ರಾಜನರ್ತಕಿ ಪೂಜಾ ಗಾಂಧಿ...
ಪೂಜಾಗೆ ಇದು ಮೊದಲ ತುಳು ಚಿತ್ರವೇ ಹೌದು..! ಕನ್ನಡದ ಮತ್ತೊಂದು ಸಿನೆಮಾನೂ ಹೌದು. ಕಾರಣ, "ಬೀರೆ ದೇವು ಪೂಂಜೆ" ಅನ್ನೊ ಈ ಚಾರಿತ್ರಿಕ ಸಿನೆಮಾ ತುಳು ಮತ್ತು ಕನ್ನಡದಲ್ಲಿ ಸಿದ್ದವಾಗ್ತಿದೆ. ಏಕಕಾಲಕ್ಕೇನೆ ತೆರೆಗೂ ಬರಲಿದೆ. ಅದಕ್ಕೂ ಮುಂಚೇನೆ ಪೂಜಾ ತಮ್ಮ ಈ ಹೊಸ ಸಾಹಸದ ಬಗ್ಗೆ ಮಾತನಾಡಿದ್ದಾರೆ. ಅದೆಷ್ಟು ಕಷ್ಟವಾಗಿದೆ ಎಂಬುದನ್ನೂ ಹೇಳಿಕೊಂಡಿದ್ದಾರೆ.
ಆದ್ರೂ, ತುಳು ನಾಡಿನ ಮಂದಿಗೆ ದಿಲ್ ಖುಷ್ ಮಾಡಲು ಬೇಕಾದ ಆ ತಯಾರಿನೂ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿಯೇ ಡೈಲಾಗ್ ಕಲಿತು ಟಿಪಿಕಲ್ ಹಳೆ ತುಳುವಿನ ಸಂಭಾಷೆ ಹೇಳಿದ್ದಾರೆ. ಎಟ್ ದಿ ಸೇಮ್ ಟೈಮ್ ಕನ್ನಡ ಡೈಲಾಗೂ ಹೊಡೆಯಬೇಕಿದ್ದ ಸಂದರ್ಭವೂ ಪೂಜಾಗೆ ಬಂದೊದಗಿತ್ತು. ಅದಕ್ಕೇನೆ ಕನ್ನಡ ಸುಲಭ..ತುಳು ಕಷ್ಟ ಅಂತ ಹೇಳುವ ಅನುಭವವೂ ಈಗ ಆಗಿದೆ.
ಪೂಜಾ ಅಭಿನಯದ ಚಿತ್ರಕ್ಕೆ ಪೂಜಾನೇ ಮೇನ್ ಅಲ್ಲ ಬಿಡಿ. ೪೦೦ ವರ್ಷದ ಹಿಂದೆ ಇದ್ದ "ಬೀರೆ ದೇವು ಪೂಂಜೆ" ಅನ್ನೋ ಯೋಧನ ಸುತ್ತವೇ ಚಿತ್ರ ಹೆಣೆಯಲ್ಪಟ್ಟಿದೆ. ಆಗಿದ್ದ ರಾಜನ ಅಚ್ಚುಮೆಚ್ಚಿನ ಈ ಬೀರೆ ತನ್ನ ದರ್ಪದಿಂದಲೇ ಹಾಳಾಗುತ್ತಾನೆ.
ರಾಜನ ಆದೇಶದಂತೇನೆ ನರ್ತಕಿಯ ಕುತಂತ್ರಕ್ಕೆ ಬಲಿಯಾಗಿ ಜೀವ ಕಳೆದುಕೊಳ್ಳುತ್ತಾನೆ.
ಈ ರೀತಿಯ ಕಥೆ ಇದ್ದರೂ ಸಹ ತುಳುನಾಡಲ್ಲಿ "ವೀರ ದೇವು ಪೂಂಜೆ" ಈಗಲೂ ಫೇಮಸ್. ತನ್ನ ೧೨ ನೇ ವಯಸ್ಸಿನಲ್ಲಿಯೇ "ಹುಲಿಕೊಂದು" ಹೆಗಲ ಮೇಲೆ ಹೊತ್ತು ತಂದ ಶೂರತ್ವ ದೇವ ಪೂಂಜನದ್ದು. ದಂತ ಕಥೆಗಳನ್ನೂ ಸೃಷ್ಟಿಸಿದ್ದ ಪರಾಕ್ರಮಿ ಈ ದೇವ ಪೂಂಜೆ. ಅಂತಹ ವ್ಯಕ್ತಿಯ ಕಥೆ ಯಕ್ಷಗಾನ ಪ್ರಸಂಗದಲ್ಲಿ ಅದ್ಯಾವಾಗಲೋ ಬಂದು ಹೋಗಿದೆ. ರಂಗದ ಮೇಲೆ ಅದೆಷ್ಟೋ ಸಲ ಆಡಲಾಗಿದೆಯೋ ಏನೋ. ನಿರ್ದೇಶಕ-ನಿರ್ಮಾಪಕ ಆರ್. ಧನರಾಜ್ ಈಗ "ದೇವ ಪೂಂಜೆ" ಕಥೆಗೆ ಚಿತ್ರ ರೂಪ ಕೊಡ್ತಾಯಿದ್ದಾರೆ. ೮೦ ಲಕ್ಷದಷ್ಟು ಬಜೆಟ್ ಪ್ಲಾನೂ ಮಾಡಿದ್ದಾರೆ.
ಆದ್ರೆ, ಈ ಚಿತ್ರ ನಿರ್ಮಾಣದ ಹಿಂದೆ ಎರಡು ಉದ್ದೇಶಗಳಿವೆ. ಒಂದು ರಾಷ್ಟ್ರೀಯ ಅವಾರ್ಡ್ ಪಡೆಯೋ ಆಸೆ. ಮತ್ತೊಂದು ಕರಾವಳಿ ಕಡೆಗಿನ ಕಲೆ-ಸಂಸ್ಕೃತಿ ಎತ್ತಿ ಹಿಡಿಯೋ ಪ್ರಯತ್ನ. ಅದಕ್ಕೇನೆ ಇದೇ ೨೩ ರಿಂದ ಎರಡನೇ ಹಂತದ ಶೂಟಿಂಗ್ ಶುರುವಾಗಲಿದೆ. ಡಿಸಂಬರ್ ೩೦ ರ ಹೊತ್ತಿಗೆ ಚಿತ್ರವನ್ನ ಅವಾರ್ಡ್ ಗೆ ಕಳಿಸುವ ಯೋಜನೆ ಇದೆ. ಬರುವ ಜನವರಿ ಗೆ ಸಿನೆಮಾ ತೆರೆಗೂ ಬರಲಿದೆ. ಅಲ್ಲಿವರೆಗೂ ಪೂಜಾ ಹೊಸ ಅವತಾರಕ್ಕಾಗಿ ಜಸ್ಟ್ ವೇಟ್.
-ರೇವನ್ ಪಿ.ಜೇವೂರ್