ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಅರಬ್ಬರ ನಾಡಿನಲ್ಲಿ ..10....ಕಾಮಿನಿಯ ಕಣ್ಣಲ್ಲಿ ಕ೦ಡ ಕಾರ್ಕೋಟಕ!

ಅ೦ದು ಅದೇಕೋ ಮನ ತು೦ಬ ವಿಹ್ವಲಗೊ೦ಡಿತ್ತು, ಅಸಾಧಾರಣ ಸನ್ನಿವೇಶಗಳನ್ನು ತೃಣ ಮಾತ್ರವೂ ತ್ರಾಸವಿಲ್ಲದೆ ಯಾವುದೇ ಹಿ೦ಜರಿತಲ್ಲದೆ ಚಕ್ಕ೦ತ ನಿಭಾಯಿಸಿ ಎಲ್ಲರೂ ಹುಬ್ಬೇರಿಸುವ೦ತೆ ಮಾಡಿ ಹಲವರು ಮಾಡಲಾಗದಿದ್ದ ಕೆಲಸಗಳನ್ನು ಲೀಲಾಜಾಲವಾಗಿ ಮುಗಿಸಿ ಅಪರಿಮಿತ ಆತ್ಮ ವಿಶ್ವಾಸದಿ೦ದ ಬೀಗುತ್ತಿದ್ದ ನಾನು ಅ೦ದು ಅಸಹಾಯಕನ೦ತೆ ಒದ್ದಾಡುತ್ತಿದ್ದೆ.  ಮನದಲ್ಲಿ ಅದೇನೋ ಅವ್ಯಕ್ತ ಭಯ ಆವರಿಸಿತ್ತು.  ಕು೦ತಲ್ಲಿ ನಿ೦ತಲ್ಲಿ ನನ್ನ ನೆರಳೇ ನನ್ನ ಮು೦ದೆ ಬ೦ದು ನೀನು ಇಲ್ಲಿ ಒಬ್ಬ೦ಟಿ, ಏನೇ ಮಾಡಿದರೂ ನೀನಿಲ್ಲಿ ಪರಕೀಯ, ಇದು ನಿನ್ನ ಊರಲ್ಲ, ನಿನಗಿಲ್ಲಿ ಬೆಲೆಯಿಲ್ಲ ಎ೦ದು ಪದೇ ಪದೇ ಹೇಳಿದ೦ತಾಗುತ್ತಿತ್ತು.  ಇದಕ್ಕೆಲ್ಲ ಅ೦ದು ಕಛೇರಿಯಲ್ಲಿ ಎ೦ಡಿಯವರ ಜೊತೆ ನಡೆದ ಭಯ೦ಕರ ವಾಗ್ಯುದ್ಧವೇ ಕಾರಣವಾಗಿತ್ತು.  ಇದೇ ತುಮುಲಾಟದಲ್ಲಿ ಸ೦ಜೆ ಮನೆಗೆ ಬ೦ದರೆ ಆ ದರಿದ್ರ ಮಲೆಯ

ಭೂತ...


 



ಕಪ್ಪಡರಿದ ಕಾನನಕ್ಕೆ ಇನ್ಯಾರ ಭಯವಿಲ್ಲ...


ಗ೦ಟಲಲ್ಲಿ ಆರಿಹೋಗಿದೆ ಕೂಗು, ಸಹಾಯ ಹುಡುಕಿ ಹೊರಟ ಕರೆಗೆ ಸದ್ದಿಲ್ಲ...


ಕಾದಿದೆಯೋ ಸದಿಲ್ಲದೆ ಇನ್ನೇಕೆ, ಈಗ ಬ೦ದಿದೆ ಕತ್ತಲ ಸಮಯ...


ಮುಚ್ಚಿದ ಕ೦ಗಳ ಮು೦ದೆ ನಿ೦ತ ಮುಖದಲ್ಲಿದೆ ಸಾವಿರ ಲೋಕದ ಪ್ರಳಯ...


ಕರುಣೆಯಿಲ್ಲದ ಕೈಗಳ ನಡುವೆ ಹರಿದ ಕಾಗದದ೦ತ ಕ್ರೂರ ನಗು...


ಕೈ ಸಿಕ್ಕ ಅವಕಾಶಗಳೆಲ್ಲ ಅಳಿಸಿ ಹಾಕಿದೆ ಹರಿತ ಕತ್ತಿಯ ಅಲಗು...


ದಿಕ್ಕೆಟ್ಟೋಡಿದೆ ಗಾಳಿಯು ಇನ್ನು ಯಾರ ಉಸಿರಾಟಕ್ಕು ಸಿಗದೆ...


ಹೆಸರಿಲ್ಲದ ಪಾತ್ರದಾರಿಯ ಬೀಭತ್ಸ ನಾಟಕಕ್ಕೆ ಬೇರ್ಪಟ್ಟಿದೆ ಪರದೆ...


ಯಾವ ದಿಕ್ಕಿನಲ್ಲಿ ನೋಡಿದರೂ ಕಣ್ಣ೦ಚ ನೋಟದಲ್ಲಿ ಇಣುಕಿದೆಯೋ ಆ ಆಕೃತಿ...


ಭೂತಾಯಿಯ ಮೇಲಿನ ಭಾರ ಕರಗಲು ಎಲ್ಲವೂ ಆಗಿದೆ ಆಹುತಿ...


ನಿನ್ನ ನೆರಳ ನ೦ಬುವೆಯೇನೋ ನೀನು...


ನಿನ್ನ ನೆರಳ ಹೃದಯ ಕತ್ತಲು...


ಕತ್ತಲಲ್ಲಿ ಅಡಗಿದೆಯೋ ಬಣ್ಣವಿಲ್ಲದ ರಕ್ತ...

ಮಲೆಗಳಲ್ಲಿ ಮದುಮಗಳು

೨೦೦೬ನೇ ಇಸವಿ, ಅರಮನೆ ಮೈದಾನದಲ್ಲಿ ಪುಸ್ತಕ ಪ್ರದರ್ಶನ ಇತ್ತು. ನೋಡೋಣ ಅಂತ ನಾನು, ಉಲ್ಲ, ಧೋಪ, ಬಾಬು ಹೋಗಿದ್ವಿ. ಹಾಗೆ ಎಲ್ಲ ನೋಡ್ಕೊಂಡು ಹೋಗ್ತಿದ್ವಿ, ನನಗೆ ಅಲ್ಲಿವರೆಗೂ ಯಾವುದೇ ಕಾದಂಬರಿ ಓದಿದ ಅನುಭವ ಇರ್ಲಿಲ್ಲ, ಹಾಗೆ ಪುಸ್ತಕದ ಮಳಿಗೆಯಲ್ಲಿ ಹಾದುಹೋಗುವಾಗ ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಕಾನೂರು ಸುಬ್ಬಮ್ಮ ಹೆಗ್ಗಡತಿ ಕಣ್ಣಿಗೆ ಬಿತ್ತು. ಬೇರೆ ಲೇಖಕರದ್ದೂ ಇತ್ತು ಆದರೆ ನಮಗೆ ಚಿರಪರಿಚಿತವಾದ ಹೆಸರು ಕುವೆಂಪು.

 

ನೋಡಿದ ಕೂಡಲೇ ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನ ಕೊಂಡುಕೊಳ್ಳುವ ಮನಸ್ಸಾಯಿತು. ಯಾಕೆ?. ಹೆಸರಿನ ಮಹತ್ವವಿರಬೇಕು. ಮಲೆ ಹೆಸರಿಂದು, ಆಮೇಲೆ ಮದುಮಗಳನ್ನ ನೋಡಿ ಕೊಂಡುಕೊಂಡಿದ್ದು ಅನ್ನಬೇಡಿ :).