ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸಸ್ಯಾಹಾರಿಯಾಗಬೇಕೆಂದು ಹಿಂದುತ್ವ ಬಯಸುತ್ತದೆಯೇ?

ಸಸ್ಯಾಹಾರಿಯಾಗಬೇಕೆಂದು ಹಿಂದುತ್ವ ಬಯಸುತ್ತದೆಯೇ?


 


     ಇತ್ತೀಚೆಗೆ ಎರಡು ಪ್ರಶ್ನೆಗಳನ್ನು ಕೇಳಲಾಯಿತು: ಹಿಂದುತ್ವ ದೇವರನ್ನು ನಂಬಬೇಕೆಂದು ಬಯಸುತ್ತದೆಯೇ? ಹಿಂದುತ್ವ ಸಸ್ಯಾಹಾರಿಯಾಗಬೇಕೆಂದು ಬಯಸುತ್ತದೆಯೇ? ನನ್ನ ಇತ್ತೀಚಿನ ಲೇಖನದಲ್ಲಿ ಮೊದಲನೆಯ ಪ್ರಶ್ನೆಗೆ ಉತ್ತರಿಸಿದ್ದೇನೆ. ಎರಡನೆಯ ಪ್ರಶ್ನೆಗೆ ಕೆಲವು ಚಿಂತನಗಳನ್ನು ನಿಮ್ಮ ಮುಂದಿಡುತ್ತೇನೆ.

ಬರಲಿರುವ ನನ್ನ ಸಂಪಾದಿತ 'ಹಿಂದೂ' ಹಾಗೆಂದರೇನು. . . . ? ಕೃತಿಯಲ್ಲಿನ ವಾದಗಳ ಒಂದು ನೋಟ, |

ರಿಲೇಟಿವಿಟಿ/ಸಾಪೇಕ್ಷ ಸಿದ್ಧಾಂತನ್ನು ಪ್ರತಿಪಾದಿಸಿದ ಐನ್ಸ್ಟೀನ್ ಎಂಬ ಮಹಾನ್ ವಿಜ್ಞಾನಿಯು ಒಂದು ಸಾರಿ ಗಾಂಧಿಯ ಕುರಿತು-ಒಮ್ಮೆ ಇತಿಹಾಸವನ್ನು ತಿರುವಿ ಹಾಕಿದರೆ ಗಾಂಧಿ ಎಂಬ ಒಬ್ಬ ಧೀಮಂತ, ಮಹಾನ್ ವ್ಯಕ್ತಿ ನಡೆದ ಹೋದ ದಾರಿಯೇ ಅಚ್ಚರಿಯನ್ನು ಮೂಡಿಸುತ್ತದೆ ಎಂದಿದ್ದಾರೆ. ಒಬ್ಬ ಜಗತ್ಪ್ರಸಿದ್ದ ವಿಜ್ಞಾನಿಯೇ ಹೀಗೆ ಹೇಳಿರುವಾಗ ಗಾಂಧಿ ನಿಜವಾಗಿಯೂ ಏನನ್ನು ಸಾಧಿಸಿದ್ದಾರೆ? ಹಾಗೂ ಐನ್ಸ್ಟೀನ್ ಹೇಳಿದ್ದರಲ್ಲಿ ಅಂತಹ ಮಹತ್ವದ ವಿಷಯ ಏನಿದೆ? ಎಂಬ ಪ್ರಶ್ನೆಗಳನ್ನು ನಾವೆಲ್ಲರೂ ಕೇಳಿಕೊಳ್ಳಲೇಬೇಕು. ಹಾಗೆ ನೋಡುವುದಾದರೆ ಇಂದು ನಮಗೆ ಒಪ್ಪಿತವಾಗಿರುವ ರಾಜಕೀಯ ವಿಚಾರಗಳಿಗೆ ವಿರುದ್ಧವಾದ ರಾಜಕೀಯ ವಿಚಾರವು ಗಾಂಧಿಯವರದ್ದಾಗಿದೆ. ಅಹಿಂಸಾ ತತ್ವವೇ ಗಾಂಧಿಯ ಪ್ರಮುಖ ಅಸ್ತ್ರವಾಗಿರುವುದರಿಂದ ಅವರ ವಿಚಾರಗಳನ್ನು ನಾವು ಇಂದು ಪುನರಾವಲೋಕಿಸಬೇಕಾಗಿದೆ.

ಅರುಂಧತಿ ಇತ್ಯಾದಿ ಕುರಿತು ಒಂದು ಸ್ವಾರಸ್ಯಕರ ಲೇಖನ

  ’ಅರುಂಧತಿ ರಾಯ್ ಹೇಳಿದ್ದು ಸರಿ’ ಎಂಬ ನನ್ನ ವಿಡಂಬನೆಗೆ ಪ್ರತಿಕ್ರಿಯೆಯಾಗಿ ನನ್ನೋರ್ವ ಹಿರಿಯ ಬಂಧು, ತೆಲುಗು, ಆಂಗ್ಲ ಭಾಷೆಗಳ ಲೇಖಕ ಹಾಗೂ ಆಂಧ್ರಪ್ರದೇಶದ ’ಗಾಡಿಚರ್ಲ ಫೌಂಡೇಶನ್‌’ನ ಅಧ್ಯಕ್ಷ ಕೆ.ಚಂದ್ರಶೇಖರ ಕಲ್ಕೂರ ಅವರು ನನಗೆ ಸುದೀರ್ಘ ಮಿಂಚಂಚೆ ಕಳಿಸಿದ್ದಾರೆ. ಅದರ ಆಯ್ದ ಭಾಗವನ್ನಿಲ್ಲಿ ನೀಡಿದ್ದೇನೆ. ಕೆ.ಸಿ. ಕಲ್ಕೂರ ಅವರ ನುಡಿಗಳಲ್ಲೇ ಇದನ್ನು ಓದಿ.

*೦*

ಸ೦ಪದ ಸಮ್ಮಿಲನ

ಆತ್ಮೀಯರೇ
ಸ೦ಪದ ಸಮ್ಮಿಲನದ ದಿನಾ೦ಕ ಸಮಯವನ್ನು ಈಗಾಗಲೇ ಹಾಕಿಯಾಗಿದೆ.
ಸಮ್ಮಿಲನದಲ್ಲಿನ ಕಾರ್ಯಕ್ರಮಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಿಳಿಸಿ.
ಸ೦ಪದಿಗರೇ ಮು೦ದೆ ನಿ೦ತು ನಡೆಸಬೇಕಾದ ಕಾರ್ಯವಾದ್ದರಿ೦ದ ಒಬ್ಬರೇ ನಿರ್ಧಾರ ತೆಗೆದುಕೊಳ್ಳುವುದು ಸಮ೦ಜಸವಲ್ಲ
ಸ೦ಪದದ೦ಗಳದಲ್ಲಿ ಚಿಲಿಪಿಲಿಗುಡುವ ಸ೦ಪದಿಗರು, ದಯವಿಟ್ಟು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಕಾರ್ಯಕ್ರಮಗಳ ಪಟ್ಟಿಯನ್ನೂ ತಿಳಿಸಿ
ಬರಿಯ ಕಥಾವಾಚನ ಕವನ ವಾಚನ ಸ೦ವಾದಗಳು ಇಷ್ಟೇ ಸಾಕೇ? ಅಥವಾ ಆಟೋಟಗಳ೦ಥವು ಬೇಕೇ?



ಪದಬ೦ಧ ಬಿಡಿಸುವುದು.


 


ರಸಪ್ರಶ್ನೆ (ಕನ್ನಡ ಸಾಹಿತ್ಯ ಕುರಿತಾಗಿ) ಇತ್ಯಾಗಳು ಇರಲೇ?


 

ನಾಡಿಗರಿಗೆ ಈ ಐಡಿಯಾ ಬಂದದ್ದು ಹೇಗೆ ಗೊತ್ತಾ

ಬೆಳಗ್ಗೆನೇ ನಾಡಿಗರು ಪೋನ್ ಮಾಡಿದ್ರು. ಕೋಮಲ್ ಸಂಪದವನ್ನು ಹೊಸ ಮಾದರಿಯಲ್ಲಿ ಮಾಡಬೇಕು ಅಂತಾ ಇದೀನಿ. ನಿಮಗೆ ಏನಾದ್ರೂ ಹೊಸಾ ಐಡಿಯಾ ಇದ್ರೆ ಹೇಳಿ ಅಂದ್ರು. ಸಾ ನಾನು ಪೆದ್ದ, ಇದರ ಬಗ್ಗೆ  ನಂಗೇನೂ ಗೊತ್ತಾಗಕ್ಕಿಲ್ಲ ಅಂದೆ. ಅದೂ ನನಗೂ ಗೊತ್ತು. ಹಳ್ಳಿಯವರಿಗೆ ಏನು ಇಷ್ಟ ಅಂತ ತಿಳಿದುಕೊಳ್ಳಕ್ಕೆ ಪೋನ್ ಮಾಡಿದೆ. ಸರಿ ನಾಳೆ ನಿಮ್ಮ ಹಳ್ಳಿಗೆ ಬರ್ತೀನಿ. ನಿಮ್ಮ ವಾಸನೆ ಗೌಡಪ್ಪನ ಮನೇಲಿ ಎಲ್ಲಾ ಸೇರೋಣ ಅಂದ್ರು.

ಶಂಕರ್ ನಾಗರಕಟ್ಟೆ


 


ಶಂಕರ್ ನಾಗರಕಟ್ಟೆ (ಶಂಕರ್ ನಾಗ್) ಜನನ - ೦೯ ನವೆಂಬರ್ ೧೯೫೪.


 


ಇಂದು ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕ ನಟ ಶಂಕರ್ ನಾಗ್ ಅವರ ೫೭ ನೆ ಜನ್ಮದಿನ. ಆತ ಇಂದು ನಮ್ಮೊಡನೆ ಇದ್ದಿದ್ದರೆ ಅದರ ಸಂಭ್ರಮವೇ ಬೇರೆ.... ಕನ್ನಡ ಚಿತ್ರರಂಗವನ್ನು ಒಂದು ಮಟ್ಟಕ್ಕೆ ತಂದು ನಿಲ್ಲಿಸಿದ ಖ್ಯಾತಿ ಇವರಿಗೆ ಸಲ್ಲುವುದು..ನಟನಾಗಿ,


ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ...ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ


ಪಾದಾರ್ಪಣೆ ಮಾಡಿದ ಈತ ಮತ್ತೆ ತಿರುಗಿ ನೋಡಲಿಲ್ಲ..ಮಿಂಚಿನ ಓಟ ಚಿತ್ರದ ಮೂಲಕ ನಿರ್ದೇಶಕನಾಗಿ ಪ್ರಥಮ ಪ್ರಯತ್ನದಲ್ಲೇ


ಏಳು ರಾಜ್ಯ ಪ್ರಶಸ್ತಿ ಗಳಿಸಿದ ಪ್ರತಿಭಾವಂತ. ಇವರ ನಿರ್ದೇಶನಕ್ಕೆ ಉದಾಹರಣೆಗಳು ಮಿಂಚಿನ ಓಟ, ಜನ್ಮ ಜನ್ಮದ ಅನುಬಂಧ, ಆಕ್ಸಿಡೆಂಟ್,