ನಿಂಬೆರಸದ ಅನ್ನ

ನಿಂಬೆರಸದ ಅನ್ನ

ಸಾಮಗ್ರಿಗಳು

 

ಬೆಳ್ಳುಳ್ಳಿ

ಶುಂಠಿ

ಜೀರಿಗೆ

ಹಸಿಮೆಣಸಿನಕಾಯಿ

ಎಣ್ಣೆ

ಸಾಸಿವೆ

ಕಡಲೆಬೇಳೆ

ಉದ್ದಿನಬೇಳೆ

ಜೀರಿಗೆ

ಕಡಲೆಬೀಜ

ಉಪ್ಪು

ನಿಂಬೆ ರಸ

ಅನ್ನ

ಕೊತ್ತಂಬರಿ ಸೊಪ್ಪು

ಕೊಬ್ಬರಿ ತುರಿ (ಬೇಕಾದರೆ)

 

ಮಾಡುವ ವಿಧಾನ

 


  • ಮಿಕ್ಸಿಗೆ ಬೆಳ್ಳುಳ್ಳಿ, ಶುಂಠಿ, ಜೀರಿಗೆ, ಹಸಿಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಬೇಕು.

  • ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, ಕಡಲೆಬೀಜ ಹಾಕಿ ಇವು ಚಟಪಟ ಅಂದ ಮೇಲೆ ಮಿಕ್ಸಿಯ ಮಿಶ್ರಣ ಹಾಕಿ ಚೆನ್ನಾಗಿ ಕಲಸಿ ಇದಕ್ಕೆ ಅನ್ನ, ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ, ಕೊತ್ತಂಬರಿ ಸೊಪ್ಪು ಹಾಕಿ ಎಲ್ಲವನ್ನು ಚೆನ್ನಾಗಿ ಕಲಸಬೇಕು. ಬೇಕಾದರೆ ಮೇಲೆ ಕೊಬ್ಬರಿತುರಿ ಹಾಕಿಕೊಳ್ಳಬಹುದು.
Rating
No votes yet

Comments