ಯಡಿಯೂರಪ್ಪನವರು ಇರಬೇಕು!
ಮುಖ್ಯಮಂತ್ರಿ ಯಡಿಯೂರಪ್ಪನವರು ಇರಬೇಕು. ಅವರನ್ನನುಸರಿಸಿಕೊಂಡು ಇರುವುದದರೆ ಬಿಜೆಪಿಯೂ ಇರಲಿ, ಪರವಾಗಿಲ್ಲ!
ಬಿಜೆಪಿ ಎಂಬ ಕಿರುಕುಳದ ನಡುವೆಯೂ ನಿರ್ಣಾಯಕವಾಗಿ ಗೆದ್ದ ಹೆಗ್ಗಳಿಕೆ ನರೇಂದ್ರ ಮೋದಿಯವರದಾಗಿತ್ತು. ಹಾಗೇ ಯಡಿಯೂರಪ್ಪನವರೂ ಈಗ ಸ್ವಂತಿಕೆಯಿಂದ ಸೆಟೆದುನಿಲ್ಲುತ್ತಿರುವುದು ಸಂತೋಷ.
ಕರ್ನಾಟಕದ ಮುಖ್ಯಮಂತ್ರಿಯನ್ನು ಮಣಿಸುವುದಕ್ಕೇ ಕಾದು ಕುಳಿತಿದ್ದಾರೆಂಬಂತೆ ಬಿಂಬಿತರಗಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷರು, ಯಡಿಯೂರಪ್ಪನವರು ದೆಹಲಿಗೆ ಕಾಲಿರಿಸುತ್ತಿದ್ದಂತೆಯೇ, ತಮ್ಮ ಮಗಳ ಮದುವೆ ಸಿದ್ಧತೆ ನೆನಪಿಸಿಕೊಂಡು ನಾಗಪುರಕ್ಕೆ ಕಾಲ್ಕಿತ್ತರು! ಇದಾವ ರಣತಣತ್ರವೋ, ರಣಛೋಡ್ ತಂತ್ರವೊ ಅರ್ಥವಾಗಲಿಲ್ಲ! ಇದೆಲ್ಲಾ ವೀರಶೈವ ಗುರುಸಮುದಾಯದ ಸಮೂಹಿಕ ಮಂತ್ರ-ತಂತ್ರದ ಮಹಾತ್ಮೆ ಎಂದು ಮುಖ್ಯಮಂತ್ರಿಗಳು ಭಾವಿಸಿದರೆ ಮಾತ್ರಾ, ಅದು ರಾಜ್ಯದ ಯೊಚಿಸಬಲ್ಲ ಜನತೆಯ ಕಿವಿಗೆ ಹೂ ಸಗಿಸಿದಂತಾಗುತ್ತದೆ ಎನ್ನುವುದನ್ನವರು ಮರೆಯಬಾರದು!
- Read more about ಯಡಿಯೂರಪ್ಪನವರು ಇರಬೇಕು!
- Log in or register to post comments
- 12 comments