ನನ್ನ ಬಗ್ಗೆ
ನನ್ನ ಬಗ್ಗೆ
ಕತೆ ಬರೆಯಬೇಕೆಂಬ ಆಸೆ ನನಗೂ ಇದೆ, ಆದರೆ ಸಂಕಲ್ಪಕ್ಕೆ ವಿಷಯವೇ ಹೊಳೆಯುತ್ತಿಲ್ಲ ಏನು ಮಾಡಲಿ, ಹಾಗಂತ ಸುಮ್ಮನೆ ಕುಳಿತಿರಲು ಮನಸ್ಸು ಒಪ್ಪುತ್ತಿಲ್ಲ, ಕಾರಣ ನನ್ನ ಸ್ನೇಹಿತರೆಲ್ಲ ಅವರವರ ವಿಚಾರಧಾರೆಗಳನ್ನು ಹರಿಸುತ್ತಿದ್ದರೆ ನಾ ಹೇಗೆ ಸುಮ್ಮನ್ನಿರಲಿ ಹಾಗಾಗಿ ಮನಸಿಗ್ಗೆ ಅನ್ನಿಸುತ್ತಿದ್ದನ್ನ ನಿಮ್ಮ ಮುಂದೆ ಬಿಚ್ಚಿಡುತಿದ್ದೀನಿ. ಹಾ.... ಅಂದ ಹಾಗೆ ನಿಮಗೆ ನನ್ನ ಪರಿಚಯ ಮಾಡಲ್ಲಿಲ್ಲ ಅಲ್ಲವೆ. ಹೇಳಿಕೊಳ್ಳುವಷ್ಟು ಕವಿ ಕೋವಿದ ವಿಶಾರದ ನಾನಲ್ಲ, ಸದ್ಯಕ್ಕೆ ಹೊಟ್ಟೆಪಾಡಿಗಾಗಿ ಬೆಂಗಳೂರಿನ ಮಾಹವೀರ್ ಜೈನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ, ಓದಿರುವುದು ಡಿಪ್ಲೋಮ, ವಾಸ ಬಂದು ಹೊಸಕೆರೆ ಹಳ್ಳಿ ಬೆಂಗಳೂರು.ಇಲ್ಲಿಗೆ ಬಂದು ೩ ವರ್ಷ ಆಯ್ತು ಇದಕ್ಕೆ ಮುಂಚೆ ನೆಲಮಂಗಲದಲ್ಲಿ ವಾಸವಿದ್ದು ಕೆಲಸಕ್ಕೆ ಅಲ್ಲಿನ್ದಲೆ ಓಡಾಡುತಿದ್ದೆ, ಈ ರಸ್ತೆ ಅಗಲೀಕರಣ ಪ್ರಾರಂಭ ಆದಮೇಲೆ ಮನಸ್ಸಿಲ್ಲದಿದ್ದರೂ ಬೆಂಗಳೂರಿಗೆ ಬರಲೇಬೇಕಾಯಿತು ಇನ್ನು ನನ್ನಾ ಪುಟ್ಟ ಸಂಸಾರ ಅಂದ್ರೆ ಮೊದ್ದಾದ ಅಲ್ಲಲ್ಲ ಮುದ್ದಾದ ಮಡದಿ ಹಾಗು ಮಗಳು, ಇದಿಷ್ಟು ನನ್ನ ಕಿರು ಪರಿಚಯ. ಮತ್ತೆ ನಾನು ನೆಲಮಂಗಲದಲ್ಲಿದ್ದೆ ಎಂದೆನಲ್ಲ ಅಲ್ಲಿ ನನಗೆ ‘ಕನ್ನಡ ಗೆಳೆಯರ ಬಳಗದ ‘ಪರಿಚಯ ಮತ್ತು ಬಳಗಕ್ಕೆ ನಿಕಟವರ್ತಿಯಾಗಿ ಕೆಲಸ ಮಾಡುತ್ತಿದ್ದೆ, ಹಾಗಾಗಿ ನಮ್ಮ ಕನ್ನಡ ಸಾಹಿತ್ಯ ಮತ್ತು ಕನ್ನಡ ಗೆಳೆಯರೆಂದರೆ ಆಸಕ್ತಿ ಜಾಸ್ತಿ. ಏಕೆಂದರೆ ನಮ್ಮ ರಾಜರತ್ನಂ ಹೇಳಿರೊ ಹಾಗೆ ನರಕಕ್ಕಿಳಿಸಿ ನಾಲ್ಗೆ ಸೀಳ್ಸಿ ಬಾಯ್ ಹೊಲ್ಸಾಕಿದ್ರೂನೆ ಮೂಗ್ನಲ್ ಕನ್ನಡ ಪದ್ವಾಡ್ತೀನಿ ನನ್ನ ಮನ್ಸನ್ ನೀ ಕಾಣೆ - ಆ ಜಾತಿಗೆ ಸೇರ್ದವ ನಾನು. ಅಯ್ಯಯೊ ಇನ್ನು ಹೇಳೊಕ್ಕೆ ಎಷ್ಟೊಂದಿತ್ತು ಕರ್ತ್ವ್ಯದ ಕರೆ ಬಂದ್ಬ್ಡಿತಲ್ಲ ಸದ್ಯಕ್ಕೆ ನಿಮಗೆ ಕೊರೆಯೊದು ನಿಲ್ಸಿದಿನಿ ಅಂತ ಸಂತೋಷ ಪಡ್ಬೇಡಿ ಮತ್ತೆ ಬಂದೇ ಬರ್ತಿನಿ ಕೆಲ್ಸ ಮುಗಿದ್ಮೇಲೆ ಅಲ್ಲಿವರ್ಗು ರೆಸ್ಟ್ ತಗೊಳಿ
Comments
ಉ: ನನ್ನ ಬಗ್ಗೆ
ಉ: ನನ್ನ ಬಗ್ಗೆ
In reply to ಉ: ನನ್ನ ಬಗ್ಗೆ by RAMAMOHANA
ಉ: ನನ್ನ ಬಗ್ಗೆ
ಉ: ನನ್ನ ಬಗ್ಗೆ