇ ಕಹೀ ಥೀ |
ವೋಹೀ ಬಾತ್ ಫಿರ್ ಆಜ್ ದೊಹ್ರಾ ರಹೀ ಹೂಂ |
ಪಿಯಾ ತುಂ ಹೋ ಸಾಗರ್ ||
ತುಮ್ಹೇಂ ಛೂಕೇ ಪಲ್ ಮೇಂ ಬನೀ ಧೂಲ್ ಚನ್ದನ್ |
ತುಮ್ಹಾರೀ ಮೆಹಕ್ ಸೇ ಮೆಹಕನೇ ಲಗೇ ತನ್ |
ಮೇರೇ ಪಾಸ್ ಆವೋ ಗಲೇ ಸೇ ಲಗಾವೋ |
ಪಿಯಾ ಔರ್ ತುಂ ಸೇ ಮೈ ಕ್ಯಾ ಚಾಹತೀ ಹೂಂ ||
ಮುರಲಿಯಾ ಸಮಝ್ ಕರ್, ಮುಝೇ ತುಂ ಉಠಾ ಲೋ |
ಬಸ್ ಏಕ ಬಾರ್ ಹೋಠೋಂ ಸೇ ಅಪ್ನೇ ಲಗಾ ಲೋ ನಾ |
ಕೋಯೀ ಸುರ್ ತೋ ಜಾಗೇ ಮೇರೀ ಧಡ್ಕನೋಂ ಮೇಂ |
ಕಿ ಮೈ ಅಪ್ನೀ ಸರ್ಗಂ ಸೇ ರುಠೀ ಹುಯೀ ಹೂಂ ||
ತುಮ್ಹೇಂ ದೇಖ್ತೀ ಹೂಂ ತೋ ಲಗ್ತಾ ಹೈ ಐಸೇ |
ಕಿ ಜೈಸೇ ಯುಗೋಂ ಸೇ ತುಮ್ಹೇಂ ಜಾನ್ತಿ ಹೂಂ ||
Comments
ಉ: ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...!
In reply to ಉ: ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...! by manjunathams
ಉ: ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...!
ಉ: ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...!
In reply to ಉ: ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...! by Jayanth Ramachar
ಉ: ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...!
ಉ: ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...!
In reply to ಉ: ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...! by h.a.shastry
ಉ: ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...!
In reply to ಉ: ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...! by asuhegde
ಉ: ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...!
ಉ: ನಿನ್ನ ನಾ ಯುಗಗಳಿಂದಲೂ ಅರಿತಿರುವ ಹಾಗೆ...!