ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ
ಹುಡುಕದಿದ್ದರೆ ಮಾತ್ರ ತೊಡರಿಕೊಳ್ಳುವುದು ವಿಶ್ವನಿಯಮ ಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೭
ಒಂದೆರಡು ಸ್ವಾರಸ್ಯಕರ ಸಂಗತಿಗಳು
'ಪಕ್ಷ(ಪಾತ)ಅತೀತ ಮಾಧ್ಯಮ ಎಲ್ಲಿದೆ?’ ಎಂಬ ನನ್ನ ಲೇಖನ ಓದಿ ನನ್ನ ಹಿರಿಯ ಬಂಧು ಹಾಗೂ ವಿದ್ವಾಂಸ ಕೆ.ಚಂದ್ರಶೇಖರ ಕಲ್ಕೂರ ಅವರು ಒಂದೆರಡು ಸ್ವಾರಸ್ಯಕರ ಸಂಗತಿಗಳನ್ನು ಮಿಂಚಂಚೆಯಲ್ಲಿ ನನಗೆ ತಿಳಿಸಿದ್ದಾರೆ. ಅದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ.
- Read more about ಒಂದೆರಡು ಸ್ವಾರಸ್ಯಕರ ಸಂಗತಿಗಳು
- Log in or register to post comments
ಡ್ರ್ಯಾಗನ್-ಗೂ ಹಬ್ಬಲಿ ಕನ್ನಡದ ಕಂಪು
ಗೆಳೆಯರೆ,
ಕೆಲವು ದಿನಗಳ ಹಿಂದೆ ಬ್ರಿಟಿಷ್ ಏರ್ವೇಸ್ ನಲ್ಲಿ ಕನ್ನಡದಲ್ಲಿ ಸೇವೆ ನೀಡಿದ್ದರ ಬಗ್ಗೆ ನನ್ನ ಬ್ಲಾಗ್ (http://sampada.net/article/26672) ನಲ್ಲಿ ಬರೆದಿದ್ದೆ.
ಕರ್ನಾಟಕದಿಂದ ಹೊರಡುವ ಹಾಗು ಕರ್ನಾಟಕಕ್ಕೆ ಬರುವ ಎಲ್ಲ ವಿಮಾನಗಳಲ್ಲಿ ಕನ್ನಡದಲ್ಲಿ ಪ್ರಕಟಣೆಯನ್ನು ಹೊರಡಿಸುವ ಪದ್ದತಿಯನ್ನು ಬ್ರಿಟಿಷ್ ಏರ್ವೇಸ್ ಈಗ ತಪ್ಪಿಲ್ಲದೇ ಪಾಲಿಸುತ್ತಿದೆ.
ಕಳೆದ ಬಾರಿ ನಾನು ಡ್ರ್ಯಾಗನ್ ಏರ್ವೇಸ್ ನಲ್ಲಿ ಬೆಂಗಳೂರಿನಿಂದ ಹಾಂಗ್ ಕಾಂಗ್ ಗೆ ಪ್ರಯಾಣ ಮಾಡಿದೆ. ಡ್ರ್ಯಾಗನ್ ಏರ್ವೇಸ್‍ನಲ್ಲಿ ಕನ್ನಡ ಪ್ರಕಟಣೆಗಳೂ ಇಲ್ಲ, ಮನರಂಜನೆಗಾಗಿ ಕನ್ನಡ ಚಿತ್ರಗಳೂ ಇಲ್ಲ.
ಕನ್ನಡದಲ್ಲಿ ಪ್ರಕಟಣೆಗಳಿದ್ದರೆ, ಕನ್ನಡ ಮಾತ್ರ ಬಲ್ಲ ಜನರಿಗೆ ವಿಮಾನದಲ್ಲಿ ಓಡಾಡುವುದು ಸಲೀಸಾಗುತ್ತದೆ. ಪ್ರಯಾಣದ ಸಮಯದಲ್ಲಿ ಕನ್ನಡ ಚಿತ್ರಗಳನ್ನು ನೋಡುವ ವ್ಯವಸ್ಥೆ ಇದ್ದರೆ, ಕನ್ನಡಿಗರು ತಮ್ಮ ಭಾಷೆಯ, ತಮಗಿಷ್ಟವಾದ ಚಿತ್ರಗಳನ್ನು ನೋಡುತ್ತಾ ಕಾಲ ಕಳೆಯಬಹುದು.
- Read more about ಡ್ರ್ಯಾಗನ್-ಗೂ ಹಬ್ಬಲಿ ಕನ್ನಡದ ಕಂಪು
- Log in or register to post comments
ಇಂಟರ್ನೆಟ್ ಕುರಿತ ಇಪ್ಪತ್ತು ವಿಷಯಗಳು
ಗೂಗಲ್ ಕ್ರೋಮ್ ತಂಡದವರು ಇಂಟರ್ನೆಟ್ ಕುರಿತ ತೀರ ಸಾಮಾನ್ಯ ವಿಷಯಗಳಲ್ಲಿ ಇಪ್ಪತ್ತು ವಿಷಯಗಳನ್ನು ಸುಲಭವಾಗಿ ತಿಳಿಯುವಂತೆ ಒಂದು ಪುಸ್ತಕವನ್ನು ರೆಡಿ ಮಾಡಿದ್ದಾರೆ. ಈ ಪುಸ್ತಕವನ್ನು ನೀವು ನೇರ ಆನ್ಲೈನ್ ಓದಬಹುದು. ಇಂಟರ್ನೆಟ್ ಬೆಳವಣಿಗೆಗೆ ಕಾರಣವಾದ ಒಂದು ಟೆಕ್ನಿಕಲ್ ಪೇಪರ್ ಹೊರಬಂದು ಇಲ್ಲಿಗೆ ಇಪ್ಪತ್ತು ವರ್ಷಗಳಾದ ನೆನಪಿಗೆ ಇದನ್ನು ಗೂಗಲ್ ಹೊರತಂದಿದೆಯಂತೆ.
ಟಿಸಿಪಿ/ಐಪಿ ಅಂದರೇನು? ಕ್ಲೌಡ್ ಕಂಪ್ಯೂಟಿಂಗ್ ಅಂದರೇನು? ಬ್ರೌಸರುಗಳಲ್ಲಿ ಬ್ಯಾಂಕ್ ಹಾಗು ಇ-ಕಾಮರ್ಸ್ ವೆಬ್ಸೈಟುಗಳಿಗೆ ಭೇಟಿ ನೀಡುವಾಗ ಏನೆಲ್ಲ ಗಮನದಲ್ಲಿ ಇಟ್ಟುಕೊಂಡಿರಬೇಕು ಎನ್ನುವುದಲ್ಲದೆ ಬ್ರೌಸರ್ ಹಾಗು ಮುಕ್ತ ತಂತ್ರಾಂಶಗಳ ಕುರಿತ ಒಂದು ಪುಟ್ಟ ಅಧ್ಯಾಯ ಕೂಡ ಇದೆ.
- Read more about ಇಂಟರ್ನೆಟ್ ಕುರಿತ ಇಪ್ಪತ್ತು ವಿಷಯಗಳು
- Log in or register to post comments
- 3 comments
ಸಂಪದದ ಕೊಂಡಿಗಳಿಗೊಂದು ಕೊಂಡಿ..
ಸ್ನೇಹಿತರೇ, ಸಂಪದಿಗರೇ,
ಇದು, ಸಂಪದದಲ್ಲಿನ ಅನೇಕ, ಕೊಂಡಿಗಳಿಗೆ ಒಂದು ಸಣ್ಣ ಕೊಂಡಿ.
ಅಂದರೆ, ಎಲ್ಲವನ್ನೂ ಒಂದೆಡೆ ಸೇರಿಸಿಡೋ ಪ್ರಯತ್ನ..
ಈ ಕೆಳಗಿನದ್ದು ಸಣ್ಣ ಪ್ರಯತ್ನ..
ಸಮಯ ದೊರೆತಾಗಲೆಲ್ಲಾ.. ಇದನ್ನ ಮುಂದುವರೆಸುವುದು ಉದ್ದೇಶ..
- Read more about ಸಂಪದದ ಕೊಂಡಿಗಳಿಗೊಂದು ಕೊಂಡಿ..
- 2 comments
- Log in or register to post comments
ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!
ಇದು ’ಕಭೀ ಕಭೀ" ಹಿಂದೀ ಚಲನಚಿತ್ರದ, ಬಹು ಪ್ರಚಲಿತ ಗೀತೆಯ ಭಾವಾನುವಾದದ ಪ್ರಯತ್ನ.
ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ (೨)
ಅದೇನೆಂದರೆ ನಿನ್ನ ಸೃಷ್ಟಿ ಮಾಡಿರುವುದು ಕೇವಲ ನನಗಾಗಿ (೨)
ನೀನು ಅದಾವ ತಾರೆಗಳ ಲೋಕದಲ್ಲಿ ಇದ್ದೆಯೇನೋ ಅಡಗಿ (೨)
ನಿನ್ನನ್ನು ಈ ಭೂಮಿಗೆ ಕರೆ ತಂದಿರುವುದು ಸಖೀ ನನಗಾಗಿ (೨)
ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ
ನಿನ್ನೀ ಮೈಮಾಟ ಮತ್ತೀ ನೋಟ ಇವಿರುವುದೇ ನನಗಾಗಿ (೨)
ಈ ಕೇಶರಾಶಿಯ ಕರಿ ನೆರಳೂ ಇರುವುದು ನನ್ನ ಸಲುವಾಗಿ
ನಿನ್ನೀ ಅಧರ ಮತ್ತೀ ತೋಳುಗಳ ಸೌಭಾಗ್ಯವೂ ನನಗಾಗಿ (೨)
ಆಗಿಂದಾಗ ನನ್ನ ಮನದಲ್ಲೀ ಭಾವನೆ ಮೂಡುತ್ತಿರುತ್ತದೆ
ಈ ಹಾದಿಯಲ್ಲಿ ಶಹನಾಯಿಯ ಧ್ವನಿ ಕೇಳಿಬರುತಿರುವಂತೆ (೨)
- Read more about ನಿನ್ನನ್ನೀ ಭೂಮಿಗೆ ಕರೆ ತಂದಿರುವುದೇ ನನಗಾಗಿ...!
- 14 comments
- Log in or register to post comments
ಮಸುಕು ಕವಿದಿದೆ ನನ್ನ ಮನಸಿಗೆ
ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದು
ಗೆಳತಿ ಅತಿಯಾಗಿ ಕಾಡುತಿದೆ ನಿನ್ನ ನೆನಪುಗಳಿಂದು..
ನಮ್ಮಿಬ್ಬರ ಮೊದಲ ಭೇಟಿಯ ಮಧುರ ಕ್ಷಣಗಳು
ಕೋಗಿಲೆ ಕಂಠದಿಂದ ಹೊರಳಿದ ನಿನ್ನ ಮಧುರ ಮಾತುಗಳು
ಕ್ಷಣದಲ್ಲೇ ಆಕರ್ಷಿತನಾದೆ ನಾ ನಿನ್ನಲ್ಲಿ.
ಪ್ರೀತಿ ಕಂಡೆ ನಿನ್ನ ಪುಟ್ಟ ಬಟ್ಟಲು ಕಂಗಳಲಿ..
ಪ್ರೀತಿ ಎಂದರೆ ಏನೆಂದು ಅರಿಯದ ನನ್ನ ಬಾಳಲ್ಲಿ
ನೀ ಬಿಡಿಸಿದೆ ನನ್ನ ಮನದಲಿ ಪ್ರೀತಿಯ ರಂಗವಲ್ಲಿ.
ನನ್ನ ಪ್ರೀತಿಯ ನಿವೇದನೆ ನಾ ನಿನಗೆ ಮಾಡುವ ಮೊದಲೆ.
ಹೊರಟುಬಿಟ್ಟೆ ನೀ ಎಲ್ಲರನ್ನಗಲಿ..
ಮಸುಕು ಕವಿದಿದೆ ನನ್ನ ಮನಸಿಗೆ ಏಕೋ ಇಂದು
ಗೆಳತಿ ಅತಿಯಾಗಿ ಕಾಡುತಿದೆ ನಿನ್ನ ನೆನಪುಗಳಿಂದು
- Read more about ಮಸುಕು ಕವಿದಿದೆ ನನ್ನ ಮನಸಿಗೆ
- Log in or register to post comments
ಪುಣ್ಯಕೋಟಿಯ ಸಾವಿನಲ್ಲೇ ನಮ್ಮ ರಾಜಕೀಯ ಅಡಗಿದಂತಿದೆ..
ಮರಳುಗಾಡಿನಲ್ಲಿ ಮಲೆನಾಡು!
ಮಲೆನಾಡು ಎಂದಾಕ್ಷಣ ನಮ್ಮ ಕಣ್ಮುಂದೆ ಪಶ್ಚಿಮ ಘಟ್ಟ, ಹಲವಾರು ನದಿಗಳು, ನೂರಾರು ಜಲಪಾತ ಗಳು ಸದಾ ಹಸಿರು ತುಂಬಿರುವ ಗಿರಿಶ್ರೇಣಿ ಗಳು, ದಟ್ಟ ಕಾನನ ಗಳು ಸುಳಿಯುತ್ತವೆ. ಆದರೆ ಈ ಹಸಿರಿಗು ಮತ್ತು ಮರಳುಗಾಡಿಗು ಎತ್ತಣಿದೆತ್ತಣ ಸಂಭಂದ? ಓಮನ್ ದೇಶದ ದಕ್ಷಿಣ ಭಾಗದ ದೋಫರ್ ಎನ್ನುವ ಪ್ರಾಂತ್ಯ ಇಂತಹ ಗಿರಿಶಿಖರಗಳಿಂದ ತುಂಬಿದೆ, ಅಲ್ಲಲ್ಲಿ ಹರಿಯುವ ನದಿಗಳು, ಚಿಕ್ಕ ಚಿಕ್ಕ ಜಲಪಾತಗಳು, ನದಿ ತೊರೆಗಳು ನಮ್ಮ ಮಲೆನಾಡನ್ನು ಜ್ನಾಪಿಸುತ್ತವೆ. ಕಛೆರಿಯ ಕೆಲಸದ ಸಲುವಾಗಿ ಕುಟುಂಬ ಸಮೇತ ಇಲ್ಲಿ ಠಿಕಾಣಿ ಹೂಡಿದ್ದೀನಿ, ಸಾಧ್ಯವಾದಾಗಲೆಲ್ಲ ಇಂತಹ ಸ್ಥಳಗಳಿಗೆ ಹೋಗಿ ಬರುತಿದ್ದೇನೆ. ಸಲಾಲ್ಹ ಎನ್ನುವ ನಗರ ದೋಫರ್ ಪ್ರಾಂತ್ಯದ ರಾಜಧಾನಿ ಹಾಗು ಇದು ಒಮಾನ್ ದೇಶದ ಎರಡನೇ ವಾಣಿಜ್ಯ ನಗರ.
- Read more about ಮರಳುಗಾಡಿನಲ್ಲಿ ಮಲೆನಾಡು!
- 2 comments
- Log in or register to post comments