ಹೆಂಡತಿ ಹೆಸರು ಬಸವ್ವ ....
ನೋಡುತ್ತಿದ್ದ ಟಿ ವಿ ಬಂದು ಮಾಡಿದ ನನ್ನ ಬಿ ವಿ. ನಾಳೆ ದೀಪಾವಳಿ, ಬೆಳಗ್ಗೆ ಬೇಗ ಏಳಬೇಕು ಎಂದು ಆಜ್ಞೆ ಹೊರಡಿಸಿದಳು. ಬೆಳಗ್ಗೆ ಬೇಗ ಎದ್ದು ನಾನೇ ಟೀ ಮಾಡಲು ಅನುವಾದೆ. ದೇವರ ಮುಂದೆ ಇಟ್ಟ ಸಕ್ಕರೆ ಟೀ ಮಾಡುವ ಪಾತ್ರೆಗೆ ಸುರಿದೆ. ಅಷ್ಟರಲ್ಲಿ ನನ್ನ ಮಡದಿ ರೀ ಅದರಲ್ಲಿ ಇರುವೆ ಇತ್ತು ಹಾಗೆ ಹಾಕಿದಿರಾ? ಎಂದಳು. ಇರಲಿ ಬಿಡೆ ಕಣ್ಣು ಸ್ವಚ್ಛ ಆಗುತ್ತೆ ಎಂದೆ. ಓss.. ಹಾಗಾ, ಟೀ ಕುಡಿದ ಮೇಲೆ, ಇರುವೆ ಕಣ್ಣು ಸ್ವಚ್ಛ ಆಗುತ್ತಾ?. ಅದಕ್ಕೆ ಇರಬೇಕು ನಾನು ಅದನ್ನು ಓಡಿಸಿದರು, ಅಲ್ಲೇ ಸಕ್ಕರೆ ಸವಿಯುತ್ತಾ ಇತ್ತು. ಲೇ ನಾನು ಹೇಳಿದ್ದು ನಮ್ಮ ಕಣ್ಣು ಸ್ವಚ್ಛ ಆಗುತ್ತೆ ಅಂತ ಎಂದೆ. ಅದು ಸರಿ ಅನ್ನಿ, ನಿಮ್ಮ ಕಣ್ಣು ಸ್ವಚ್ಛ ಆಗಬೇಕು. ನೀವು ಇರುವೆ ಹಾಕಿಕೊಂಡು ಟೀ ಮಾಡಿಕೊಳ್ಳಿ. ನಾನು ಬೇರೆ ಟೀ ಮಾಡಿಕೊಳ್ಳುತ್ತೇನೆ ಎಂದಳು.
- Read more about ಹೆಂಡತಿ ಹೆಸರು ಬಸವ್ವ ....
- 12 comments
- Log in or register to post comments