ಒಂದೆರಡು ಸ್ವಾರಸ್ಯಕರ ಸಂಗತಿಗಳು

ಒಂದೆರಡು ಸ್ವಾರಸ್ಯಕರ ಸಂಗತಿಗಳು

  'ಪಕ್ಷ(ಪಾತ)ಅತೀತ ಮಾಧ್ಯಮ ಎಲ್ಲಿದೆ?’ ಎಂಬ ನನ್ನ ಲೇಖನ ಓದಿ ನನ್ನ ಹಿರಿಯ ಬಂಧು ಹಾಗೂ ವಿದ್ವಾಂಸ ಕೆ.ಚಂದ್ರಶೇಖರ ಕಲ್ಕೂರ ಅವರು ಒಂದೆರಡು ಸ್ವಾರಸ್ಯಕರ ಸಂಗತಿಗಳನ್ನು ಮಿಂಚಂಚೆಯಲ್ಲಿ ನನಗೆ ತಿಳಿಸಿದ್ದಾರೆ. ಅದನ್ನು ನಿಮ್ಮೊಡನೆ ಹಂಚಿಕೊಳ್ಳುತ್ತೇನೆ.

  ಒಮ್ಮೆ ಒಬ್ಬ ಪತ್ರಿಕಾ ಪ್ರತಿನಿಧಿಯು ಆಂಧ್ರದ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ದಿ.ರಾಜಶೇಖರ ರೆಡ್ಡಿಯವರನ್ನುದ್ದೇಶಿಸಿ, "ಆ ವಾರ್ತೆ ಟಿ. ೯ ರಲ್ಲಿ ಬಂದಿದೆ, ಈ ವಾರ್ತೆ ಈ ಟಿವಿ ಯಲ್ಲಿ ಪ್ರಸಾರವಾಗಿದೆ. ಇನ್ನೊಂದು ವಾರ್ತೆ ಈನಾಡು ಪತ್ರಿಕೆಯಲ್ಲಿ ಮುದ್ರಿತವಾಗಿದೆ, ಇತ್ಯಾದಿ,  ಇತ್ಯಾದಿ, ನೀವು ಓದಿಲ್ಲವೇ? ನೋಡಿಲ್ಲವೇ?" ಎನ್ನುವ ಪ್ರಶ್ನೆಗಳ ಸುರಿಮಳೆ ಹಾಯಿಸಿದಳು. ರೆಡ್ಡಿಯವರು ಸಾವಧಾನವಾಗಿ, "ಅಮ್ಮಾ ತಾಯೀ, ನಮ್ಮ ಕಾಲದಲ್ಲಿ ಎರಡು ತೆಲುಗು, ಎರಡು ಆಂಗ್ಲ ಪತ್ರಿಕೆಗಳು ಮತ್ತು ದಿನಕ್ಕೆ ಒಟ್ಟು ಒಂದು ಘಂಟೆ ಕಾಲ ಆಕಾಶವಾಣಿ ವಾರ್ತೆ. ಈಗಲಾದರೋ ಹೇಳ ಹೆಸರಿಲ್ಲದಷ್ಟು ಪತ್ರಿಕೆಗಳು, ಚನಾಲುಗಳು. ಇಡೀ ದಿನ ನಾನು ಅದೇ ಕೆಲಸ ಮಾಡಿದರೂ ಎಲ್ಲಾ ಪತ್ರಿಕೆಗಳನ್ನು ಓದಲೂ ಸಾಧ್ಯವಿಲ್ಲ. ಚನಾಲುಗಳನ್ನು ವೀಕ್ಷಿಸಲೂ ಸಾಧ್ಯವಿಲ್ಲ. ಹಾಗಂತ ನಾನು ಇದಕ್ಕೆಲ್ಲ ವಿರೋಧಿ ಅಂತ ಬರೆದುಬಿಟ್ಟೀಯ! ನನಗೆ ರಾಜಕೀಯ, ನಿನಗೆ ಪತ್ರಿಕೆ. ಇಬ್ಬರದ್ದೂ ವೃತ್ತಿ. ತೆಲುಗು ದೇಶಂ ನ ಬಗ್ಗೆ ಕೇಳಿದರೆ ನನಗೇನು ಗೊತ್ತು? ಇತರ ವಾರ್ತಾ ಸಂಸ್ಥೆಗಳ ಬಗ್ಗೆ ನಿನಗೇನು ಗೊತ್ತು? ವೃತ್ತಿ ಧರ್ಮದಲ್ಲಿ ಎಲ್ಲರೂ ಒಂದೇ" ಎಂದು ಉತ್ತರಿಸಿದರು.
  ರಾಜಕೀಯ ನಾಯಕರು ತಾವು ಕೆಲಸ ಮಾಡುವುದು ದೇಶಕ್ಕಾಗಿ ಎನ್ನುತ್ತಾರೆ. ಮಾಧ್ಯಮದವರು ಪ್ರಜಾಪ್ರಭುತ್ವಕ್ಕಾಗಿ ಎನ್ನುತ್ತಾರೆ. ಪುರೋಹಿತರು ಊರಿಗಾಗಿ ಎನ್ನುತ್ತಾರೆ. ಅರ್ಚಕರು ದೇವರಿಗಾಗಿ ಎನ್ನುತ್ತಾರೆ. ಹೆಂಡತಿಯು ಗಂಡ-ಮಕ್ಕಳಿಗಾಗಿ ಎನ್ನುತ್ತಾಳೆ. ಗಂಡನು ಹೆಂಡತಿ-ಮಕ್ಕಳಿಗಾಗಿ ಎನ್ನುತ್ತಾನೆ. ವಕೀಲರು ಕಕ್ಷಿದಾರರಿಗಾಗಿ ಎನ್ನುತ್ತಾರೆ. ವ್ಯಾಪಾರಸ್ಥರು ಬಳಕೆದಾರರಿಗಾಗಿ ಎನ್ನುತ್ತಾರೆ. ಆದರೆ ’ಎಲ್ಲರೂ ಮಾಡುವುದು ಹೊಟ್ಟೆಗಾಗಿ. ಗೇಣು ಬಟ್ಟೆಗಾಗಿ.’

  ಆಂಧ್ರದ ಬಾರ್‌ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದಾಗ ಅಡ್ವೊಕೇಟ್ ಜನರಲ್ ಬುರ್ರಾ ಸುಬ್ರಹ್ಮಣ್ಯಮ್ ಅವರೊಮ್ಮೆ ಹೇಳಿದ್ದು: "Only 15 days back I have returned from Japan. There the people work hard. They work for the nation. You ask any Japanese 'Why do you work?'  Without an exception the reply is ' I am strong enough to work. My country requires my services. I belong to the Sun Race. My character must reflect His ethos. Country must progress. Its welfare is mine...........'  If you ask any Indian the stock answer is  'My father has not left anything for me. This is my Kharma. Without working I cannot survive’.
ಮಹಾಕವಿ ಶ್ರೀ ಶ್ರೀ (ಶ್ರೀರಂಗಂ ಶ್ರೀನಿವಾಸ ರಾವು) ಎಂದಂತೆ, ’ನರಜಾತಿ ಚರಿತ್ರೆ ಸಮಸ್ತವೂ ಪರಪೀಡೆಯ ಪಾರಾಯಣ. ನರಜಾತಿ ಚರಿತ್ರೆ ಸಮಸ್ತವೂ ಪರಸ್ಪರ ನಿಂದಾರೋಪಣ’.