ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಮ್ಯೂಸಿಕ್ ಹುಚ್ಚಿ

ಕೈಯಲಿ ಸೆಲ್ಲ್ ಫೋನು
ಕಿವಿಯಲಿ ಹೆಡ್ ಫೋನು
ಇದ್ದರೆ ಸಾಕೀ ಹುಡುಗೀಗೆ
ಎದುರಲಿ ಬಸ್ಸಿಗೆ ಬಸ್ಸೇ ಹೊಡೆದರೂ
ಎಚ್ಚರವಾಗದಿ ಮರುಳೀಗೆ

ಅದರ ಟ್ಯೂನಂತೂ ಸೂಪರ್ರು
ಇದರ ಬೀಟ್ಸಂತೂ ಮಾರ್ವಲಸ್
ಅದರ ಪಿಚ್ಚಂತೂ ಆವ್ಸಮ್ಮು
ಇವೇ ಇವಳ ಸ್ವರ ಸಂಪತ್ತು

ಸರಿಗಮ ನುಡಿಯಲು ಬರದಿದ್ರೂ
ಬೇಕು ಕ್ಲಾಸಿಕಲ್ ಸಾಂಗ್ಸು
ರಿದಮಿನ ಗಂಧವೆ ಇರದಿದ್ರೂ
ಬೇಕು ರಾಕಂಡ್ರೋಲ್ ಮ್ಯೂಸಿಕ್ಕು

ಎ ಬಿ ಸಿ ಕಲಿಯದೆ ಇದ್ರೂ
ಬೇಕೀ ಹುಡುಗಿಗೆ ವೆಸ್ಟರ್ನು
ಕ್ಲಾಪು ಹಾಕಲೂ ಬಾರದು ಕೈ
ಸ್ಟೆಪ್ಪು ಹಾಕುವಳು ತೈ ತೈ ತೈ

ತೈ ತಕ ತೈ..

ಏನಾದ್ರೂ ಮಾಡಿ

ಬೆಳಗ್ಗೆ ನಮ್ಮ ದೈನಂದಿನ ಕೆಲಸವಾದ ಕೆರೆತಾವ ಕಾರ್ಯಕ್ರಮ ಮುಗಿಸಿ. ನಮ್ಮ ಹಳ್ಳಿಯ ಪೇಮಸ್ ಫೈವ್ ಸ್ಟಾರ್ ಹೋಟೆಲ್ ನಿಂಗನ ಚಾ ಅಂಗಡಿ ತಾವ ನಮ್ಮ ಗೆಳೆಯರ ಬಳಗ ಸುಬ್ಬ,ನಾನು,ಸೀನ,ತಂತಿ ಪಕಡು, ಕಟ್ಟಿಗೆ ಒಡೆಯೋ ಕಿಸ್ನ, ತಂಬಿಟ್ಟು ರಾಮ, ನೀರಗಂಟಿ ಸಿದ್ದ ಎಲ್ಲಾ ಸೇರಿದ್ವಿ. ರಾಜ್ಯ ಮತ್ತು ದೇಸ ರಾಜಕೀಯದ ಬಗ್ಗೆ ಸಾಕಷ್ಟು ಚರ್ಚೆ ನಡೀತಾ ಇತ್ತು. ನಮ್ಮ ಕಟ್ಟಿಗೆ ಒಡೆಯೋ ಕಿಸ್ನನ ಬಾಯಲ್ಲಿ ಒಬಾಮನ ಹೆಂಡರು ಮಿಷೆಲ್ ಅವಾಗವಾಗ ಬತ್ತಾನೇ ಇದ್ಲು. ಯಾಕೇಂದ್ರೆ ಆ ವಮ್ಮ ಭರತ ನಾಟ್ಯ ಮಕ್ಕಳು ಜೊತೆಗೆ ಯಲ್ಲಮ್ಮ ದೇವರು ಮೈ ಮ್ಯಾಕೆ ಬಂದಂಗೆ ಆಡಿದ್ದು. ಅಟ್ಟೊತ್ತಿಗೆ ನಮ್ಮ ಹಳ್ಳಿ ರಾಜಮ್ಮನ ಅಳಿಯ ಬೆಂಗಳೂರು ನಾಗೇಸ ಬಂದ. ಲೇ ನಾಗೇಸ ಬೆಂಗಳೂರ್ನಾಗೆ ಏನಲಾ ಮತ್ತೀಯಾ ಅಂದ ಸುಬ್ಬ. ನಾನು ಸಾಫ್ಟ್್ವೇರ್ ಇಂಜಿನೀರ್ ಆಗಿದೀನಿ ಅಂದ. ಅಂಗಂದ್ರೆ ಏನಲಾ.

ಸಂಪದ ಸುಧೆ

ಸಂಪದ ವೃಕ್ಷದ ಕೊಂಬೆಗಳು ನಾವು,
ಸಂಪದ ಬಳ್ಳಿಯ ಹೂವುಗಳು ನಾವು
ಸಂಪದ ಗೂಡಿನ ಜೇನುಗಳು ನಾವು
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.

ಎಲ್ಲಿದ್ದರೂ ಹೇಗಿದ್ದರೂ ನಾವೆಲ್ಲರೂ ಸಂಪದಿಗರು.
ನಮ್ಮ ಬರಹಗಳಿಗೆ ಶೃಂಗಾರಗೊಂಡ ವೇದಿಕೆ ಈ ಸಂಪದ..
ಓದುವ ಮನಸಿಗೆ ಮುದ ನೀಡುವ ಬರಹಗಳು
ಬರೆಯುವ ಮನಸಿಗೆ ಉತ್ತೇಜನ ನೀಡುವ ಪ್ರತಿಕ್ರಿಯೆಗಳು
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.
ಹರಿಯಲಿ ಬರಹದ ಸುಧೆ ಸದಾ ಸಂಪದದಲಿ.

ಕನ್ನಡ ನಾಡಿನ ಸೊಗಡನ್ನು ಕನ್ನಡ ನುಡಿಯ ಕಂಪನು ಬೀರುತಿಹುದು
ಕಥೆ,ಕವನ, ಹಾಸ್ಯ, ಅನುಭವ, ಪ್ರವಾಸ, ಚರ್ಚೆ ಒಂದೇ ಎರಡೇ
ಒಂದೇ ಸಾಲಿನಲ್ಲಿ ಹೇಳಲಾಗದಷ್ಟು ವಿಷಯಗಳು

ದೆವ್ವ ಭೂತ ಇದೆಯಾ?

ಮೊನ್ನೆ ಹೀಗೆ ಮನೆಯಲ್ಲಿ ಆಂಗ್ಲ ಚಾನಲ್ ಒಂದರಲ್ಲಿ ದೆವ್ವದ ಸಿನೆಮಾ ನೋಡಿ ಊಟಕ್ಕೆ ಕುಳಿತಾಗ ಅದೇ ದೆವ್ವದ ಬಗ್ಗೆ ಮಾತುಕತೆ ನಡೆಯಿತು. ನಾನು ಈ ದೆವ್ವ ಭೂತ ಎಲ್ಲ ಬರೀ ಭ್ರಮೆ ಎಂದು ನಮ್ಮ ತಂದೆ ಇಲ್ಲಪ್ಪ ಅದೆಲ್ಲ ನಿಜ ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರು.