ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಬೃಂದಾವನಿ ರಾಗದಲ್ಲಿ ನಿಯೋಜಿಸಿರುವ ಒಂದು ಸುಮಧುರ ಚಿತ್ರಗೀತೆ

ಹಳೆಯ ಚಿತ್ರಗೀತೆಗಳ ರಾಗ ಮಾಧುರ್ಯ ಹಾಗು ಭಾವಪೂರ್ಣ ಸಂಯೋಜನೆಯನ್ನು ಎಷ್ಟು ಕೊಂಡಾಡಿದರೂ ಸಾಲದು. ಕಂಠಮಾಧುರ್ಯ ಹಾಗು ಸ್ವರಖಾಚಿತ್ಯತೆ ಇಲ್ಲವೆಂದಲ್ಲಿ ಹಾಡಲು ಅಸಾಧ್ಯವೆಂಬ ವಿಷಯ ಸರಿಯಷ್ಟೆ. ಈ ಒಂದು ಸುಂದರ ಯುಗಳಗೀತೆಯನ್ನು ಬೃಂದಾವನಿ ರಾಗದಲ್ಲಿ ನಿಬದ್ಧಪಡಿಸಲಾಗಿದೆ. ಚಿತ್ರದ ಹೆಸರು ತಿಳಿದಿದ್ದರೆ ಪರಮಸಂತೋಷ. ಇಲ್ಲದಿದ್ದಲ್ಲಿ ನಿಮಗೊಂದು ಕ್ವಿಝ್ ಚಿತ್ರದ ಹೆಸರನ್ನು ತಿಳಿಸಿರಿ

ಓದಲೇಬೇಕಾದ ಪುಸ್ತಕ, ಯೇಗ್ದಾಗೆಲ್ಲಾ ಐತೆ

ಯೇಗ್ದಾಗೆಲ್ಲಾ ಐತೆ, ಪುಸ್ತಕವನ್ನು ಮಂಗಳೂರಿನ ಕನ್ನಡ ಪುಸ್ತಕ ಪ್ರದರ್ಶನದಲ್ಲಿದ್ದ ಮಳಿಗೆಯೊಂದರಿಂದ ಖರೀದಿಸಿದೆ. ಮಾರಿದ ವ್ಯಕ್ತಿ ಪುಸ್ತಕದ ಬಗ್ಗೆ ಪ್ರಶಂಸೆಯ ಮಾತುಗಳನ್ನು ಹೇಳಿದ್ದರಿಂದಲೂ, ಪುಸ್ತಕ ನಿರೀಕ್ಷೆಗೆ ನಿಲುಕದೆ ಇದ್ದರೆ ಹೋಗುವುದು ಐವತ್ತು ರೂಪಾಯಿ ತಾನೇ ಎನ್ನವ nonchalant ಧೋರಣೆಯಿಂದ ಪುಸ್ತಕವನ್ನ ಖರೀದಿಸಿದೆ. ಹಳ್ಳಿಯ ಮಾಸ್ತರರೊಬ್ಬರ ಅನುಭವ ಕಥನ ಈ ಪುಟ್ಟ ಪುಸ್ತಕ. ಗ್ರಾಮವೊಂದರಲ್ಲಿ ಯೋಗಿಯೊಬ್ಬನೊಂದಿಗಿನ ತಮ್ಮ ಸ್ನೇಹದ ಬಗ್ಗೆ, ತಮಗಾದ ಅನುಭವದ ಬಗ್ಗೆ ಸರಳವಾಗಿ ಬರೆದಿದ್ದಾರೆ.   

ನನ್ನೊಲವೆ ........

ನನ್ನೊಲವೆ  ........
 
ಬದುಕ ಹಣತೆಯಲಿ ನಿನ್ನ ಪ್ರೀತಿಯ
ಬತ್ತಿ ಉರಿಯುತಿರಲಿ ..........

ಮೌನದ ಬಿರುಗಾಳಿ ಬೀಸದಿರಲಿ
ವಿರಹದ ಕಹಿ ಅಲೆಗಳು ಬಡಿಯದಿರಲಿ

ಮನ ನಿನ್ನ ನೆನಪಿನಲಿ ರೋದಿಸುವಾಗ
ಕಂಗಳು ನಿನ್ನ ಕಾಣದೆ ಹುಡುಕುವಾಗ
ನಿನ್ನ ಬಿಗಿಯಾದ ತೊಳ ತೆಕ್ಕೆಯಲ್ಲೋಮೆ
ಬಂಧಿಸು  .....ಅಲ್ಲೇ  ಈ ಉಸಿರು ನಿಂತು ಹೋಗಲಿ

ಮಂಗಳೂರು ಹುಡುಗನ ಡೂಡಲ್ ಇಂದು ಗೂಗಲ್ ಮುಖಪುಟದಲ್ಲಿ...

ಚಿತ್ರ ಕೃಪೆ: ದಿ ಹಿಂದು 

 

ಮಂಗಳೂರು ಹುಡುಗನೊಬ್ಬ ಬಿಡಿಸಿರುವ ಚಿತ್ರ ಇಂದು ಗೂಗಲ್ ವೆಬ್ಸೈಟಿಗೆ ಭೇಟಿ ನೀಡುವ ಭಾರತೀಯರಿಗೆಲ್ಲ ಕಾಣುವುದು. ಗೂಗಲ್ ಮಕ್ಕಳ ದಿನಾಚರಣೆಯಂದು ಹಾಕುವ ಲೋಗೋ ವಿನ್ಯಾಸವನ್ನು 'ನವ ಭಾರತ' ಎನ್ನುವ ಥೀಮ್ ಇಟ್ಟುಕೊಂಡು ಮಕ್ಕಳ ಕೈಯಲ್ಲೇ ಮಾಡಿಸುವ ಕ್ರಿಯೇಟಿವ್ ಮಾರ್ಕೆಟಿಂಗ್ ಪ್ರಯತ್ನ ಮಾಡಿದೆ. ಒಟ್ಟು ತಲುಪಿದ ಒಂದು ಲಕ್ಷ ಎಂಟು ಸಾವಿರ ಚಿತ್ರಗಳಲ್ಲಿ ಮಂಗಳೂರು ಹುಡುಗ ಅಕ್ಷಯ್ ರಾಜ್ ಬಿಡಿಸಿರುವ ಈ ಕೆಳಗಿನ ಚಿತ್ರ ಆಯ್ಕೆಯಾಗಿದೆಯಂತೆ.

ಜೀವನ ಪಾಠ

ಹೆದರದಿರು


ಬೆದರದಿರು


ಮುನ್ನಡೆಯ ಹೆಜ್ಜೆಯನ್ನೆಂದೂ ಹಿಂತೆಗೆಯದಿರು


ಇದುವೆ ಛಲದ ತಂತ್ರ


ಇದುವೆ ಗೆಲುವಿನ ಮಂತ್ರ\\


 


ಕೊರಗದಿರು


ಮರುಗದಿರು


ಜೀವನವೇ ಒಂದು ನೋವಿನ ಸಂತೆ


ನಗುವ ಪಡೆದು ನೋವ ಕೊಡುವ ವ್ಯಾಪಾರಿಗಳು ಇಲ್ಲಿ ಬಹಳ


ನೋವ ಪಡೆದು ನಗುವ ಕೊಡುವವರು ಇಲ್ಲಿ ಬಹಳ ವಿರಳ ವಿರಳ\\

ಎಲ್ಲಾ ಪುಟಾಣಿಗಳಿಗೆ ಶುಭಾಶಯಗಳು

ಪಂ. ಜವಹರಲಾಲ ನೆಹರು ರವರ ಜನ್ಮದಿನದ ನೆನಪಿನಲ್ಲಿ ಮಕ್ಕಳ ದಿನಾಚರಣೆ ಆಚರಿಸುತ್ತಿರುವ ಈ ದಿನದಲ್ಲಿ ಎಲ್ಲಾ ಪುಟಾಣಿಗಳಿಗೂ ಅಕ್ಕರೆಯ ಶುಭಾಶಯಗಳು.


-ಕವಿನಾಗರಾಜ್.