ಹಿಡಿದ ಗುರಿಯನು ಸಾಧಿಸುವವರೆಗೆ|
ಮುಂದಿಟ್ಟ ಹೆಜ್ಜೆಯನು ಹಿಂದಕ್ಕೆ ಇಡದೆ||
ಆವೇಶ ಉತ್ಸಾಹ ನರನಾಡಿಯಲಿರಿಸೆ|
ಯಶವರಸಿ ಹರಸುವುದು ಕಾಣು ಮೂಢ||
ಕಷ್ಟನಷ್ಟಗಳೆರಗಿ ಕಾಡಿ ದೂಡಲುಬಹುದು|
ಆಸೆ ಆಮಿಷಗಳು ದಾರಿ ತಪ್ಪಿಸಬಹುದು||
ಮೈಮರೆತು ಜಾರದೆ ನಿರಾಶೆಗೆಡೆಗೊಡದೆ|
ಅಡಿಯ ಮುಂದಿಡಲು ಗೆಲುವೆ ಮೂಢ||
ಮೂಢ ಉವಾಚ -42
Rating
Comments
ಉ: ಮೂಢ ಉವಾಚ -42
In reply to ಉ: ಮೂಢ ಉವಾಚ -42 by gopaljsr
ಉ: ಮೂಢ ಉವಾಚ -42