ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮಾತುಪಲ್ಲಟ - ೧೪, ನಾಡಿಗ ನಮನ

♫♫♫ಮಾತುಪಲ್ಲಟ - ೧೪♫♫♫

ಇದು ಮಾತುಪಲ್ಲಟ ಸರಣಿಯ ಹದಿನಾಲ್ಕನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ಹಿನ್ದಿ ಭಾಷೆಯ ಇನಿದಾದೊನ್ದು ಹಾಡಿನ ಮಱುಗೆಯ್ಮೆ ಮಾಡಲಾಗಿದೆ.

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣

ಚಿತ್ರ : ತುಮ್ಹಾರೇ ಲಿಯೇ♪
ಸಂಗೀತ : ಜಯದೇವ್♪
ಮೂಲ ಸಾಹಿತ್ಯ :  ನಾಕ್ಷ್ ಲಾಯಲ್‍ಪುರಿ♪
ಹಾಡುಗಾರರು : ಲತಾ ಮಂಗೇಶ್ಕರ್♪ (ಲಿವಿಂಗ್ ಲೆಜೆಣ್ಡ್)
ವಿಡಿಯೋ : http://www.youtube.com/watch?v=9imljtd9QAQ

♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣♣
♪ಮೂಲ ಸಾಹಿತ್ಯ♪ :

ತುಮ್ಹೇಂ ದೇಖ್ತೀ ಹೂಂ ತೋ ಲಗ್ತಾ ಹೈ ಐಸೇ |

ಸೇಡು...

ಆರುತ್ತಿರುವ ಬೆಳಕಿನ ಪ್ರೇರೇಪಣೆಯಿ೦ದ ಹೊರಟಿದೆ ಕತ್ತಲು ತನ್ನ ಹಸಿವ ಇ೦ಗಿಸಲು...


ಪ್ರತಿ ವಸ್ತುವು ತನ್ನ ಇರುವಿನ ರೊಪವ ಬಿಸಾಡುತಿದೆ ಕತ್ತಲಿನಲ್ಲಿ ಬರಿ ಆಕೃತಿ ಆಗುತ್ತಿರಲು...


ಆರಿದ೦ತೆ ದೀಪ ಆಗಸದಲ್ಲಿ, ಹೊಗೆಯಾವರಿಸಿದೆ ನಾಲ್ದಿಕ್ಕಿನಲ್ಲಿ...


ದೊರೆಯಿಲ್ಲದ ಈ ಲೋಕದಲ್ಲಿ, ಭಯ ಕಾದು ಕುಳಿತಿದೆ ಕೈಗೆಟುಕುವ ದೂರದಲ್ಲಿ...


ಸದಿಲ್ಲದ ಹೆಜ್ಜೆಗಳು ತ೦ದಿದೆ, ನಿ೦ತ ನೀರಿನ ಹೃದಯದಲ್ಲಿ ತಲ್ಲಣ...


ತಣ್ಣಗಿನ ಗಾಳಿಯದು ತ೦ಪಾಗದೆ ಬರಿ ತ೦ದಿದೆ ಬೆದರಿಕೆಗಳ ಹೂರಣ...


ಕಾದ ಕೆ೦ಗಣ್ಣುಗಳ ಹಿ೦ದಿನ ಹುಚ್ಹು ಮನಸ್ಸದು ನಿರ್ಲಿಪ್ತವಾಗಿ ಕಾಯುತ್ತಿದೆ...


ಕಾರಣಕ್ಕೆ ಬೆಲೆಯಿಲ್ಲದೆ, ಕೋಪಕ್ಕೆ ಎಲ್ಲೆಯಿಲ್ಲದೆ, ಕಾಡ್ಗಿಚ್ಹಿನ೦ತೆ ಸೇಡು ದಗದಗಿಸಿದೆ...


ಕೋಟಿ ಶಾಪದ ಫಲವೆನೋ ಬ೦ದಿದೆ ಆ ಪಾಪಿ ಜೀವ ಬೇಟೆಗಾರನ ನೋಟಕ್ಕೆ...


ಹಸಿದ ಕತ್ತಲು ಅದರ ಪಿಶಾಚ ನೋಟದಿ ನೋಡಿದೆ...


ಬಲ ಕು೦ದಿದ ಕೈಗಳು ಸಿಕ್ಕ ಅವಕಾಶವ ಹಿಡಿಯಲು ಹೊರಟಿದೆ...

ಗೌಡಪ್ಪನ ಮೀಸೆ ಪುರಾಣ

ಬೆಳಗ್ಗಿನ ನಮ್ಮ ಬಯಲು ಕಾರ್ಯ ಮುಗಿಸಿಕೊಂಡು ವಾಪಸ್ಸು ಮನೆಗೆ ಹೋಗುತ್ತಿದ್ದೆವು. ಆಗ ಎದುರುಗಡೆ ಒಬ್ಬ ಮೀಸೆ ಇಲ್ಲದ ವ್ಯಕ್ತಿ ಚೊಂಬು ಹಿಡಿದುಕೊಂಡು ಕೆರೆತಾವ ಹೋದ. ಯಾರಲಾ ಇವನು ಅಂದ ಸುಬ್ಬ. ಯಾರೋ ಹೊಸದಾಗಿ ಅಧಿಕಾರಿ ಬಂದಿರಬೇಕು ಕಲಾ ಅಂದ ಸೀನ, ಸರಿ ನಿಂಗನ ಚಾ ಅಂಗಡಿ ಹೋಗಿ ಕುಂತ್ವಿ. ಅಟ್ಟೊತ್ತಿಗೆ ಆ ಮೀಸೆ ಇಲ್ಲದ ವ್ಯಕ್ತಿನೂ ಅಲ್ಲೇ ಬಂದು " ಲೇ ನಿಂಗ ಒಂದು ಅರ್ಧ ಚಾ ಕೊಡಲಾ ಅಂದ." ನಿಂಗ ಅಂಗೇ ರೈಸಾಗಿ. ಯಾಕಲಾ ಏಕವಸನದಾಗೆ ಮಾತಾಡಿಸ್ತೀಯಾ, ಹೇಂಗೈತೆ ಮೈಗೆ ಅನ್ನುವುದರೊಳಗೆ ಸುಬ್ಬ, ಸೀನ, ತಂತಿ ಪಕಡು ದಬು,ದುಬು ಅಂತಾ ನಾಯಿ ಹೊಡೆದಂಗೆ ಹೊಡೆದಿದ್ರು. ಲೇ ನಾನು ಕಲಾ ಅಂದ ಆ ವ್ಯಕ್ತಿ. ನಾನು ಕಲಾ ಗೌಡಪ್ಪ. ಮೀಸೆ ಇಲ್ಲ ಕಲಾ ಅಂತ ಅತ್ತ. ಏ ಥೂ ನೀವಾ ಹೇಳಕ್ಕೆ ಆಯಕ್ಕಿಲ್ವಾ ಅಂದ ನಿಂಗ.

ಮೂಢ ಉವಾಚ -41

                        ಮೂಢ ಉವಾಚ -41
ಮನದಲ್ಲಿ ಒಂದು ಹೇಳುವುದು ಮತ್ತೊಂದು|
ಹೇಳಿದ್ದು ಒಂದು ಮಾಡುವುದು ಮತ್ತೊಂದು||
ಸುಳ್ಳುಗಳು ಒಂದನಿನ್ನೊಂದು ನುಂಗಿರಲು|

ಭಾರತದ "ಕಪ್ಪು ಹಣ" ಹೊರದೇಶದಿಂದ ಮರಳಿ ಭಾರತಕ್ಕೆ ಬಂದರೆ ನೀವೇನು ಮಾಡುವಿರಿ..?

"೧೯೪೮ ರಿಂದ ೨೦೦೮ ರ ವರೆಗೆ ಭಾರತದ ೨೦ ಲಕ್ಷ ಕೋಟಿ ರೂಪಾಯಿ ಕಪ್ಪು ಹಣದ ರೂಪದಲ್ಲಿ ಹೊರದೇಶಗಳಿಗೆ ಹರಿದುಹೋಗಿದೆ.." ಎಂಬುದು ಇಂದಿನ ಸುದ್ದಿ.


 


ಸರಿ ಅದು ಅಷ್ಟು ಹಣ ನಮ್ಮ ದೇಶಕ್ಕೆ ವಾಪಸ್ ಬಂದು (ವೈಟ್ ಮನಿಯಾಗಿ..) ಅದರಲ್ಲಿ ನಿಮಗೆ ೧ ಕೋಟಿ ಸಿಕ್ಕರೆ ನೀವು ತುರ್ತಾಗಿ ಮಾಡುವ ಕಾರ್ಯವೇನು? ಹೇಳುವಿರಾ..?

ಕ್ರಿಯಾತ್ಮಕ ಭ್ರಮೆಯ ಅತಿವೃಷ್ಟಿಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫

ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫

(೧೦೬)

   "ಭ್ರಮೆಯ ಗರ್ಭದೊಳಗಿಂದ ಉದಿಸುವ ಅತೀತ ಭ್ರಮೆಯನ್ನು ನೈಜತೆ ಎನ್ನುತ್ತೇವೆ. ನಿನ್ನ ಮನಸ್ಸಿನಲ್ಲಿ ಈ ದೃಶ್ಯವು ಭ್ರಮೆ ಎನ್ನಿಸುವುದೇ ಒಂದು ಭ್ರಮೆ ಎಂಬುದನ್ನು ಅರಿತುಕೊ ಗೆಳೆಯ" ಎಂದ ಪ್ರಕ್ಷುವು ನನ್ನಲ್ಲಿ ಸಾಕಷ್ಟು ಪ್ರಕ್ಷುಬ್ಧತೆಯನ್ನು ಉಂಟುಮಾಡತೊಡಗಿದ್ದ.

"ನೀನೇನಾದರೂ ಕೃಷ್ಣನಂತೆ ನನಗೆ ಕಲೆಯ-ವಿಶ್ವರೂಪದರ್ಶನ ಮಾಡಿಸುತ್ತಿದ್ದೀಯ ಹೇಗೆ?" ಎಂದು ಕೇಳಿದೆ.

ನೀವ್ ಏನ್ ಹೇಳ್ತೀರ ? ಯಡ್ಡಿ ಗಲಾಟೆ

 ಯಡ್ಡಿ ಗಲಾಟೆ


ನಿವೃತ್ತರಾದ ವೆಂಕಟಾಚಲಯ್ಯನವರು ಮದ್ಯಾನ ಟಿ.ವಿ. ನೋಡುತ್ತ ಕುಳಿತ್ತಿದ್ದರು. ಸಾಯಂಕಾಲವಾದರೆ ವಾಕಿಂಗ್ ಹೋಗಬಹುದು ಈಗೇನು ಮಾಡೋದು. ಹೊರಗೆ ಬೀದಿ ಹುಡುಗರ ಗಲಾಟೆ ಟಿ.ವಿ.ಯಲ್ಲಿ ಬರುತ್ತಿರುವ ಸುದ್ದಿ ಕೇಳಿಸುತ್ತಲೆ ಇಲ್ಲ , ಮತ್ತು ವಾಲ್ಯೂಮ್ ಜಾಸ್ತಿ ಮಾಡಿದರೆ ಸೊಸೆ ಕೂಗಿಕೊಳ್ಳುತ್ತಾಳೆ. ಅಷ್ಟರಲ್ಲಿ ತೆರೆದ ಬಾಗಿಲಿನಿಂದ ಮೊಮ್ಮಗ ಯಡ್ಡಿ (ಯದುಗಿರಿ ) ಓಡಿಬಂದು ಕುಳಿತ ಕೈಯಲ್ಲಿ ಬ್ಯಾಟು, ಹಿಂದೆಯೆ ಅವನ ತಂಗಿ ಪ್ರೇಮ. ಆಟದ ಮದ್ಯೆ ಬಂದಿದ್ದಾನೆ ಅಂದರೆ ಏನಾದರು ತರಲೆಯೆ.


’ಏಕೊ ಆಟ ಬಿಟ್ಟು ಬಂದ’ ಅಂತ ಕೇಳಿದರು , ಅವನು ಸೀರಿಯಸ್ ಆಗಿ ತಂಗಿ ಕಡೆ ನೋಡಿದ ಏನು ಹೇಳಬೇಡ ಅನ್ನುವಂತೆ, ಅವಳೊ ಡೊಂಟ್ ಕೇರ್ ’ಜಯಲಲಿತ’ ಜಾತಿ ಬೇಡ ಅಂದರೆ ಖಂಡೀತ ಮಾಡ್ತಾಳೆ


’ತಾತ ಇವನು ಎದುರುಮನೆ ಕಿಟಕಿಯ ಗಾಜು ಹೊಡೆದ’ ಒಳಗಿದ್ದ ಅವರಮ್ಮನಿಗೂ ಕೇಳುವಂತೆ ಹೇಳಿದಳು

ಪೆಪ್ಪರಮೆ೦ಟು...

ಪೆಪ್ಪರಮೆ೦ಟು...


 


ಅಲ್ಲಲ್ಲಿ ಹರಿದು ಹೋದ ಅ೦ಗಿ,


ಸೊ೦ಟಕ್ಕೆ ಹೆಸರಿಗೊ೦ದು ಚೆಡ್ದಿ,


ಗುಳಿ ಬಿದ್ದ ಕೆನ್ನೆಗಳು,


ಬಿಸಿಲಿಗೆ ಬಾಡಿ ಹೋಗಿರುವ ಕಣ್ಣುಗಳು


ಯಾರಾದರೂ ರೂಪಾಯಿ  ಕೊಡುವರೇನೋ


ಎ೦ದು ದಿನವೀಡೀ ಕಾಯುವಿಕೆ,


ತ೦ಗಿಗೊ೦ದು ಪೆಪ್ಪರಮೆ೦ಟಿಗಾಗಿ


ಮಲಗಿರುವ ಅಮ್ಮನಿಗೆ ಔಷಧಿಗಾಗಿ,


ಕೆಲವೊಮ್ಮೆ ಬೇಡುವುದೂ ಉ೦ಟು


ದುಡಿದ ದುಡ್ಡೆಲ್ಲವೂ ತ೦ದೆಯ


ಕುಡಿತಕ್ಕೋ ಇಸ್ಪೀಟಿಗೋ,


ತಿ೦ಗಳಿಡೀ ಬೆವರು ಸುರಿಸಿ ಪಡೆದ  ದುಡ್ಡು


ಒ೦ದೇ ದಿನದಲ್ಲಿ  ಉಡಾಯಿಸುವ ಮಜಕ್ಕೋ!


ಅ೦ತೂ ಪುಟ್ಟ ಕ೦ಗಳಿಗೀಗ ಯಾವುದರ ಅರಿವೂ ಆಗದು,


ಪ್ರತಿದಿನ ಸ೦ಜೆಯೂ ಅಮ್ಮನಿಗೆ ಔಷಧಿ


ತ೦ಗಿಗೊ೦ದು ಪೆಪ್ಪರಮೆ೦ಟಿನ ಹೊರತಾಗಿ!